Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ನೀವು ಸೆಕೆಂಡ್‌ಹ್ಯಾಂಡ್ ವಾಹನ ಖರೀದಿಸುವ ಯೋಚನೆಯಲ್ಲಿದ್ದರೆ ನಿಮಗಿದು ಗುಡ್ ನ್ಯೂಸ್. ನಿಮ್ಮ ಬಜೆಟ್ನಲ್ಲಿ ಕಾರು ಖರೀದಿಸುವ ಯೋಚನೆಯಿದ್ದರೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಬಹುದು. ಸೆಕೆಂಡ್ ಹ್ಯಾಂಡ್ ಕಾರುಗಳ ದರ ಬಹಳಷ್ಟು ಕಡಿಮೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಯೂಸ್ಡ್ ಕಾರುಗಳನ್ನ ಕೊಳ್ಳುವವರಿಗಿಂತ ಮಾರುವವರೇ ಹೆಚ್ಚಾಗಿರುವುದು ಬೆಲೆ ಇಳಿಕೆಗೆ ಕಾರಣವಾಗಿದೆ.
ಬೆಂಗಳೂರಿನ ಗಿಗಾ ಕೆಫೆ ಮತ್ತು ಏರ್‌ಪೋರ್ಟ್ ರಸ್ತೆಯಲ್ಲಿ ಡಿಸೆಂಬರ್ 20ರಂದು ಮೆಗಾ ಸೆಕೆಂಡ್ ಹ್ಯಾಂಡ್ ಕಾರುಗಳ ಹರಾಜನ್ನು ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ಆಯೋಜಿಸಿದೆ.
ಈ ಹರಾಜಿನಲ್ಲಿ 150ಕ್ಕೂ ಅಧಿಕ ಸೆಕೆಂಡ್ ಹ್ಯಾಂಡ್ ಕಾರುಗಳು, ಅಧಿಕೃತ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್‌ಐಎಲ್) ಡೀಲರ್‌ಗಳಿಂದ ಪಾರದರ್ಶಕ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಅತ್ಯುತ್ತಮ ಬೆಲೆಗೆ ವಾಹನಗಳು ದೊರೆಯಲಿವೆ. ವರ್ಷಾಂತ್ಯದ ಸ್ಟಾಕ್ ಕ್ಲಿಯರೆನ್ಸ್ ಡೀಲ್‌ಗಳು ಇವೆ. ಮಾರುತಿ ಮತ್ತು ಬೇರೆ ಬ್ರ್ಯಾಂಡ್ ಕಾರುಗಳ ಸಹ ಇರಲಿವೆ ಎಂದು ತಿಳಿಸಿದೆ.
https://www.newsics.com/2025/12/20/bangalore-air-quality-is-deteriorating/