Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹವನ್ನು ಹಠಾತ್ತನೆ ಮುಂದೂಡಿದ್ದರಿಂದ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು. ನವೆಂಬರ್ 23ರ ಭಾನುವಾರ ಸ್ಮೃತಿ ಅವರ ತಂದೆಯ ಆರೋಗ್ಯ ಹದಗೆಟ್ಟಿತ್ತು. ಹೃದಯಾಘಾತದಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ಹೊರಬಿತ್ತು. ನಂತರ ಸ್ಮೃತಿ ಅವರ ವಿವಾಹ ವ್ಯವಸ್ಥಾಪಕರು ಭಾರತೀಯ ಆಟಗಾರ್ತಿ ತಮ್ಮ ವಿವಾಹವನ್ನು ಮುಂದೂಡಲು ನಿರ್ಧರಿಸಿದ್ದಾರೆ ಎಂದು ಘೋಷಿಸಿದರು.
ವಿವಾಹವನ್ನು ಮುಂದೂಡಿದ ಒಂದು ದಿನದ ನಂತರ, ಸ್ಮೃತಿ ಮಂಧಾನ ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹಗಳಿಗೆ ಕಾರಣವಾದ ಒಂದು ಹೆಜ್ಜೆಯನ್ನು ತೆಗೆದುಕೊಂಡರು. ಸ್ಟಾರ್ ಆಟಗಾರ್ತಿ ಇದ್ದಕ್ಕಿದ್ದಂತೆ ಇನ್‌ಸ್ಟಾಗ್ರಾಮ್‌ನಿಂದ ಅವರ ನಿಶ್ಚಿತಾರ್ಥ ಮತ್ತು ಪಲಾಶ್ ಅವರೊಂದಿಗಿನ ವಿವಾಹಕ್ಕೆ ಸಂಬಂಧಿಸಿದ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಹಾಕಿದರು.
ಇದರ ನಡುವೆ ಜಾಲತಾಣದಲ್ಲಿ ಪಲಾಶ್ ಅವರು ಯುವತಿಯೊಬ್ಬಳೊಂದಿಗೆ ನಡೆಸಿದ್ದಾರೆ ಎನ್ನಲಾದ ಚಾಟಿಂಗ್ನ ಸ್ಕ್ರೀನ್ ಶಾಟ್ಗಳು ಕೂಡ ವೈರಲ್ ಆಗಿವೆ. ಹೀಗಾಗಿ, ಎರಡೂ ಕುಟುಂಬದಲ್ಲಿ ವೈಮನಸ್ಸು ಮೂಡಿದೆ. ಈ ಮದುವೆ ನಡೆಯುವುದು ಬಹತೇಕು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಇದು ಕೇವಲ ವದಂತಿಗಳಷ್ಟೇ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಎಲ್ಲಿಯೂ ಹೊರಬಿದ್ದಿಲ್ಲ.
ಪಲಾಶ್ ತಾಯಿಯ ಅಚ್ಚರಿ ಹೇಳಿಕೆ
ಒಂದೆಡೆ ಅನೇಕ ವದಂತಿಗಳು ಹರಿದಾಡುತ್ತಿದ್ದು, ಇದೇ ಸಮಯದಲ್ಲಿ ಪಲಾಶ್ ಮುಚ್ಚಲ್ ಅವರ ತಾಯಿ ಅಮಿತಾ ಮುಚ್ಚಲ್, ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿ ಸ್ಪಷ್ಟನೆ ನೀಡುವ ಪ್ರಯತ್ನಗಳನ್ನು ಮಾಡಿದ್ದಾರೆ. ಪಲಾಶ್‌ಗೆ ಸ್ಮೃತಿ ಅವರ ತಂದೆ ಎಂದರೆ ತುಂಬಾ ಇಷ್ಟ. ಪಲಾಶ್, ಸ್ಮೃತಿಗಿಂತಲೂ ಅವರ ತಂದೆಗೆ ತುಂಬಾ ಹತ್ತಿರವಾಗಿದ್ದಾರೆ. ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆಂದು ತಿಳಿದಾಗ, ಪಲಾಶ್ ತುಂಬಾ ಕಣ್ಣೀರಿಟ್ಟರು. ಮದುವೆಯನ್ನು ಮುಂದೂಡಲು ಸ್ಮೃತಿಗಿಂತ ಮೊದಲು ನಿರ್ಧರಿಸಿದ್ದೇ ಪಲಾಶ್. ಸ್ಮೃತಿಯ ತಂದೆ ಚೇತರಿಸಿಕೊಳ್ಳುವವರೆಗೆ ವಿವಾಹ ಸಮಾರಂಭವನ್ನು ಮುಂದೂಡಬೇಕೆಂದು ತಮ್ಮ ಹೇಳಿದ್ದಾಗಿ ತಿಳಿಸಿದ್ದಾರೆ.