Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು:ಹೊಸ ವರ್ಷದ ವಿಶ್ ಮೆಸೇಜ್ ಓಪನ್ ಮಾಡೋ ಮುನ್ನ ಎಚ್ಚರಕೆ ವಹಿಸಬೇಕಿದೆ. ಹಿಂದೆ ಮುಂದೆ ನೋಡದೇ ಮೆಸೇಜ್ ಓಪನ್ ಮಾಡಿದ್ರೆ ಖಾತೆಗೆ ಕನ್ನ ಬೀಳುವುದು ಫಿಕ್ಸ್ . ಡಿಫೆರೆಂಟ್ ಡಿಫೆರೆಂಟ್ ಕಲರ್ ಪುಲ್ ಹೊಸ ವರ್ಷದ ಶುಭಾಶಯಗಳ ಎಪಿಕೆ ಓಪನ್ ಬಗ್ಗೆ ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದು, ಹೊಸ ವರ್ಷದ ಸಂಭ್ರಮದಲ್ಲಿ ನಿಮ್ಮ ಬಾಳು ಕತ್ತಲಾದಿತು ಹುಷಾರ್ ಎಂದಿದ್ದಾರೆ.
ಎಪಿಕೆ ಫೈಲ್ ಮೂಲಕ ಹೊಸ ವರ್ಷದ ಶುಭಾಶಯಗಳ ಕಳಸಿ ನಿಮ್ಮ ಖಾತೆಗೆ ಕನ್ನ ಹಾಕುತ್ತಾರೆ. ಅಪ್ಪಿ ತಪ್ಪಿ ಹೊಸ ವರ್ಷದ ಶುಭಾಶಯಗಳು ಎಪಿಕೆ ಫೈಲ್ ನಲ್ಲಿ ಓಪನ್ ಮಾಡದಂತೆ ತಜ್ಞರ ಸಲಹೆ ನೀಡಿದ್ದಾರೆ. ಇನ್ನು ಹೊಸ ವರ್ಷದ ಗಿಫ್ಟ್ ಕೂಪನ್ ಸಿಗುತ್ತೆ ಆಫರ್ ಸಿಗುತ್ತೆ ಅಂತಾ ಹಿಂದೆ ಮುಂದೆ ನೋಡದೆ ಅಪರಿಚಿತ ವೆಬ್ ಸೈಟ್ ಮೇಲೆ ಲಿಂಕ್ ಕ್ಲಿಕ್ ಮಾಡಬೇಡಿ ಅಂತಿದ್ದಾರೆ ಸೈಬರ್ ತಜ್ಞರು.
ಹೊಸ ವರ್ಷದ ಟೈಮ್ನಲ್ಲಿ ಕಲರ್ ಪುಲ್ ಶುಭಾಶಯಗಳನ್ನ ಕಳಿಸಲು ಎಪಿಕೆ ಫೈಲ್ ಬಳಸುತ್ತಾರೆ. ಇದು ಅಪಾಯಕ್ಕೆ ಅವಕಾಶ ಮಾಡಿಕೊಡಬಹುದು. ಯಾಕಂದ್ರೆ ಈ ಫೈಲ್ ಅಥವಾ ಅ್ಯಪ್ ಮೂಲಕ ಹ್ಯಾಕ್ ಮಾಡಿ ನಿಮ್ಮ ಖಾತೆಗೆ ಕನ್ನ ಹಾಕಬಹುದು. ಅಪ್ಪಿ ತಪ್ಪಿ ಗಿಫ್ಟ್ ಕೋಪನ್ ಸಿಗುತ್ತೆ ಆಫರ್ ಸಿಗುತ್ತೆ ಅಂತಾ ಹಿಂದೆ ಮುಂದೆ ನೋಡದೇ ಅಪರಿಚಿತ ವೆಬ್ ಸೈಟ್ ಮೇಲೆ ಲಿಂಕ್ ಕ್ಲಿಕ್ ಮಾಡಿದ್ರೆ ಮೋಸದ ಜಾಲಕ್ಕೆ ಬೀಳೋದು ಫಿಕ್ಸ್.