Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಆಲೂಗಡ್ಡೆಯಿಲ್ಲದ ಅಡುಗೆ ಮನೆ ಇಲ್ಲ ಎಂದೇ ಹೇಳಬಹುದು. ಅನೇಕ ಮನೆಗಳಲ್ಲಿ ಆಲೂಗಡ್ಡೆ ಇಲ್ಲದೇ ದೈನಂದಿನ ಅಡುಗೆಯನ್ನು ಕಲ್ಪಿಸುವುದು ಕಷ್ಟ. ಇಂತಹ ಆಲೂಗಡ್ಡೆ ಮೇಲೆ ಕೆಲವೊಮ್ಮೆ ಮೊಳಗೆ ಬಂದಿರುವುದನ್ನು ನೀವು ಗಮನಿಸಿರಬಹುದು. ಅನೇಕ ಮಂದಿ ಆಲೂಗಡ್ಡೆಯಲ್ಲಿ ಮೊಳಕೆ ಬಂದ ಭಾಗವನ್ನು ಕತ್ತರಿಸಿ ತಿನ್ನುತ್ತಾರೆ.ಅದು ಆರೋಗ್ಯಕ್ಕೆ ಉತ್ತಮವೇ ಎಂಬ ಪ್ರಶ್ನೆ, ಸಂದೇಹ ಹಲವರಲ್ಲಿದೆ. ಇನ್ನೂ ಇದಕ್ಕೆ ಉತ್ತರ ಇಲ್ಲಿದೆ ನೋಡಿ.
ಇವುಗಳ ಸೇವನೆಯಿಂದ ಅಸಿಡಿಟಿ, ಹೊಟ್ಟೆನೋವಿನಂತಹ ಸಮಸ್ಯೆಗಳು ಉಂಟಾಗಬಹುದು. ಅದರಲ್ಲೂ ಗರ್ಭಿಣಿಯರು ಇಂತಹ ಆಲೂಗಡ್ಡೆಗಳನ್ನು ತಿನ್ನುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸುತ್ತಾರೆ.
ಆಲೂಗಡ್ಡೆ ಮೊಳಕೆಗಳು ಸ್ವಲ್ಪಮಟ್ಟಿಗೆ ವಿಷಕಾರಿ ರಾಸಾಯನಿಕಗಳನ್ನು ಹೊಂದಿರುತ್ತವೆ. ಅದಕ್ಕೆ glycoalkaloids ಎಂದು ಇಂಗ್ಲಿಷ್‌ನಲ್ಲಿ ಕರೆಯಲಾಗುತ್ತವೆ. ಇವುಗಳ ಸೇವನೆಯಿಂದ ಆಸಿಡಿಯಂಥ ಸಮಸ್ಯೆಗಳು ಹೆಚ್ಚಾಗುತ್ತವೆ. ಮೊದಲೇ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಅದು ಇನ್ನಷ್ಟು ಉಲ್ಬಣವಾಗುತ್ತದೆ.
ಆದರೆ, ಮೊಳಕೆ ತುಂಬಾ ದೊಡ್ಡದಾಗಿದ್ದರೆ, ಅವುಗಳನ್ನು ಸೇವನೆ ಮಾಡದಿರುವುದೇ ಒಳ್ಳೆಯದು. ಏಕೆಂದರೆ ಮೊದಲೇ ಹೇಳಿದಂತೆ glycoalkaloids ಎನ್ನುವ ವಿಷಕಾರದ ಅಂಶ ದೇಹವನ್ನು ಸೇರುತ್ತದೆ. ಇದು ಆಸಿಡಿಟಿ ಮಾತ್ರವಲ್ಲದೇ, ಹೊಟ್ಟೆ ನೋವು, ವಾಕರಿಕೆ ಮತ್ತು ಇತರ ತೊಂದರೆಗಳನ್ನು ಉಂಟುಮಾಡಬಹುದು ಎನ್ನಲಾಗಿದೆ.
ಇನ್ನು ಗರ್ಭಿಣಿಯರು ಈ ರೀತಿ ದೊಡ್ಡದಾಗಿ ಮೊಳಕೆ ಇರುವ ಆಲೂಗಡ್ಡೆ ಹಾಗೆಯೇ ತಿಂದರೆ ತುಂಬಾ ಅಪಾಯ ಎಂದೂ ಹೇಳಲಾಗುತ್ತದೆ. ಇದರಿಂದ ಜನನ ದೋಷಗಳು ಆಗಬಹುದು ಎನ್ನಲಾಗಿದೆ.
ಅದರಲ್ಲಿಯೂ ಹಸಿರು ಬಣ್ಣದ ಆಲೂಗಡ್ಡೆ ಇದ್ದು, ಅದಕ್ಕೆ ಮೊಳಕೆ ಬಂದರಂತೂ ತಿನ್ನದೇ ಇರುವುದೇ ಒಳಿತು. ಹಾಗೊಂದು ವೇಳೆ ತಿನ್ನಲೇಬೇಕು ಎಂದಾದರೆ ವಿಷದ ಪ್ರಮಾಣವನ್ನು ಕಡಿಮೆ ಮಾಡಲು, ಮೊಗ್ಗುಗಳಿರುವ ಭಾಗದ ಸಿಪ್ಪೆ ಮತ್ತು ಮೊಗ್ಗುಗಳನ್ನು ಸಂಪೂರ್ಣವಾಗಿ ಕತ್ತರಿಸಿ ತೆಗೆದು ಹಾಕಬೇಕು.