Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಒಡಿಶಾ: ಮಹಿಳೆಯ ಶಿರವಿಲ್ಲದ ಶವ ಪತ್ತೆಯಾದ ನಂತರ ಒಡಿಶಾದ ಮಲಕನಗಿರಿ ಜಿಲ್ಲೆಯಲ್ಲಿ ಹಿಂಸಾತ್ಮಕ ಘರ್ಷಣೆ ಭುಗಿಲೆದ್ದಿದೆ. ಇದರಿಂದಾಗಿ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಈ ಪ್ರದೇಶದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ವೈಜ್ಞಾನಿಕ ತಂಡ, ಸ್ನಿಫರ್-ಡಾಗ್ ಸ್ಕ್ವಾಡ್ ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯ ಪಡೆ ಸ್ಥಳಕ್ಕೆ ಆಗಮಿಸಿದ್ದು, ನಾಪತ್ತೆಯಾಗಿರುವ ರುಂಡವನ್ನು ಪತ್ತೆಹಚ್ಚಲು ವ್ಯಾಪಕ ಶೋಧ ನಡೆಸುತ್ತಿದೆ.
ತಲೆ ಇಲ್ಲದ ಶವ ಪತ್ತೆಯಾಗಿರುವ ಬುಡಕಟ್ಟು ಮಹಿಳೆಯ ಹತ್ಯೆಯ ಆರೋಪದ ಮೇಲೆ ನಡೆದ ಗುಂಪು ಘರ್ಷಣೆಯ ನಂತರ 2 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಸುಮಾರು 4 ಮನೆಗಳಿಗೆ ಬೆಂಕಿ ಹಚ್ಚಿ ಹಿಂಸಾಚಾರ ನಡೆಸಲಾಗಿದೆ.