Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕರ್ನಾಟಕ > ಗವಿಮಠದ ಜಾತ್ರೆಯಲ್ಲಿ ದಾಸೋಹದ ವ್ಯವಸ್ಥೆ ಹೇಗಿರುತ್ತೆ?; ಈ ಬಾರಿ ಭಕ್ತರಿಗೆ ಏನು ಸ್ಪೆಷಲ್ ಇರುತ್ತೆ?
ಕರ್ನಾಟಕಪ್ರಮುಖ

ಗವಿಮಠದ ಜಾತ್ರೆಯಲ್ಲಿ ದಾಸೋಹದ ವ್ಯವಸ್ಥೆ ಹೇಗಿರುತ್ತೆ?; ಈ ಬಾರಿ ಭಕ್ತರಿಗೆ ಏನು ಸ್ಪೆಷಲ್ ಇರುತ್ತೆ?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಕೊಪ್ಪಳ: ದಕ್ಷಿಣ ಭಾರತ ಕುಂಭಮೇಳ ಎಂದು ಹೆಸರಾಗಿರುವ ಗವಿಮಠದ ಜಾತ್ರೆಗೆ ದಿನಗಣನೆ ಶುರುವಾಗಿದೆ. ಮಠದ ಜಾತ್ರೆಗೆ ಲಕ್ಷ ಲಕ್ಷ ಜನ ಬರುತ್ತಾರೆ. ರಥೋತ್ಸವದ ವೈಶಿಷ್ಟ್ಯವೇ ಮಠದ ದಾಸೋಹ. ಹೀಗಾಗಿ ಮಠದ ಆವರಣದಲ್ಲಿ ಮಹಾ ದಾಸೋಹಕ್ಕೆ ಅಂತಿಮ ಸಿದ್ದತೆಗಳು ನಡೆಯುತ್ತಿವೆ.

ಲಕ್ಷ ಲಕ್ಷ ಜನ ಬರುವ ಜಾತ್ರೆಯಲ್ಲಿ ನಿರಂತರ 18 ದಿನಗಳ ಕಾಲ ದಾಸೋಹ ನಡೆಯಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಭಕ್ತರು ಆ ಜಾತ್ರೆಗೆ ಬರುವ ನೀರಿಕ್ಷೆಯಿದೆ. ಈ ಬಾರಿ ರಥೋತ್ಸವಕ್ಕೂ ಐದು ದಿನ ಮೊದಲೇ ದಾಸೋಹಕ್ಕೆ ಪ್ಲ್ಯಾನ್ ಮಾಡಲಾಗಿದೆ. ಜೊತೆಗೆ ಉತ್ತರ ಕರ್ನಾಟಕದ ಫೇಮಸ್ ಮಿರ್ಚಿ ಕೂಡ ದಾಸೋಹದಲ್ಲಿ ಇರಲಿದೆ. ಸುಮಾರು ಐದು ಲಕ್ಷ ಜನರಿಗೆ ಮಿರ್ಚಿ ಉಣಬಡಿಸಲು ಭಕ್ತ ಸಮೂಹ ಸಿದ್ಧವಾಗಿದೆ.
ದಕ್ಷಿಣ ಭಾರತದ ಕುಂಭಮೇಳ ಎಂದು ಹೆಸರಾಗಿರುವ ಕೊಪ್ಪಳದ ಗವಿಮಠದ ಜಾತ್ರೆಗೆ ದಿನಗಣನೆ ಶುರುವಾಗಿದೆ. ಜನವರಿ 5ರಂದು ಗವಿ ಮಠದ ಜಾತ್ರೆಗೆ ಕೊಪ್ಪಳ ಜಿಲ್ಲೆಯವರೇ ಆದ ರಾಜ್ಯಪಾಲರಾಗಿರುವ ವಿಜಯ್ ಶಂಕರ್ ಅವರು ಚಾಲನೆ ನೀಡಲಿದ್ದಾರೆ. ಕೊಪ್ಪಳದ ಗವಿ ಮಠದ ಜಾತ್ರೆ ಅಂದ್ರೆ ಅದು ದಾಸೋಹ. ಜಾತ್ರೆಯಲ್ಲಿ ಲಕ್ಷ ಲಕ್ಷ ಜನರಿಗೆ ಊಟ ಬಡಿಸಲಾಗತ್ತೆ. ಈಗಾಗಲೇ ಮಹಾ ದಾಸೋಹಕ್ಕೆ ಬೇಕಾದ ಸಿದ್ದತೆಗಳನ್ನ ಮಾಡಿಕೊಳ್ಳಲಾಗ್ತಿದೆ.

ಗವಿ ಮಠದ ಪಕ್ಕದ ಜಾಗದಲ್ಲಿ ಈಗಾಗಲೇ ಊಟದ ಕೌಂಟರ್ಗಳನ್ನ ನಿರ್ಮಾಣ ಮಾಡಲಾಗಿದೆ. ಸುಮಾರು 80 ಕೌಂಟರ್ಗಳನ್ನ ನಿರ್ಮಾಣ ಮಾಡಲಾಗಿದೆ. ಸುಮಾರು 6 ಎಕರೆ ಪ್ರದೇಶದಲ್ಲಿ ದಾಸೋಹಕ್ಕೆ ಸಿದ್ದತೆ ಮಾಡಿಕೊಳ್ಳಲಾಗ್ತಿದೆ. ಈಗಾಗಲೇ ದಾಸೋಹಕ್ಕೆ ಅವಶ್ಯವಿರುವ ಅಕ್ಕಿ ಜೊತೆಗೆ ರೊಟ್ಟಿಗಳನ್ನ ಸಂಗ್ರಹ ಮಾಡಲಾಗಿದೆ. ಅಲ್ಲದೆ 3 ಟನ್ಗಳಷ್ಟು ಕಟ್ಟಿಗೆ ಸಂಗ್ರಹ ಮಾಡಲಾಗಿದೆ. ಜನವರಿ 5ರಂದು ರಥೋತ್ಸವ ಇದ್ದರೂ ಈ ಬಾರಿ ಜನವರಿ 1ರಿಂದ ದಾಸೋಹಕ್ಕೆ ಚಾಲನೆ ನೀಡಲಾಗ್ತಿದೆ. ಜಾತ್ರೆಗಿಂತ ಐದು ದಿನ ಮೊದಲೇ ದಾಸೋಹ ಆರಂಭವಾಗಲಿದೆ. ಈಗಾಗಲೇ ಭಕ್ತರು ಅವರ ಶಕ್ತಿಗಣುಸಾರವಾಗಿ ರೊಟ್ಟಿ, ಅಕ್ಕಿಯನ್ನ ಕೊಟ್ಟು ಹೋಗುತ್ತಿದ್ದಾರೆ.

ಇನ್ನು ಕೊಪ್ಪಳ ಗವಿ ಮಠದ ಜಾತ್ರೆಗೆ ಅದರದ್ದೇ ಆದ ಇತಿಹಾಸವಿದೆ. ಈ ಜಾತ್ರೆಯಲ್ಲಿ ಸುಮಾರು ಐದರಿಂದ ಆರು ಲಕ್ಷ ಜನ ಭಾಗಿಯಾಗ್ತಾರೆ. ಈ ಜಾತ್ರೆಯ ವಿಶೇಷವೇ ಮಾಹಾ ದಾಸೋಹ. ಭಕ್ತರು ಅಜ್ಜನಿಗೆ ಈಗಾಗಲೇ ದಾಸೋಹಕ್ಕೆ ಅವಶ್ಯವಿರುವ ವಸ್ತುಗಳನ್ನ ಮಠಕ್ಕೆ ಅರ್ಪಿಸಿತ್ತಿದ್ದಾರೆ. ಕೊಪ್ಪಳ, ಗದಗ, ಸಿಂಧನೂರ ಭಾಗದಿಂದ ಭಕ್ತರು ರೊಟ್ಟಿಗಳನ್ನ ತಂದು ಕೊಡ್ತಾರೆ. ನಿರಂತರ 18 ದಿನ ನಡೆಯುವ ದಾಸೋಹದಲ್ಲಿ ಸುಮಾರು 10 ರಿಂದ 15 ಲಕ್ಷ ಜನ ಊಟ ಮಾಡಲಿದ್ದಾರೆ.

ದಾಸೋಹದ ಜೊತೆಗೆ ಜಾತ್ರೆಯ ಮತ್ತೊಂದು ವಿಶೇಷ ಮಿರ್ಚಿ. ಗವಿ ಮಠದ ಭಕ್ತರು ಕಳೆದ 10 ವರ್ಷಗಳಿಂದ ರಥೋತ್ಸವದ ಮರುದಿನ ಭಕ್ತರಿಗೆ ಮಿರ್ಚಿ ಉಣಬಡಿಸಲಾಗುತ್ತದೆ. ಈ ಬಾರಿಯೂ ಸುಮಾರು ಐದರಿಂದ ಆರು ಲಕ್ಷ ಜನರಿಗೆ ಮಿರ್ಚಿ ಉಣಬಡಿಸೋದಕ್ಕೆ ಭಕ್ತ ಸಮೂಹ ಪ್ಲ್ಯಾನ್ ಮಾಡಿಕೊಂಡಿದೆ. ಕಳೆದ ವರ್ಷ 20 ಕ್ವಿಂಟಾಲ್ ಹಸೆ ಹಿಟ್ಟು ಬಳಕೆಯಾಗಿತ್ತು. ಈ ಬಾರಿ 25 ಕ್ವಿಂಟಾಲ್ ಹಸೆ ಹಿಟ್ಟು ಬಳಸಲು ಸಿದ್ದರಾಗಿದ್ದಾರೆ.

ದಾಸೋಹದಲ್ಲಿ ಮೈಸೂರ್ ಪಾಕ್
ಒಟ್ಟಾರೆ ಗವಿ ಮಠದ ಜಾತ್ರೆಗೆ ದಿನಗಣನೆ ಶುರುವಾಗಿದೆ. ಈ ಬಾರಿ ದಾಸೋಹದಲ್ಲಿ ಮೈಸೂರ್ ಪಾಕ್ ಕೂಡ ಸಿಗಲಿದೆ. ಸಿಂಧನೂರಿನ ಗವಿ ಮಠದ ಭಕ್ತರು 5 ಲಕ್ಷ ಮೈಸೂರ್ ಪಾಕ್ ನೀಡಲು ಮುಂದಾಗಿದ್ದಾರೆ.

ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ : ಕೋರ್ಟ್ ಆದೇಶ ಉಲ್ಲಂಘಿಸಿ ಮಠದ ಆಸ್ತಿ ಮಾರಾಟ ಆರೋಪ

TAGGED:What will the Dasoh system be like at the Gavi Math fair? Do you know what's special for devotees this time?
Share This Article
Facebook Twitter Copy Link Print
Previous Article KSRTC ಬಸ್‌ನಲ್ಲಿ ಬೆಕ್ಕಿನ ಮರಿಗೂ ಹಾಫ್ ಟಿಕೆಟ್ ನೀಡಿದ ಕಂಡಕ್ಟರ್, ಸೀಟು ಕೊಡದ್ದಕ್ಕೆ ಸಿಟ್ಟು!
Next Article ಉಸ್ಮಾನ್ ಹಾದಿ ಹಂತಕರ ಪೈಕಿ ಇಬ್ಬರು ಮೇಘಾಲಯ ಗಡಿ ಮೂಲಕ ಭಾರತಕ್ಕೆ ಪರಾರಿ: ಢಾಕಾ ಪೊಲೀಸರು

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಕರ್ನಾಟಕಪ್ರಮುಖ

Karnataka weather Report | ಜುಲೈ 25ರವರೆಗೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್: ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ, ಐಎಂಡಿ ಮುನ್ಸೂಚನೆ

2 Min Read
ಪ್ರಮುಖದೇಶವೈರಲ್

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read
ಪ್ರಮುಖ

Want Success in Business? ವ್ಯಾಪಾರದಲ್ಲಿ ಯಶಸ್ಸು ಕಾಣಬೇಕಾ? ಈ ವಾಸ್ತು ಟಿಪ್ಸ್ ತಪ್ಪದೇ ಪಾಲಿಸಿ!

1 Min Read
ಕರ್ನಾಟಕ

Prajwal Revanna : ಚೆನ್ನಮ್ಮ ಅವರ ಅಂತ್ಯಕ್ರಿಯೆ: ಜೈಲಿನಿಂದಲೇ ಅಜ್ಜಿಗೆ ಅಂತಿಮ ನಮನ ಸಲ್ಲಿಸಿದ ಪ್ರಜ್ವಲ್ ರೇವಣ್ಣ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?