Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕಾಲ್ ಮಾಡಿದಾಗಲೆಲ್ಲಾ ಫೋನ್ ಬ್ಯುಸಿ ಬರ್ತಿದೆ ಎಂದು ರೊಚ್ಚಿಗೆದ್ದ ಪ್ರಿಯಕರ ಮಹಿಳೆಯನ್ನೇ ಇರಿದು ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ಪಟ್ಟಣದಲ್ಲಿ ನಡೆದಿದೆ.
42 ವರ್ಷದ ಲಲಿತಾ ಬ್ಯಾಡಗಿ ಎಂಬ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದವನೇ ಆಕೆಯನ್ನು ಬರ್ಬರವಾಗಿ ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ. ಈ ಮಹಿಳೆ ಮೂಲತಃ ಬ್ಯಾಡಗಿ ತಾಲೂಕಿನ ಕೆರೂಡಿ ಗ್ರಾಮದವರಾಗಿದ್ದಾರೆ. ಆರೋಪಿ ಚಂದ್ರಪ್ಪ ಮಹಿಳೆಯ ಕತ್ತು ಕೊಯ್ದು ಕೊಲೆಗೈದಿದ್ದು, ಈತನನ್ನ ಪೊಲೀಸರು ಬಂಧಿಸಿದ್ದಾರೆ.
10 ವರ್ಷಗಳ ಹಿಂದೆಯೇ ಮೃತ ಲಲಿತಾಳ ಗಂಡ ತೀರಿಕೊಂಡಿದ್ದನಂತೆ. ಗಂಡನಿಲ್ಲದೆ ಒಂಟಿಯಾಗಿದ್ದ ಮಹಿಳೆ, ಬದುಕು ಸಾಗಿಸಲೆಂದು ಹೋಟೆಲ್ನಲ್ಲಿ ಕೆಲಸ ಮಾಡ್ತಿದ್ದಳಂತೆ. ಅದೇ ಹೋಟೆಲ್ನಲ್ಲಿ ಅವಿವಾಹಿತ ಚಂದ್ರಪ್ಪ ಕೂಡ ಕೆಲಸಕ್ಕೆ ಸೇರಿದ್ದ. ಹೋಟೆಲ್ನಲ್ಲೇ ಇಬ್ಬರು ಪರಿಚಯವಾಗಿದ್ದು, ಇಬ್ಬರ ನಡುವೆ ಸಲುಗೆ ಬೆಳೆದಿದೆ.
ಇತ್ತೀಚಿಗೆ ಲಲಿತಾ, ಚಂದ್ರಪ್ಪನಿಂದ ಅಂತರ ಕಾಯ್ದುಕೊಂಡಿದ್ದಳಂತೆ. ಆತ ಫೋನ್ ಮಾಡಿದಾಗ ಲಲಿತಾ ರಿಸೀವ್ ಮಾಡಿಲ್ಲ. ಪದೇ ಪದೇ ಫೋನ್ ಮಾಡಿದಾಗ ಬ್ಯುಸಿ ಬ್ಯುಸಿ ಬರ್ತಿದೆ ಎಂದು ಚಂದ್ರಪ್ಪ ಕೋಪಕೊಂಡಿದ್ದು, ಡಿ.07 ರಂದು ಲಲಿತಾಳ ಮನೆಗೆ ಬಂದಿದ್ದ ಆರೋಪಿ ಚಂದ್ರಪ್ಪ. ಆಗಲೂ ಆಕೆಯ ಮೇಲೆ ಅನುಮಾನಪಟ್ಟು ವಾಗ್ವಾದಕ್ಕೆ ಇಳಿದಿದ್ದ. ಈ ವೇಳೆ ಕೈಯಲಿದ್ದ ಚಾಕುವಿನಿಂದ ಕತ್ತು ಕೊಯ್ದು ಕೊಲೆಗೈದಿದ್ದಾನೆ