Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಯುವತಿಯೊಬ್ಬಳು ತಲೆ ಹಾಗೂ ಸೊಂಟದ ಮೇಲೆ ತಲವಾರು ಇಟ್ಟುಕೊಂಡು ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. 74 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದು, ಆಕೆ ತನ್ನ ನೃತ್ಯದ ನಡುವೆಯೂ ಈ ತಲವಾರು ಕೆಳಗೆ ಬೀಳದಂತೆ ಬ್ಯಾಲೆನ್ಸ್ ಮಾಡುತ್ತಿರುವುದು ನೋಡಿ ಅನೇಕರು ಫಿದಾ ಆಗಿದ್ದಾರೆ. ಈ ವೀಡಿಯೋವನ್ನು ಲಾವಣ್ಯ ದಾಸ್ ಮಣಿಕ್‌ಪುರಿ ಎಂಬ ಹೆಸರಿನ ಇನ್ಸ್ಟಾ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ಸ್ವತಃ ಅವರು ಹೆಚ್ಚು ಕಟ್ಟಪಡದೇ ಸೊಂಟ ಹಾಗೂ ತಲೆಯ ಮೇಲೆ ತಲವಾರು ಇರಿಸಿಕೊಂಡು ಡಾನ್ಸ್ ಮಾಡಿದ್ದಾರೆ.ಅಫ್ಘಾನ್ ಜಲೇಬಿ ಹಾಡಿಗೆ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದಾಳೆ.
ಮೊದಲಿಗೆ ಸೊಂಟ ಹಾಗೂ ತಲೆಯ ಮೇಲೆ ಈ ತಲವಾರು ಇರಿಸಿಕೊಂಡು ಡಾನ್ಸ್ ಮಾಡುವುದಕ್ಕೆ ಪ್ರಯತ್ನ ಪಡುತ್ತಿರುವ ದೃಶ್ಯವಿದ್ದು, ಹಲವು ಪ್ರಯತ್ನಗಳ ನಂತರ ಬಹಳ ಪರ್ಫೆಕ್ಟ್ ಆಗಿ ಅವರು ತಲವಾರು ಕೆಳಗೆ ಬೀಳದಂತೆ ಬ್ಯಾಲೆನ್ಸ್ ಮಾಡಿಕೊಂಡು ಬಿಂದಾಸ್ ಆಗಿ ಡಾನ್ಸ್ ಮಾಡೋದನ್ನು ಕಾಣಬಹುದಾಗಿದೆ.
https://www.instagram.com/reel/DR0MhAaE-PM/?igsh=MWNzYmZvZ2xyYTZpMA==