Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕೇರಳ: ತಿರುವನಂತಪುರಂನಲ್ಲಿರುವ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ನಾಯಕರು ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿದ್ದಾರೆ.
ಈ ವಿಡಿಯೋ ಭಾರೀ ವೈರಲ್ ಆಗಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಕೇರಳದಲ್ಲಿ ಭಾನುವಾರ ನಡೆದ ಪಕ್ಷದ 140ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿದ್ದಾರೆ ಎಂದು ಹೇಳಲಾಗುತ್ತಿದೆ. ವರದಿಯಾದ ನಂತರ ಕಾಂಗ್ರೆಸ್ ತೀವ್ರ ಮುಜುಗರದ ಪರಿಸ್ಥಿತಿಗೆ ಸಿಲುಕಿತು ಎನ್ನಲಾಗಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಸೇರಿದಂತೆ ಹಲವಾರು ಹಿರಿಯ ನಾಯಕರು ಭಾಗವಹಿಸಿದ್ದರು.
ಪಕ್ಷದ ನಾಯಕರು ರಾಷ್ಟ್ರಗೀತೆ ಹಾಡಲು ಸಿದ್ಧರಾಗುತ್ತಿದ್ದಂತೆ, ಪ್ರಮುಖ ಗಾಯಕ ಜನ-ಗಣ-ಮನ-ಅಧಿನಾಯಕ ಜಯ ಹೇ ಎಂಬ ಸರಿಯಾದ ಆರಂಭಿಕ ಸಾಲಿನ ಬದಲು ತಪ್ಪಾಗಿ ಜನ-ಗಣ-ಮಂಗಳ-ದಾಯಕ ಜಯ ಹೇ ಎಂದು ಪ್ರಾರಂಭಿಸಿದ್ದಾರೆ. ಇದೀಗ ಎಲ್ಲೆಡೆ ಭಾರೀ ಟೀಕೆ ವ್ಯಕ್ತವಾಗಿದೆ.
ವಿ.ಎಂ. ಸುಧೀರನ್, ಪಿ.ಸಿ. ವಿಷ್ಣುನಾಥ್ ಶಾಸಕ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ದೀಪಾ ದಾಸ್ ಮುನ್ಶಿ ಸೇರಿದಂತೆ ಪಕ್ಷದ ಅನೇಕ ಹಿರಿಯ ನಾಯಕರ ಸಮ್ಮುಖದಲ್ಲಿ ಈ ದೋಷ ಸಂಭವಿಸಿದೆ.