Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹೊಸ ವರ್ಷಾಚರಣೆಗೆ ಇನ್ನು ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ. ಆದರೆ ಮೊಬೈಲ್ ಬಳಕೆದಾರರಿಗೆ ಬ್ಯಾಡ್ ನ್ಯೂಸ್ ಎಂಬಂತೆ ಭಾರತೀಯ ಟೆಲಿಕಾಂ ಕಂಪನಿಗಳು 2026ರಲ್ಲಿ 4ಜಿ ಮತ್ತು 5 ಜಿ ರೀ ಚಾರ್ಜ್ ಪ್ಲ್ಯಾನ್ ಗಳ ದರವನ್ನು ಶೇ.16ರಿಂದ 20ರಷ್ಟು ಏರಿಕೆ ಮಾಡಲಿದೆ ಎಂದು ಜಾಗತಿಕ ಹೂಡಿಕೆದಾರ ಸಂಸ್ಥೆ ಮೋರ್ಗನ್ ಸ್ಟ್ಯಾನ್ಲಿ ವರದಿ ಮಾಡಿದೆ.
ವರದಿಯ ಪ್ರಕಾರ, ಭಾರತದ ಮಧ್ಯಮ ವರ್ಗದ ಜನರು ಈಗಾಗಲೇ ಪ್ರತೀ ತಿಂಗಳು ತಮ್ಮ ಮೊಬೈಲ್ ಇಂಟರ್ನೆಟ್ ಗಾಗಿ ನೂರಾರು ರೂಪಾಯಿ ಪಾವತಿಸುತ್ತಿದ್ದಾರೆ. ಇದೀಗ 2026 ಭಾರತದ ಲಕ್ಷಾಂತರ ಮೊಬೈಲ್ ಬಳಕೆದಾರರಿಗೆ ಆರ್ಥಿಕ ಬರೆ ಬೀಳಲಿದೆ ಎಂದು ವರದಿ ತಿಳಿಸಿದೆ.
ಭಾರತೀಯ ಟೆಲಿಕಾಂ ಕಂಪನಿಗಳು ರೀ ಚಾರ್ಜ್ ದರ ಹೆಚ್ಚಿಸಲು ಮುಂದಾಗಿದ್ದು, ಇದು ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಎರಡೂ ಬಳಕೆದಾರರ ಮೇಲೆ ಪರಿಣಾಮ ಬೀರಲಿದೆ. ಒಂದು ವೇಳೆ ರೀ ಚಾರ್ಜ್ ದರ ಏರಿಕೆಯಾದರೆ ಇದೂ ಕಳೆದ 8 ವರ್ಷಗಳಲ್ಲಿ ನಾಲ್ಕನೇ ಬಾರಿ ದರ ಏರಿಕೆಯಾದಂತಾಗಲಿದೆ. ಈ ಮೊದಲು 2019, 2021, 2024ರಲ್ಲಿ ಮೊಬೈಲ್ ರೀ ಚಾರ್ಜ್ ದರ ಹೆಚ್ಚಳವಾಗಿತ್ತು.
ಏರ್ ಟೆಲ್, ರಿಲಯನ್ಸ್ ಜಿಯೋ ರೀಚಾರ್ಜ್ ದರ ಏರಿಕೆ?
ಹೆಚ್ಚಿನ ದರ ಏರಿಕೆ ಏರ್‌ಟೆಲ್‌ನ ಪ್ರತಿ ಬಳಕೆದಾರನ ಮೇಲೆ ಪರಿಣಾಮ ಬೀರಲಿದ್ದು, ಇದರಿಂದ ರೀ ಚಾರ್ಜ್ ದರ (ARPU) ಗಮನಾರ್ಹವಾಗಿ ಹೆಚ್ಚಿಸುವ ಸಾಧ್ಯತೆಯಿದೆ. ಉತ್ತಮ ಡೇಟಾ ಬೆಲೆ ನಿಗದಿ, ಪೋಸ್ಟ್ ಪೇಯ್ಡ್ ಬಳಕೆದಾರರ ಸಂಖ್ಯೆ ಮತ್ತು ಹೆಚ್ಚಿನ ರೋಮಿಂಗ್ ಬೇಡಿಕೆಯಿಂದಾಗಿ ಏರ್‌ಟೆಲ್‌ನ ARPU-FY26 ರಲ್ಲಿ 260 ರೂ.ಗಳಿಂದ FY28 ರ ವೇಳೆಗೆ 320 ಕ್ಕಿಂತ ಹೆಚ್ಚಾಗಬಹುದು ಎಂದು ವರದಿ ಅಂದಾಜಿಸಿದೆ.
ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಎರಡಕ್ಕೂ ದರ ಏರಿಕೆ ಸಮಯ ಅನುಕೂಲಕಲ್ಪಿಸಿಕೊಟ್ಟಿದೆ.. ಏಕೆಂದರೆ ಎರಡೂ ಕಂಪನಿಗಳ ಪ್ರಮುಖ 5G ಹೂಡಿಕೆಗಳು ಹೆಚ್ಚಾಗಿ ಪೂರ್ಣಗೊಂಡಿವೆ. ಏತನ್ಮಧ್ಯೆ, ವೊಡಾಫೋನ್ ಐಡಿಯಾ ಈ ಪ್ರಕ್ರಿಯೆಯಲ್ಲಿ ಹೊರಗುಳಿದಿದೆ.
ದೀರ್ಘಾಯುಷಿ ಜಪಾನೀಯರು ಏನು ತಿನ್ನುತ್ತಾರೆ?; ಹೆಚ್ಚು ಕಾಲ ಜೀವಿಸಲು ಈ ರೀತಿ ಮಾಡಿ ಸಾಕು