Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಉಕ್ರೇನ್‌ನ ಆಳಸಮುದ್ರ ಡ್ರೋನ್‌ಗಳು, ಕಪ್ಪು ಸಮುದ್ರದ ಬಂದರಿನ ನೊವೊರೊಸಿಸ್ಕ್ ಎಂಬಲ್ಲಿ ರಷ್ಯಾದ ಜಲಾಂತರ್ಗಾಮಿ ನೌಕೆಯನ್ನು ಹೊಡೆದುರುಳಿಸಿವೆ. ಈ ಮೂಲಕ ಇತಿಹಾಸದಲ್ಲಿ ಮೊದಲ ಬಾರಿ ಉಕ್ರೇನ್ ತನ್ನ ಸಬ್ ಸೀ ಬೇಬಿ ಆಳಸಮುದ್ರ ಡ್ರೋನ್‌ಗಳನ್ನು ಬಳಸಿ ರಷ್ಯಾ ಮೇಲೆ ದಾಳಿ ನಡೆಸಿದೆ.
ರಷ್ಯನ್ ಪಡೆಗಳು ಉಕ್ರೇನ್‌ನ ಒಡೆಸಾ ಬಂದರಿನ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕಪ್ಪು ಸಮುದ್ರದಲ್ಲಿ ರಷ್ಯಾ ಹಡಗುಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್ ನೌಕಾ ದಾಳಿ ತೀವ್ರಗೊಳಿಸಿದೆ. ಇತ್ತೀಚೆಗೆ 2 ಟರ್ಕಿಶ್ ಸರಕು ಸಾಗಣೆ ಹಡಗುಗಳ ಮೇಲೆ ದಾಳಿ ಮಾಡಲಾಗಿದೆ. ಇದಕ್ಕೆ ರಷ್ಯಾ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ. 2022ರಲ್ಲಿ ಯುದ್ಧ ಆರಂಭವಾದಾಗಿನಿಂದಲೂ ರಷ್ಯಾ ಹಡಗುಗಳ ಮೇಲೆ ಉಕ್ರೇನ್ ಡ್ರೋನ್ ಮತ್ತು ಕ್ಷಿಪಣಿ ಬಳಸಿ ದಾಳಿ ನಡೆಸುತ್ತಲೇ ಇದೆ.