Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕರ್ನಾಟಕದಾದ್ಯಂತ ಮಳೆ ಅಬ್ಬರ ಕೊನೆಗೊಂಡಿದೆ. ಎಲ್ಲೆಡೆ ಅಧಿಕ ತಾಪಮಾನ ಹಾಗೂ ಅಲ್ಲಲ್ಲಿ ಮೈಕೊರೆವ ಚಳಿಯ ವಾತಾವರಣ ಸೃಷ್ಟಿಯಾಗಿದೆ.ಬೆಳಗ್ಗೆ ದಟ್ಟ ಮಂಜು, ಚಳಿ ಆವರಿಸಿದೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಇದೇ ರೀತಿಯ ವಾತಾವರಣ ಕಂಡು ಬರಲಿದೆ. ಬೆಂಗಳೂರಿನಲ್ಲೂ ಅಧಿಕ ಚಳಿ ಮುಂದುವರಿವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂಜಾನೆಯ ವೇಳೆ ದಕ್ಷಿಣ ಕರ್ನಾಟಕದಲ್ಲಿ ಮಂಜು ಕವಿದ ವಾತಾವರಣ ಇರುವ ಸಾಧ್ಯತೆ ಇದೆ. ರಾಜ್ಯದಾದ್ಯಂತ ಕನಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆಗಳು ಕಂಡುಬರುವುದಿಲ್ಲ.
ಹಾಗೆಯೇ ಕರ್ನಾಟಕದ ಪೂರಾ ವಾತಾವರಣವನ್ನು ಒಮ್ಮೆ ಗಮನಿಸಿದಾಗ ಎಲ್ಲಿಯೂ ಕೂಡ ಮಳೆ ಆಗುವ ಸಂಭವವಿಲ್ಲ. ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಒಣ ಹವೆ ಇರಲಿದೆ.
ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಲಬುರಗಿ, ರಾಯಚೂರು, ಬೀದರ್ ಮತ್ತು ಕೊಪ್ಪಳದಲ್ಲಿ ವಾತಾವರಣವು ಬೆಳಿಗ್ಗೆ ಒಣ ಹವೆಯಿಂದ ಕೂಡಿದರೆ ರಾತ್ರಿ ಹಾಗೂ ಬೆಳಿಗ್ಗೆ ಮಂಜು ಕವಿದ ವಾತಾವರಣವಿದೆ. ಇಲ್ಲಿ ಕೂಡ ಮಳೆ ಬೀಳುವ ಸಂಭವವಿಲ್ಲ. ಆದರೆ ರಾತ್ರಿ ಹಾಗೂ ನಸುಕಿನಲ್ಲಿ ಚಳಿ ತೀವ್ರವಾಗಿರಲಿದೆ.