Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಅರುಣಾಚಲ ಪ್ರದೇಶವನ್ನು ತನ್ನದೆಂದು ಹೇಳಿಕೊಳ್ಳುವ ಚೀನಾ, ಅಲ್ಲಿ ಜನಿಸಿದ ಭಾರತೀಯ ಮಹಿಳೆಯೊಬ್ಬರ ಪಾಸ್‌ಪೋರ್ಟ್ ಅನ್ನು ಶಾಂಘೈ ವಿಮಾನ ನಿಲ್ದಾಣದಲ್ಲಿ ಅಮಾನ್ಯಗೊಳಿಸಿ, 18 ಗಂಟೆಗಳ ಕಾಲ ಬಂಧಿಸಿ ಕಿರುಕುಳ ನೀಡಿದೆ.
ಅರುಣಾಚಲ ಪ್ರದೇಶದಲ್ಲಿ ಜನಿಸಿರುವ ಭಾರತೀಯ ಮೂಲದ ಯು.ಕೆ ನಿವಾಸಿಯಾದ ಮಹಿಳೆಯೊಬ್ಬರು ಚೀನಾದ ಶಾಂಘೈನ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳಿಂದ ಕಿರುಕುಳ ಅನುಭವಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ.21ರಂದು ಲಂಡನ್‌ನಿಂದ ಜಪಾನ್‌ಗೆ ಪ್ರಯಾಣಿಸುತ್ತಿದ್ದ ಭಾರತೀಯ ಮೂಲದ ಅರುಣಾಚಲದ ಪೆಮಾ ವಾಂಗ್ ಥಾಂಗ್‌ಡೋಕ್ ಎಂಬ ಮಹಿಳೆಯೊಬ್ಬರು ಮೂರು ಗಂಟೆಗಳ ಕಾಲ ವಿಮಾನ ಬದಲಾಯಿಸಲು ಶಾಂಘೈ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾಗ, ಚೀನಾ ಭಾರತೀಯ ಪಾಸ್ ಪೋರ್ಟ್ ಅನ್ನು ಹೊಂದಿದ್ದಕ್ಕೆ ಆಕೆಯ ಪಾಸ್ ಪೋರ್ಟ್ ಅಮಾನ್ಯ ಎಂದು ಚೀನಾ ವಲಸೆ ಮತ್ತು ಚೀನಾ ಈಸ್ಟರ್ನ್ ಏರ್ಲೈನ್ಸ್ ಕಾರ್ಪೊರೇಷನ್ ಲಿಮಿಟೆಡ್ ಹೇಳಿದ್ದು, ಆಕೆಯನ್ನು ಸುಮಾರು 18 ಗಂಟೆಗಳ ಬಂಧಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.