Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ವಿಪಕ್ಷ ನಾಯಕ `ಉಸ್ಮಾನ್ ಹಾದಿ’ ಗುಂಡಿಕ್ಕಿ ಹತ್ಯೆ : ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ
ಪ್ರಮುಖವಿದೇಶ

ವಿಪಕ್ಷ ನಾಯಕ `ಉಸ್ಮಾನ್ ಹಾದಿ’ ಗುಂಡಿಕ್ಕಿ ಹತ್ಯೆ : ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ

Share
3 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬಾಂಗ್ಲಾದೇಶದಲ್ಲಿ ವಿಪಕ್ಷ ನಾಯಕ ಉಸ್ಮಾನ್ ಹಾದಿ ಹತ್ಯೆ ಬಳಿಕ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಸ್ಟಾರ್ ಹೋಟೆಲ್, ಕಟ್ಟಡಗಳ ಮೇಲೆ ಪ್ರತಿಭಟನಾಕಾರು ದಾಳಿ ನಡೆಸಿದ್ದಾರೆ.

ಹೌದು, ದಿನಕ್ಕೊಂದು ಹಿಂಸಾಚಾರ ಬಾಂಗ್ಲಾದೇಶದಲ್ಲಿ ನಡೆಯುತ್ತಲೇ ಇರುತ್ತದೆ. ಇದೀಗ ಬಾಂಗ್ಲಾದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವು, ಹೊಸ ಹಿಂಸಾತ್ಮಕ ಸಂಘರ್ಷಕ್ಕೆ ದಾರಿಮಾಡಿಕೊಟ್ಟಿದೆ.

ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಆಡಳಿತದ ವಿರುದ್ಧ ಚಳವಳಿಯಲ್ಲಿ ಹಾಗೂ ಭಾರತದ ವಿರೋಧಿ ವಾಕ್ಚಾತುರ್ಯಕ್ಕೆ ಹೆಸರುವಾಸಿಯಾಗಿದ್ದ ಇಂಕ್ವಿಲಾಬ್ ಮಂಚ್ ಸಂಚಾಲಕ ಷರೀಫ್‌ ಉಸ್ಮಾನ್‌ ಸಿಂಗಾಪುರದಲ್ಲಿ ಸಾವನ್ನಪ್ಪಿದ್ದು, ಸಾವಿನ ಬಳಿಕ ಇದೀಗ ಮತ್ತೆ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. 2024ರ ಡಿ.12ರಂದು ಬಾಂಗ್ಲಾದೇಶ ವಿದ್ಯಾರ್ಥಿ ದಂಗೆಯ ನೇತೃತ್ವವಹಿಸಿದ್ದ ಷರೀಫ್ ಉಸ್ಮಾನ್ ಹಾದಿ ಅವರ ಮೇಲೆ, ಕಳೆದ ವಾರ ಮುಸುಕುಧಾರಿಗಳ ಗುಂಪೊಂದು ಗುಂಡಿನ ದಾಳಿ ನಡೆಸಿತ್ತು. ಷರೀಫ್ ಉಸ್ಮಾನ್ ಹಾದಿಅವರಿಗೆ ಸಿಂಗಾಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಸಿಂಗಾಪುರ ಸರ್ಕಾರದ ಮೂಲಗಳು ಖಚಿತಪಡಿಸಿವೆ.
32 ವರ್ಷದ ಯುವ ನಾಯಕನ ಸಾವಿನ ಸುದ್ದಿ ತಿಳಿದ ಕೂಡಲೇ, ಅವರ ಹಂತಕರನ್ನು ಬಂಧಿಸಬೇಕೆಂದು ಒತ್ತಾಯಿಸಿ ಸಾವಿರಾರು ಪ್ರತಿಭಟನಾಕಾರರು ಢಾಕಾ ಮತ್ತು ಬಾಂಗ್ಲಾದೇಶದ ಇತರ ಭಾಗಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಕಳೆದ ವರ್ಷದ ಜುಲೈನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಹಾದಿ ಮುಂಚೂಣಿಯ ನಾಯಕರಾಗಿದ್ದರು.
ಇನ್ನೂ ಪ್ರತಿಭಟನಾಕಾರರು ಪ್ರಥಮ್ ಅಲೋ (ದೇಶದ ಅತಿದೊಡ್ಡ ಬಂಗಾಳಿ ಪತ್ರಿಕೆ) ಮತ್ತು ಡೈಲಿ ಸ್ಟಾರ್ ಕಚೇರಿಗಳ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಿದ್ದಾರೆ. ಅಷ್ಟೇ ಅಲ್ಲದೇ ರಾಜ್‌ಶಾಹಿಯಲ್ಲಿರುವ ಶೇಖ್‌ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷದ ಕಚೇರಿಗೂ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಈ ಮಧ್ಯೆ ಹಿಂಸಾಚಾರ ಹತ್ತಿಕ್ಕಲು ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನುಸ್‌ ಢಾಕಾದಲ್ಲಿ ರಾಜ್ಯಮಟ್ಟದ ಸಭೆ ಕರೆದಿದ್ದಾರೆ ಎಂದು ತಿಳಿದು ಬಂದಿದೆ.
ಷರೀಫ್ ಉಸ್ಮಾನ್ ಹಾದಿ ಅವರು ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ವಿದ್ಯಾರ್ಥಿ ಹೋರಾಟಕ್ಕೆ ನಾಯಕತ್ವ ನೀಡಿದ್ದ ಅವರು, ತಮ್ಮ ಅನೇಕ ಭಾಷಣಗಳಲಿ ಭಾರತವನ್ನ ಕುಟುವಾಗಿ ಟೀಕಿಸುತ್ತಿದ್ದರು. ಇನ್ನೂ ನಿನ್ನೆ ತಡರಾತ್ರಿ ಚಿತ್ತಗಾಂಗ್‌ನಲ್ಲಿ ನಡೆದ ಹಿಂಸಾಚಾರದ ವೇಳೆ ಭಾರತ ಹಾಗೂ ಅವಾಮಿ ಲೀಗ್ ವಿರೋಧಿ ಘೋಷಣೆಗಳು ಕೇಳಿಬಂದವು. ಭಾರತೀಯ ಹೈಕಮಿಷನ್‌ ಕಚೇರಿಯ ಹೊರಗೂ ಪ್ರತಿಭಟಿಸಿ ಕಲ್ಲು ತೂರಾಟ ನಡೆಸಿದ್ದರು.
ಬೆಂಕಿಗೆ ಆಹುತಿಯಾದ ಕಚೇರಿಯಿಂದ 30 ಪತ್ರಕರ್ತರ ರಕ್ಷಣೆ
ಬಾಂಗ್ಲಾದೇಶದ ಯುವ ನಾಯಕ 32 ವರ್ಷದ ಶರೀಫ್ ಉಸ್ಮಾನ್ ಹಾದಿ ಅವರ ಸಾವು ದೇಶದಲ್ಲಿ ಹೊಸ ಪ್ರತಿಭಟನೆಗಳಿಗೆ ನಾಂದಿ ಹಾಡಿದೆ. ರಾಜಧಾನಿಯ ಚೌಕದಲ್ಲಿ ನೂರಾರು ಹಾದಿ ಬೆಂಬಲಿಗರು ಜಮಾಯಿಸಿ ಪ್ರತಿಭಟಿಸಿದರು, ಕೆಲವರು ಬಾಂಗ್ಲಾದೇಶದ ಪತ್ರಿಕೆಗಳಾದ ‘ಪ್ರೋಥೋಮ್ ಅಲೋ’ ಮತ್ತು ‘ದಿ ಡೈಲಿ ಸ್ಟಾರ್’ ಕಚೇರಿಗಳನ್ನು ಧ್ವಂಸಗೊಳಿಸಿದರು. ಬಂಗಾಳಿ ಭಾಷೆಯ ದಿನಪತ್ರಿಕೆ ಪ್ರೋಥೋಮ್ ಅಲೋ ಮೇಲೆ ದಾಳಿಯೊಂದಿಗೆ ಇದು ಪ್ರಾರಂಭವಾಯಿತು .
ನೂರು ಪ್ರತಿಭಟನಾಕಾರರು ರಾತ್ರಿ 11 ಗಂಟೆ ಸುಮಾರಿಗೆ ಪ್ರೋಥೋಮ್ ಅಲೋ ಕಚೇರಿಯನ್ನು ತಲುಪಿದರು ಮತ್ತು ನಂತರ ಕಟ್ಟಡವನ್ನು ಸುತ್ತುವರೆದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು, ಪ್ರೋಥೋಮ್ ಅಲೋ ಕಟ್ಟಡದ ಧ್ವಂಸವನ್ನು ಅನುಸರಿಸಿ ಪ್ರತಿಭಟನಾಕಾರರು ದಿ ಡೈಲಿ ಸ್ಟಾರ್ ಕಚೇರಿಗೆ ಬೆಂಕಿ ಹಚ್ಚಿದರು ಎಂದು ಹೇಳಿದರು. ಹೊರಗಿನಿಂದ ಬಂದ ಫೋನ್ ಕರೆಯು ಸಿಬ್ಬಂದಿಗೆ ದಿ ಡೈಲಿ ಸ್ಟಾರ್ ಆವರಣದ ಕಡೆಗೆ ಜನಸಮೂಹ ಚಲಿಸುತ್ತಿದೆ ಎಂದು ಎಚ್ಚರಿಸಿದೆ ಎಂದು ಪತ್ರಕರ್ತರೊಬ್ಬರು ತಿಳಿಸಿದರು. ಸುದ್ದಿ ಕೊಠಡಿಯ ಸಿಬ್ಬಂದಿ ಕೆಳಗಡೆಗೆ ಸ್ಥಳಾಂತರಗೊಳ್ಳಲು ಪ್ರಯತ್ನಿಸಿದರು ಆದರೆ ಗುಂಪು ಕಚೇರಿ ಕಟ್ಟಡದ ನೆಲ ಮತ್ತು ಮೊದಲ ಮಹಡಿಗಳನ್ನು ಧ್ವಂಸಗೊಳಿಸಲು ಪ್ರಾರಂಭಿಸಿತು, ನಂತರ ಅದಕ್ಕೆ ಬೆಂಕಿ ಹಚ್ಚಿತು.

https://x.com/PTI_News/status/2001733798573359363?ref_src=twsrc%5Etfw%7Ctwcamp%5Etweetembed%7Ctwterm%5E2001733798573359363%7Ctwgr%5E9ae4d9cda32e05979a8d61d15c049c1e8d40426d%7Ctwcon%5Es1_c10&ref_url=https%3A%2F%2Fapi-news.dailyhunt.in%2F

TAGGED:protestsViolence breaks out again in Bangladesh after opposition leader Usman Hadi's killing
Share This Article
Facebook Twitter Copy Link Print
Previous Article ಮೊಸರನ್ನು ಹೀಗೆ ಸೇವಿಸಿ ನೋಡಿ; ನಿಮ್ಮ ಕರುಳಿನಲ್ಲಿ ಸಮಸ್ಯೆ ‌ಪರಿಹಾರವಾಗುತ್ತೆ
Next Article ಲವ್ ಮ್ಯಾರೇಜ್ ಗೆ ಮುಂದಾಗಿದ್ದ ಮಗಳ ಪ್ರಿಯಕರನ ಕೊಂದ ತಂದೆ

Popular Posts

Spice Price Hike ಗಗನಕ್ಕೇರಿದ ಮಸಾಲೆ ಪದಾರ್ಥಗಳ ಬೆಲೆ, ಕಂಗಾಲಾದ ಜನಸಾಮಾನ್ಯರು

2 Min Read

Swiggy ಸ್ವಿಗ್ಗಿ ಕಿರುಕುಳಕ್ಕೆ ಹೈರಾಣಾದ ಹೋಟೆಲ್ ಮಾಲೀಕರು; ಬೆಂಗಳೂರಲ್ಲಿ ಸ್ವಿಗ್ಗಿ ಬಹಿಷ್ಕಾರದ ಎಚ್ಚರಿಕೆ

1 Min Read

Police Suspended ವಿದ್ಯಾರ್ಥಿಗಳ ಮೇಲೆ AK-47 ನಿಂದ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿ ಅಮಾನತು

2 Min Read

Shocking ಪ್ಯಾಂಟ್ ನಲ್ಲಿ ಮೂತ್ರ ಮಾಡಿದ್ದಕ್ಕೆ 5 ವರ್ಷದ ಬಾಲಕನ ಖಾಸಗಿ ಭಾಗಕ್ಕೆ ಬಿಸಿ ಚಾಕುವಿನಿಂದ ಸುಟ್ಟ ಶಿಕ್ಷಕಿ

1 Min Read

You Might Also Like

ಪ್ರಮುಖಮನರಂಜನೆ

Indian Idol season 16 Winner ಇಂಡಿಯನ್ ಐಡಲ್ 16′ ವಿಜೇತೆ ಜ್ಯೋತಿರ್ಮಯಿ ನಾಯಕ್: ಒಡಿಶಾದ ಗಾಯಕಿಯ ಕನಸು ನನಸಾದ ಕ್ಷಣ

2 Min Read
ದೇಶವಿದೇಶ

PM on Foreign Policy ಒಂದೇ ತಿಂಗಳಲ್ಲಿ ಮೂರು ಜಾಗತಿಕ ಶೃಂಗಸಭೆಗಳು: ಪ್ರಧಾನಿ ಮೋದಿ ಅವರ ಜಾಗತಿಕ ರಾಜತಾಂತ್ರಿಕ ಅಭಿಯಾನಕ್ಕೆ ವೇಗ

3 Min Read
ದೇಶಪ್ರಮುಖವೈರಲ್

Girl embarrassed ನೀಟ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿಗೆ ಬಾಯಿಗೆ ಬಂದಂತೆ ಮಾತನಾಡಿದ್ದ ಹುಡುಗಿ ಸ್ಥಿತಿ ಈಗ ನಾಯಿಪಾಡಂತೆ! ಈಕೆ ಹೇಳಿದ್ದೇನು? ವಿಡಿಯೋ ನೋಡಿ

1 Min Read
ಕರ್ನಾಟಕಆರೋಗ್ಯಪ್ರಮುಖ

HIV TEST ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ! ಯಾಕೆ ಹೀಗೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?