Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ದಳಪತಿ ವಿಜಯ್ ಅವರು ಸದ್ಯ ಕೊನೆಯ ಸಿನಿಮಾಗಳನ್ನು ಮಾಡಿ ಮುಗಿಸುವುದರಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಇಷ್ಟೇ ಅಲ್ಲದೆ ನಟ ರಾಜಕೀಯ ಚಟುವಟಿಗಳಲ್ಲಿ ಹೆಚ್ಚು ಗಮನ ಹರಿಸಿ ಕೆಲಸ ಮಾಡುತ್ತಿದ್ದಾರೆ. ನಟ ತಾನು ಚಿತ್ರರಂಗ ಬಿಡುವುದಾಗಿಯೂ ಈಗಾಗಲೇ ಹೇಳಿದ್ದಾರೆ.
ಅವರು ಇತ್ತೀಚೆಗೆ ಮಲೇಷ್ಯಾದಲ್ಲಿ ‘ಜನ ನಾಯಗನ್’ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿ ಆದರು. ಅವರು ಭಾನುವಾರ ರಾತ್ರಿ ಮಲೇಷ್ಯಾದಿಂದ ಚೆನ್ನೈಗೆ ಬಂದರು. ವಿಜಯ್ ಅವರನ್ನು ಸ್ವಾಗತಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಪೊಲೀಸರು ಅವರನ್ನು ನಿಯಂತ್ರಿಸಲು ಪ್ರಯತ್ನಿಸಿದರೂ, ಅವರೆಲ್ಲರೂ ಒಮ್ಮೆಲೇ ಒಟ್ಟುಗೂಡಿದರು. ಈ ವೇಳೆ ವಿಜಯ್ ಬಿದ್ದರು. ಇದರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಭಾರೀ ಭದ್ರತೆಯ ನಡುವೆ ನಾಯಕ ವಿಜಯ್ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಾಗ, ಅಭಿಮಾನಿಗಳು ಇದ್ದಕ್ಕಿದ್ದಂತೆ ಅವರ ಕಡೆಗೆ ಧಾವಿಸಿದರು. ವಿಜಯ್ ತಮ್ಮ ಕಾರಿನ ಕಡೆಗೆ ಹೋಗುತ್ತಿದ್ದಾಗ, ಅಭಿಮಾನಿಗಳು ಅವರನ್ನು ಮುಂದಕ್ಕೆ ತಳ್ಳಿದಾಗ ಅವರು ಜಾರಿ ಬಿದ್ದರು. ಭದ್ರತಾ ಸಿಬ್ಬಂದಿ ತಕ್ಷಣ ಅವರಿಗೆ ಸಹಾಯ ಮಾಡಲು ಧಾವಿಸಿದರು. ವಿಜಯ್ ಅವರನ್ನು ಮೇಲಕ್ಕೆತ್ತಿ ಸುರಕ್ಷಿತವಾಗಿ ಕಾರಿಗೆ ಹತ್ತಿಸಿದ್ದಾರೆ.