Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ದಕ್ಷಿಣ ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ತಗ್ಗಿದ ವಾಯುಭಾರ ಕುಸಿತವು ದಿತ್ವಾ ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆಯಿದೆ. ಆಂಧ್ರ ಪ್ರದೇಶದ ಕಡೆಗೆ ಸಾಗುತ್ತಿದೆ. ದಿತ್ವಾ ಎಫೆಕ್ಟ್ನಿಂದ ಇಂದು ಭಾರೀ ಆಂಧ್ರ, ತಮಿಳುನಾಡು ಸೇರಿದಂತೆ ಎಲ್ಲೆಲ್ಲಿ ಭಾರೀ ಮಳೆಯಾಗಲಿದೆ.
ದಿತ್ವಾ ಚಂಡಮಾರುತಕ್ಕೆ ಶ್ರೀಲಂಕಾ ನಲುಗಿ ಹೋಗಿದೆ. ಹವಾಮಾನ ಅಧಿಕಾರಿಗಳ ಮುನ್ಸೂಚನೆಗಿಂತ ಇದು ಸ್ವಲ್ಪ ಭಿನ್ನವಾಗಿ ಚಲಿಸುತ್ತಿದೆ. ಇದು ತಮಿಳುನಾಡು, ಕರಾವಳಿಯನ್ನು ದಾಟುವ ಸಾಧ್ಯತೆಯಿಲ್ಲ. ಇದು ಆಂಧ್ರ ಪ್ರದೇಶ ಕಡೆಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ. ಆಂಧ್ರ ಪ್ರದೇಶಕ್ಕೆ ಹೈ ಅಲರ್ಟ್ ನೀಡಲಾಗಿದೆ.
ಭಾರತ ಹವಾಮಾನ ಇಲಾಖೆಯ (ಐಎಂಡಿ) ಇತ್ತೀಚಿನ ವರದಿಯ ಪ್ರಕಾರ, ದಿತ್ವಾ ಚಂಡಮಾರುತವು ತಮಿಳುನಾಡಿನಲ್ಲಿ 1 ನೇ ತಾರೀಖಿನವರೆಗೆ ಭಾರೀ ಮಳೆಯನ್ನುಂಟುಮಾಡಲಿದೆ. ನವೆಂಬರ್ 29 ರಂದು ಕರಾವಳಿ ಆಂಧ್ರ, ಯಾಣಂ ಮತ್ತು ರಾಯಲಸೀಮಾದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ.