Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹಸು ಸಗಣಿಯಿಂದ ಹಾಸಿಗೆ, ಸೀಟ್ ಕವರ್ ತಯಾರಿಕೆ: ಪೇಟೆಂಟ್ ಪಡೆಯಲು ಅರ್ಜಿ, ಇವು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದ ತಯಾರಕರು
ಹಸು ಸಗಣಿಯಿಂದ ಹಾಸಿಗೆಗಳು, ಸೀಟಿಂಗ್ ಮ್ಯಾಟ್ರೆಸ್ ತಯಾರಿಸಲಾಗಿದೆ. ಈ ಉತ್ಪನ್ನಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತಯಾರಕರು ಪ್ರತಿಪಾದಿಸಿದ್ದಾರೆ. ಜೊತೆಗೆ ಇವುಗಳ ಪೇಟೆಂಟ್ ಪಡೆಯಲು ಕೂಡ ಮುಂದಾಗಿದ್ದಾರೆ.
ಮಹಾರಾಷ್ಟ್ರದ ಧಂಕವಾಡಿಯಲ್ಲಿ ಹಸುಗಳ ಸಗಣಿಯಿಂದ ಹಾಸಿಗೆ ಮತ್ತು ಸೀಟ್ ಕವರ್ಗಳನ್ನು ತಯಾರಿಸುತ್ತಿರುವುದು ಸದ್ಯ ಎಲ್ಲರ ಗಮನ ಸೆಳೆದಿದೆ.
ದೇಶಿ ಹಸುಗಳ ಸಗಣಿಯಿಂದ ತಯಾರಿಸಲ್ಪಟ್ಟ ಹಾಸಿಗೆಗಳು ಮೂರು-ಆರು ಅಡಿ ಉದ್ದ ಇವೆ. ಹಾಗೆಯೇ ಸಿಂಗಲ್ ಬೆಡ್, ಡಬಲ್ ಬೆಡ್ ಗಾತ್ರಗಳಲ್ಲಿ ಲಭ್ಯ ಇವೆ. ಇನ್ನೂ ಸೀಟ್ ಕವರ್‌ಗಳು ಸಹ ನಿರ್ದಿಷ್ಟ ಗಾತ್ರದಲ್ಲಿವೆ. ಒಣಗಿದ ಸಗಣಿಯ ಚಿಕ್ಕ ಚಿಕ್ಕ ಚೆಂಡಿನ ಗಾತ್ರದಲ್ಲಿ ತಯಾರಿಸಿದ ಬಳಿಕ ಅವುಗಳನ್ನು ಒಂದಕ್ಕೊಂದು ಜೋಡಿಸಿ ಹೊಲಿಯಲಾಗುತ್ತದೆ. ಇಲ್ಲಿ ಮಹಿಳಾ ಕಾರ್ಮಿಕರೇ 7-8 ದಿನಗಳಲ್ಲಿ ಇವುಗಳನ್ನು ತಯಾರಿಸುತ್ತಾರೆ. ಹಾಗೆಯೇ ಇಲ್ಲಿ ಪರಿಸರ ಸ್ನೇಹಿ ಜೇಡಿಮಣ್ಣಿನಲ್ಲಿ ಅಡುಗೆ ಪಾತ್ರೆಗಳನ್ನು ಸಹ ಮಾಡಲಾಗುತ್ತದೆ.
ಹಸು ಸಗಣಿಯಿಂದ ಹಾಸಿಗೆಗಳು, ಸೀಟಿಂಗ್ ಮ್ಯಾಟ್ರೆಸ್ ಅಷ್ಟೇ ಅಲ್ಲ, ರಂಗೋಲಿ ವಿನ್ಯಾಸಗಳು, ದೀಪಗಳನ್ನು ಸಹ ದೇವಯಾನಿ ತಯಾರಿಸುತ್ತಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದೇವಯಾನಿ ಅವರು ಕಳೆದ 10 ವರ್ಷಗಳಿಂದ ಪ್ರಯೋಗಾಲಯದಲ್ಲಿ ಪರೀಕ್ಷಿತ ವಸ್ತುಗಳ ಜೊತೆ ಕೆಲಸ ಮಾಡುತ್ತಿದ್ದಾರೆ. ಹಸುವಿನ ಸಗಣಿಯಲ್ಲಿ ಪೊಟ್ಯಾಸಿಯಂ, ರಂಜಕ ಮತ್ತು ಸಾರಜನಕ ಸೇರಿದಂತೆ ಖನಿಜಗಳಿವೆ. ಇದು ಸಸ್ಯ ಬೆಳವಣಿಗೆಗೆ ಮಹತ್ವದ್ದಾಗಿದೆ ಎಂದು ತಂಬೋಲಿ ಹೇಳಿತ್ತಾರೆ.
ಈ ಉತ್ಪನ್ನಗಳ ಬಳಕೆಯಿಂದ ಆರೋಗ್ಯ ಪ್ರಯೋಜನಗಳಿವೆ ಎಂದು ದೇವಯಾನಿ ಹೇಳಿಕೊಂಡಿದ್ದಾರೆ. ಆದಾಗ್ಯೂ, ವೈದ್ಯಕೀಯ ತಜ್ಞರು ಇವುಗಳ ಕುರಿತು ಎಚ್ಚರಿಕೆ ನೀಡಿದ್ದಾರೆ.
“ಇವುಗಳ ಪ್ರಯೋಜನಗಳನ್ನು ನಿರ್ಣಯಿಸಲು ಕನಿಷ್ಠ 1000 ಬಳಕೆದಾರರನ್ನು ಪರೀಕ್ಷಿಸಬೇಕಾಗಿದೆ. ಒಂದು ಉದಾಹರಣೆ ಸಾಕಾಗಲ್ಲ. ಅಧಿಕೃತ ವೈಜ್ಞಾನಿಕ ಸಂಶೋಧನೆಯಿಂದ ದೃಢಪಡುವವರೆಗೆ ಇಂತಹ ಹೇಳಿಕೆಗಳನ್ನು ಸ್ವೀಕರಿಸಬಾರದು” ಎಂದು ಪುಣೆಯ ಕಮಲಾ ನೆಹರು ಆಸ್ಪತ್ರೆಯ ವೈದ್ಯಕೀಯ ವಿಭಾಗದ ಎಂಡಿ ಡಾ. ಸುಮಿತ್ ಜವಾರ್ ತಿಳಿಸಿದರು.
ರೇಬಿಸ್ ಸೋಂಕಿತ ನಾಯಿ ಕಚ್ಚಿದ ಎಮ್ಮೆಯ ಹಾಲಿನಿಂದ ತಯಾರಿಸಿದ ರಾಯ್ತ ಸೇವಿಸಿದ 200 ಮಂದಿ; ಆಮೇಲೆನಾಯ್ತು?