Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಸದ್ಯಕ್ಕೆ ಫುಲ್ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರು ದೊಡ್ಡ ದೊಡ್ಡ ಸಿನಿಮಾಗಳಿಂದ ಹೊರಬಂದಿರೋದು. ವರ್ಷದ ದೊಡ್ಡ ಪ್ರಾಜೆಕ್ಟ್ ಅಂದೇ ಕರೆಸಿಕೊಳ್ತಿರೋ ಸಂದೀಪ್ ರೆಡ್ಡಿ ವಂಗಾ ಅವರ ‘ಸ್ಪಿರಿಟ್’ ಹಾಗೂ ನಾಗ್ ಅಶ್ವಿನ್ ಅವರ ‘ಕಲ್ಕಿ 2898 AD’ ಸೀಕ್ವೆಲ್ನಿಂದ ದೀಪಿಕಾ ಹಿಂದೆ ಸರಿದಿದ್ದಾರೆ.
ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಕಥೆ ಪೂರ್ಣಗೊಡಿಲ್ಲ. ಈ ಚಿತ್ರದ ಕೊನೆಯಲ್ಲಿ ದೀಪಿಕಾ ಪಾತ್ರ ಕಿಡ್ನ್ಯಾಪ್ ಆಗುತ್ತದೆ. ಹೀಗಾಗಿ, ಪಾರ್ಟ್ 2 ಮಾಡಲೇಬೇಕಾದ ಅನಿವಾರ್ಯತೆ ತಂಡಕ್ಕೆ ಇದೆ. ಈ ಚಿತ್ರದ ನಿರ್ದೇಕ ನಾಗ್ ಅಶ್ವಿನ್ ಅವರು ಸಿನಿಮಾಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗ ಹೊಸ ಚಿತ್ರಕ್ಕೆ ನಾಯಕಿ ಆಗಿ ಪ್ರಿಯಾಂಕಾ ಚೋಪ್ರಾ ಅವರನ್ನು ಪರಿಗಣಿಸಲಾಗುತ್ತಿದೆಯಂತೆ.
ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೋನಸ್ನ ಮದುವೆ ಆದ ಬಳಿಕ ವಿದಶಕ್ಕೆ ಹಾರಿದರು. ಹಾಲಿವುಡ್ ಚಿತ್ರಗಳ್ನು ಮಾಡುತ್ತಿದ್ದರು. ಆದರೆ, ಈಗ ಅವರು ಮತ್ತೆ ಭಾರತ ಚಿತ್ರರಂಗಕ್ಕೆ ಮರಳಿದ್ದಾರೆ.
ಈಗ ಪ್ರಿಯಾಂಕಾ ಅವರನ್ನು ಸಂಪರ್ಕಿಸಲು ತಂಡದವರು ರೆಡಿ ಆಗಿದ್ದಾರೆ. ಅವರು ಒಪ್ಪಿಗೆ ಕೊಟ್ಟರ ತಂಡ ಕೂಡ ಖುಷಿ ಪಡಲಿದೆ. ‘ಕಲ್ಕಿ 2898 ಎಡಿ’ ಸೀಕ್ವೆಲ್ ಬಹುತೇಕ ಶೂಟ್ ಸ್ಟುಡಿಯೋದಲ್ಲಿ ನಡೆಯಲಿದೆ. ಈ ವಿಷಯವನ್ನು ಪ್ರಿಯಾಂಕಾಗೆ ಮನದಟ್ಟು ಮಾಡಿಸಲು ತಂಡ ನಿರ್ಧರಿಸಿದೆ. ಈ ಸಿನಿಮಾ ಶೂಟ್ಗೆ ಅವರು ಹೈದರಾಬಾದ್ಗೆ ಬರಬೇಕಾಗುತ್ತದೆ.