Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > HR88B8888 ಕಾರಿನ ನಂಬರ್‌ಗೆ 1.17 ಕೋಟಿ ರೂ. ಬಿಡ್ ಮಾಡಿದ್ದ ಉದ್ಯಮಿಗೆ ಸಂಕಷ್ಟ; ಆಸ್ತಿ ತನಿಖೆಗೆ ಸರ್ಕಾರ ಆದೇಶ
ದೇಶಪ್ರಮುಖ

HR88B8888 ಕಾರಿನ ನಂಬರ್‌ಗೆ 1.17 ಕೋಟಿ ರೂ. ಬಿಡ್ ಮಾಡಿದ್ದ ಉದ್ಯಮಿಗೆ ಸಂಕಷ್ಟ; ಆಸ್ತಿ ತನಿಖೆಗೆ ಸರ್ಕಾರ ಆದೇಶ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ನವದೆಹಲಿ: ದಾಖಲೆಯ 1.17 ಕೋಟಿ ರೂ.ಗೆ ಕಾರಿನ ನಂಬರ್ ಗೆ ಬಿಡ್ ಮಾಡಿದ್ದ ಉದ್ಯಮಿಗೆ ಶಾಕ್ ಎದುರಾಗಿದ್ದು, ಅವರ ಆಸ್ತಿ ಕುರಿತು ಹರ್ಯಾಣ ಸರ್ಕಾರ ತನಿಖೆಗೆ ಆದೇಶಿಸಿದೆ.

ಭಾರತದ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಎಂದೇ ಹೇಳಲಾಗುತ್ತಿದ್ದ ‘HR88B8888’ ಗೆ ಬಿಡ್ ಮಾಡಿದ್ದ ಉದ್ಯಮಿ ಸುಧೀರ್ ಕುಮಾರ್ ಅವರ ಆಸ್ತಿ ಮತ್ತು ಆದಾಯವನ್ನು ಕೂಲಂಕಷವಾಗಿ ತನಿಖೆ ಮಾಡುವಂತೆ ಹರ್ಯಾಣ ಸರ್ಕಾರ ಆದೇಶಿಸಿದೆ.

ಹರ್ಯಾಣ ಸಾರಿಗೆ ಸಚಿವ ಅನಿಲ್ ವಿಜ್ ಈ ಕುರಿತು ಆದೇಶ ಹೊರಡಿಸಿದ್ದು, ಸಾರಿಗೆ ಸೇವೆ ನೀಡುವ ರೊಮುಲಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಸುಧೀರ್ ಕುಮಾರ್ ಅವರ ಆಸ್ತಿ ಮತ್ತು ಆದಾಯವನ್ನು ಕೂಲಂಕಷವಾಗಿ ತನಿಖೆ ಮಾಡುವಂತೆ ತಮ್ಮ ಇಲಾಖೆಗೆ ಆದೇಶಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ವಿಜ್, “ನಾವು ವಿಐಪಿ ನಂಬರ್ ಪ್ಲೇಟ್‌ಗಳನ್ನು ಹರಾಜಿನ ಮೂಲಕ ನೀಡುತ್ತೇವೆ. ಹಲವಾರು ಜನರು ‘8888’ ಸಂಖ್ಯೆಗೆ ಬಿಡ್ ಮಾಡಿದ್ದಾರೆ. ಆದಾಗ್ಯೂ, ಅತ್ಯಧಿಕ ಬಿಡ್ ಮಾಡುವ ಮೂಲಕ ಹರಾಜಿನಲ್ಲಿ ಗೆದ್ದ ನಂತರ, ಬಿಡ್ದಾರ (ಸುಧೀರ್ ಕುಮಾರ್) ಮೊತ್ತವನ್ನು ಪಾವತಿಸಲಿಲ್ಲ. ಅದಾಗ್ಯೂ ಅವರ 11,000 ರೂ. ಭದ್ರತಾ ಠೇವಣಿಯನ್ನು ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. ಮತ್ತು ಆ ಸಂಖ್ಯೆಯನ್ನು ಮತ್ತೆ ಹರಾಜಿಗೆ ನಿಯೋಜಿಸಲಾಗಿದೆ ಎಂದರು.

ಅಂತೆಯೇ ತಮ್ಮ ಆದೇಶದ ಕುರಿತು ಮಾತನಾಡಿದ ವಿಜ್, ‘ವಿಐಪಿ ನಂಬರ್ ಪ್ಲೇಟ್‌ನ ಬಿಡ್ ಮೊತ್ತವಾದ 1.17 ಕೋಟಿ ರೂ.ಗಳ ನಿವ್ವಳ ಮೌಲ್ಯವನ್ನು ಸುಧೀರ್ ಕುಮಾರ್ ಹೊಂದಿದ್ದಾರೆಯೇ ಎಂದು ಪರಿಶೀಲಿಸಲು ಕೇಳಿದ್ದಾಗಿ ವಿಜ್ ಹೇಳಿದ್ದಾರೆ.

ಅಲ್ಲದೆ ತನಿಖೆ ನಡೆಸುವಂತೆ ವಿನಂತಿಸಿ ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆಯುವುದಾಗಿ ಸಚಿವರು ತಿಳಿಸಿದ್ದು, ಆರ್ಥಿಕ ಸಾಮರ್ಥ್ಯವಿಲ್ಲದೆ ಬಿಡ್ದಾರರು ನಂಬರ್ ಪ್ಲೇಟ್‌ನ ಬೆಲೆಯನ್ನು ಹೆಚ್ಚಿಸುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ. ಹರಾಜಿನಲ್ಲಿ ಬಿಡ್ ಮಾಡುವುದು ಹವ್ಯಾಸವಲ್ಲ, ಅದು ಒಂದು ಜವಾಬ್ದಾರಿ” ಎಂದು ವಿಜ್ ಹೇಳಿದರು.

ಇದೇ ಉದ್ಯಮಿ ಸುಧೀರ್ ಕುಮಾರ್ ‘HR88B8888’ ಸಂಖ್ಯೆಗೆ ಬರೊಬ್ಬರಿ 1.17 ಕೋಟಿ ರೂ ಹಣ ಬಿಡ್ ಮಾಡಿದ್ದರು. ಆದರೆ ಬಳಿಕ ಅವರು ಈ ಮೊತ್ತವನ್ನು ಪಾವತಿ ಮಾಡುವಲ್ಲಿ ವಿಫಲವಾಗಿದ್ದರಿಂದ ಹರ್ಯಾಣ ಸಾರಿಗೆ ಇಲಾಖೆ ಈ ಸಂಖ್ಯೆಯನ್ನು ಮರು ಹರಾಜಿಗೆ ನಿಯೋಜಿಸಿದೆ.

ಸುಧೀರ್ ಕುಮಾರ್ ಅವರ ಕುಟುಂಬಸ್ಥರು ಈ ಸಂಖ್ಯೆಗೆ ಇಷ್ಟು ದೊಡ್ಡ ಮೊತ್ತದ ಹಣ ಪಾವತಿಸಲು ವಿರೋಧಿಸಿದ್ದರಿಂದ ಸುಧೀರ್ ಕುಮಾರ್ ಹಣ ಪಾವತಿಗೆ ಸಮಯ ಕೇಳಿದ್ದರು.

TAGGED:Businessman who bid Rs 1.17 crore for car number plate faces trouble; Government orders property investigation
Share This Article
Facebook Twitter Copy Link Print
Previous Article MLA private Video ಶಿಕ್ಷಕಿ ಜತೆಗಿನ ತನ್ನ ರಾಸಲೀಲೆಯ ವಿಡಿಯೋವನ್ನು ವಾಟ್ಸ್ಯಾಪ್ ಗ್ರೂಪ್‌ಗೆ ಶೇರ್ ಮಾಡಿಕೊಂಡ ಶಾಸಕ, ಅಕ್ರಮ ಸಂಬಂಧ ಬಟಾಬಯಲು, ವೈರಲ್ ವಿಡಿಯೊ ನೋಡಿ
Next Article GOOD MORNING | Today’s Horoscope ಇಂದಿನ ರಾಶಿ ಭವಿಷ್ಯ 04-12-2025, ಗುರುವಾರ, ನಿರುದ್ಯೋಗಿಗಳಿಗೆ ನಿರುತ್ಸಾಹ

Popular Posts

Footpath Eviction ಪುಂಡರ ದೌರ್ಜನ್ಯ; ಜಿಬಿಎ ಅಧಿಕಾರಿಗಳ ಮೇಲೆ ಮಾರಣಾಂತಿಕ ದಾಳಿ, ಮಹಿಳಾ ಅಧಿಕಾರಿಗೆ ಪೆಪ್ಪರ್ ಸ್ಪ್ರೇ

2 Min Read

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ

2 Min Read

You Might Also Like

ಪ್ರಮುಖಕರ್ನಾಟಕದೇಶ

Gold Price ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ವಿವರ ಇಲ್ಲಿದೆ

1 Min Read
ದೇಶಪ್ರಮುಖ

Indian Navy Upgrade | INS ಮಾಲ್ವನ್ ನಾಳೆ ಭಾರತೀಯ ನೌಕಾಪಡೆಗೆ ಸೇರ್ಪಡೆ: ಸಮುದ್ರ ಭದ್ರತೆಗೆ ಮತ್ತೊಂದು ಸ್ವದೇಶಿ ಶಕ್ತಿ

2 Min Read
ಕರ್ನಾಟಕಪ್ರಮುಖ

Karnataka weather Report | ಜುಲೈ 25ರವರೆಗೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್: ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ, ಐಎಂಡಿ ಮುನ್ಸೂಚನೆ

2 Min Read
ಕರ್ನಾಟಕಪ್ರಮುಖ

Karnataka Cabinet Expension| ಕಾಂಗ್ರೆಸ್ ಕಲಿಗಳು ಮತ್ತೆ ದೆಹಲಿಗೆ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಚರ್ಚೆ ತೀವ್ರ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?