Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಚಳಿಗಾಲದಲ್ಲಿ ಬಿಸಿ ನೀರು ಸೇವನೆಯ ಈ ಲಾಭಗಳು ನಿಮಗೂ ಗೊತ್ತಿರಲಿ
ಆರೋಗ್ಯಪ್ರಮುಖ

ಚಳಿಗಾಲದಲ್ಲಿ ಬಿಸಿ ನೀರು ಸೇವನೆಯ ಈ ಲಾಭಗಳು ನಿಮಗೂ ಗೊತ್ತಿರಲಿ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಚಳಿಗಾಲದಲ್ಲಿ ಹೆಚ್ಚಿನ ಜನರು ಉಗುರು ಬೆಚ್ಚನೆಯ ನೀರು ಸೇವಿಸಲು ಬಯಸುತ್ತಾರೆ. ಬಿಸಿನೀರನ್ನು ಸ್ನಾನಕ್ಕೂ ಕೂಡ ಬಳಸುತ್ತಾರೆ.ವೈದ್ಯರ ಪ್ರಕಾರ ಚಳಿಗಾಲದಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯುವುದು ರಕ್ತ ಪರಿಚಲನೆ, ಜೀರ್ಣಕ್ರಿಯೆ, ಕೀಲು ನೋವು, ಚರ್ಮ ಆರೋಗ್ಯ ಮತ್ತು ನಿದ್ರೆಗೆ ಲಾಭಕರವಾಗಿದೆ

ಉಗುರು ಬೆಚ್ಚನೆಯ ನೀರನ್ನು ಕುಡಿಯುವುದರಿಂದ, ದೇಹದ ಚಯಾಪಚಯ ಕ್ರಿಯೆ ಉತ್ತಮವಾಗಿರುತ್ತದೆ. ಇದಲ್ಲದೆ ಬಿಸಿ ನೀರು ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ನೋಡ ವೇಗವಾಗಿ ಸುಡುತ್ತದೆ. ಬಿಸಿನೀರು ಕುಡಿಯುವುದರಿಂದ ವೇಗವಾಗಿ ತೂಕ ಕೂಡ ಇಳಿಕೆಯಾಗುತ್ತದೆ. ಬಿಸಿನೀರು ಮೂತ್ರಪಿಂಡದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇದು ಮಲಬದ್ಧತೆಯನ್ನೂ ಕೂಡ ನಿವಾರಿಸುತ್ತದೆ.

 

ದಿನನಿತ್ಯ ಬಿಸಿನೀರು ಕುಡಿದರೆ ತ್ವಚೆಯ ಶುಷ್ಕತೆ ಕಡಿಮೆಯಾಗಿ ತ್ವಚೆಯನ್ನು ಕಾಂತಿಯುತವಾಗಿಸುತ್ತದೆ ಮತ್ತು ಮಂಕಾಗುತ್ತಿರುವ ತ್ವಚೆಯು ಮತ್ತೆ ಯೌವನಭರಿತವಾಗಿ ಕಾಣಲಾರಂಭಿಸುತ್ತದೆ. ಇದು ದೇಹದಲ್ಲಿ ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಬಿಸಿನೀರು ಹೊಟ್ಟೆಯಲ್ಲಿನ ಗ್ಯಾಸ್ ಸಮಸ್ಯೆಯಿಂದಲೂ ಕೂಡ ಪರಿಹಾರವನ್ನು ನೀಡುತ್ತದೆ.

ಬೆಚ್ಚಗಿನ ನೀರು ಕುಡಿಯುವುದರಿಂದ ಕೆಮ್ಮು ಮತ್ತು ಕಫ ಸಮಸ್ಯೆಗಳು ಕಡಿಮೆಯಾಗುತ್ತವೆ. ಚಳಿಗಾಲದಲ್ಲಿ ಅನೇಕ ಮಂದಿ ಶೀತದ ಸಮಸ್ಯೆಯಿಂದ ಮೂಗು ಮತ್ತು ಗಂಟಲು ಕಟ್ಟಿಕೊಂಡ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದು ಉಸಿರಾಟದ ಸಮಸ್ಯೆಗೆ ಸಹ ಕಾರಣವಾಗುತ್ತದೆ. ಇಂತಹ ಸಮಯದಲ್ಲಿ ಪ್ರತಿದಿನ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಕಫ ಕರಗುತ್ತದೆ ಮತ್ತು ಉಸಿರಾಟದ ಸಮಸ್ಯೆಗಳು ದೂರವಾಗುತ್ತವೆ.

ಚಳಿಗಾಲದಲ್ಲಿ ಅನೇಕ ಮಂದಿ ಮೈ-ಕೈ ನೋವುಗಳಿಂದ ಬಳಲುತ್ತಾರೆ. ವಿಶೇಷವಾಗಿ ಮೊಣಕಾಲುಗಳು, ಕೀಲುಗಳು ಮತ್ತು ಬೆನ್ನಿನಲ್ಲಿ. ಕೀಲು ನೋವಿನಿಂದ ಬಳಲುತ್ತಿರುವವರಿಗೆ ಬೆಚ್ಚಗಿನ ನೀರು ಕುಡಿಯುವುದರಿಂದ ಪರಿಹಾರ ಸಿಗುತ್ತದೆ. ಇದು ಸ್ನಾಯುಗಳನ್ನು ವಿಶ್ರಾಂತಿಗೊಳಿಸಲು ಮತ್ತು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ, ಚಳಿಗಾಲದಲ್ಲಿ ನಮ್ಮ ಚಯಾಪಚಯ ಕ್ರಿಯೆ ಸ್ವಲ್ಪ ನಿಧಾನವಾಗುತ್ತದೆ. ದೇಹದ ಚಯಾಪಚಯ ಕ್ರಿಯೆಯನ್ನು ಸಕ್ರಿಯವಾಗಿಡಲು ಪ್ರತಿದಿನ ಬೆಚ್ಚಗಿನ ನೀರು ಕುಡಿಯುವುದು ತುಂಬಾ ಉಪಯುಕ್ತವಾಗಿದೆ.

 

https://www.newsics.com/2025/12/23/multi-vehicle-accident-two-dead-16-injured/

TAGGED:You should also know these benefits of drinking hot water in winter.
Share This Article
Facebook Twitter Copy Link Print
Previous Article ಸರಣಿ ಅಪಘಾತ: ಇಬ್ಬರು ಸಾವು, 16 ಮಂದಿಗೆ ಗಾಯ
Next Article Gold Rate ಚಿನ್ನದ ಬೆಲೆಯ ಹಾವು-ಏಣಿ ಆಟ : ಬಂಗಾರ-ಬೆಳ್ಳಿ ಇಂದು ಮತ್ತೆ ಏರಿಕೆ

Popular Posts

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read

You Might Also Like

ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read
ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read
ದೇಶಪ್ರಮುಖಮನರಂಜನೆವಿದೇಶ

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?