Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಬಿಗ್ ಬಾಸ್ ಕನ್ನಡ – 12 ರ ಆಟ ರೋಚಕ ಘಟ್ಟದಲ್ಲಿ ಸಾಗುತ್ತಿದೆ. ಸ್ಪರ್ಧಿಗಳ ನಡುವಿನ ಸ್ನೇಹ – ಅಂತರ ದಿನ ಕಳೆಯುತ್ತಿದ್ದಂತೆ ಹೆಚ್ಚಾಗುತ್ತಿದೆ.
ಈ ಸೀಸನ್‌ನಲ್ಲಿ ಈಗಾಗಲೇ ಸಾಕಷ್ಟು ಊಹಿಸದ ಟ್ವಿಸ್ಟ್ಗಳನ್ನು ನೀಡಲಾಗಿದೆ.
ಇದರಲ್ಲಿ ಮಿಡ್ ವೀಕ್ ಎಲಿಮಿನೇಷನ್, ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿ ಹಾಗೂ ಮಿನಿ ಫಿನಾಲೆಯೂ ಸೇರಿದೆ. ಈ ಸಲದ ಬಿಗ್ ಬಾಸ್‌ನಲ್ಲಿ ಟ್ವಿಸ್ಟ್‌ಗಳ ಚಮಕ್ ಇನ್ನೂ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ತಿರುವುಗಳನ್ನು ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಇತ್ತೀಚೆಗೆ ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಕಳೆದ ಸೀಸನ್‌ನ ಐವರನ್ನು ಮನೆಗೆ ಕರೆಸಲಾಗಿತ್ತು. ಇದರಲ್ಲಿ ರಜತ್ ಹಾಗೂ ಚೈತ್ರಾ ಅವರನ್ನು ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಮನೆಯಲ್ಲಿ ಇರಿಸಲಾಗಿದೆ.
ಇದೀಗ ವೈಲ್ಡ್ ಕಾರ್ಡ್‌ಗಳ ಸ್ಪರ್ಧಿಗಳ ವಿಚಾರದಲ್ಲೇ ದೊಡ್ಡ ಟ್ವಿಸ್ಟ್‌ವೊಂದನ್ನು ನೀಡಲು ಬಿಗ್ ಬಾಸ್ ರೆಡಿ ಇದ್ದಾರೆ ಎನ್ನುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.
ಕಳೆದ ವಾರ ರಜತ್ ಹಾಗೂ ಚೈತ್ರಾ ಅವರನ್ನು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮನೆಯಲ್ಲಿ ಇರಿಸುವ ಬಗ್ಗೆ ಸುದೀಪ್ ಅವರು ಅನೌನ್ಸ್ ಮಾಡಿದ್ದರು. ರಜತ್ – ಚೈತ್ರಾ ನಿಧಾನವಾಗಿ ಮನೆಯವರ ಜತೆ ಬೆರೆಯಲು ಶುರು ಮಾಡಿದ್ದಾರೆ. ಈ ನಡುವೆಯೇ ಒಂದು ದೊಡ್ಡ ಟ್ವಿಸ್ಟ್ ಇರಲಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿರುವ ಚೈತ್ರಾ – ರಜತ್ ಅವರು ದೊಡ್ಮನೆಯಿಂದ ಈ ವಾರವೇ ಆಚೆ ಬರಲಿದ್ದಾರೆ ಎನ್ನಲಾಗಿದೆ.
ಈಗಿನ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಸ್ವಲ್ಪ ಭಯ ಹುಟ್ಟಿಸುವ ನಿಟ್ಟಿನಲ್ಲಿ ಚೈತ್ರಾ – ರಜತ್ ಅವರನ್ನು ಒಂದು ವಾರ ಹೆಚ್ಚುವರಿಯಾಗಿ ಮನೆಯಲ್ಲಿ ಇರಿಸಲಾಗಿತ್ತು ಎಂದು ಹೇಳಲಾಗುತ್ತಿದೆ.
ಅದರಂತೆ ಇಬ್ಬರು ಈ ವಾರಾಂತ್ಯದಲ್ಲಿ ಬಿಗ್ ಬಾಸ್ ಮನೆಯಿಂದ ಹೊರಗೆ ಬರಲಿದ್ದಾರೆ ಎನ್ನಲಾಗುತ್ತಿದೆ.