Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬೆಂಗಳೂರು ದರೋಡೆ ಸೂತ್ರಧಾರಿ ಇವರೇ ನೋಡಿ: ಪ್ರಕರಣದಲ್ಲಿ ಆರೋಪಿಗಳ ಪಾತ್ರವೇನು?
ಕರ್ನಾಟಕಪ್ರಮುಖ

ಬೆಂಗಳೂರು ದರೋಡೆ ಸೂತ್ರಧಾರಿ ಇವರೇ ನೋಡಿ: ಪ್ರಕರಣದಲ್ಲಿ ಆರೋಪಿಗಳ ಪಾತ್ರವೇನು?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

₹7.11 ಕೋಟಿ ದರೋಡೆ ಮಾಡಿದ್ದ ಪ್ರಕರಣ ಮಹತ್ವದ ತಿರುವು ಪಡೆದಿದ್ದು, ಬಂಧಿತ ಆರೋಪಿಗಳ ಪೈಕಿ ರವಿ ಎಂಬಾತ ಇಡೀ ಪ್ರಕರಣದ ಸೂತ್ರಧಾರಿ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.

ಮಾಜಿ ಸೈನಿಕನ ಮಗನಾದ ರವಿ, ಎಂಎಸ್‌ಸಿ ವ್ಯಾಸಂಗ ಮಾಡಿದ್ದು, ನಗರದಲ್ಲಿ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದರು. ಆದರೆ, ನಷ್ಟವಾಗಿದ್ದರಿಂದ ಏಜೆನ್ಸಿ ಮುಚ್ಚಿ ಮನೆಯಲ್ಲಿದ್ದರು. ಆಗ ಹಣ ದರೋಡೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.

ಇನ್ನು ರವಿ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತನ್ನ ಪತಿ ದರೋಡೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಕೃತ್ಯದಲ್ಲಿ ರವಿಯ ಸಹೋದರ ಹಾಗೂ ಅವರ ತಂದೆಯ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಿಎಂಎಸ್ ಏಜೆನ್ಸಿ ವಾಹನದ ಮೇಲ್ವಿಚಾರಕ ಗೋಪಾಲ್ ಪ್ರಸಾದ್, ಸಿಎಂಎಸ್‌ ಮಾಜಿ ಉದ್ಯೋಗಿ ಕ್ಸೇವಿಯರ್ ಹಾಗೂ ಕಾನ್‌ಸ್ಟೆಬಲ್ ಅಣ್ಣಪ್ಪ ನಾಯ್ಕ್‌ ಬಾರ್‌ನಲ್ಲಿ ಪರಿಚಿತರಾಗಿದ್ದರು. ರವಿ, ನವೀನ್ ಮತ್ತು ನೆಲ್ಸನ್ ಸ್ನೇಹಿತರು ಹಾಗೂ ಚಿತ್ತೂರಿನವರು. ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ರವಿಗೆ ಗೋಪಾಲ್, ಅಣ್ಣಪ್ಪ ಅವರ ಪರಿಚಯವಿತ್ತು. ವ್ಯವಹಾರದಲ್ಲಿ ನಷ್ಟ ಹೊಂದಿದ್ದ ಕಾರಣ, ದೊಡ್ಡ ಮೊತ್ತದ ದರೋಡೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳ ಪಾತ್ರವೇನು?:
ರವಿ ತನ್ನ ಸ್ನೇಹಿತರು ಹಾಗೂ ಇತರೆ ಆರೋಪಿಗಳ ಜತೆ ಚರ್ಚಿಸಿ, ಯೋಜನೆ ರೂಪಿಸುತ್ತಾರೆ. ಎಲ್ಲೆಲ್ಲಿ ಇಲಾಖೆಯ ಸಿ.ಸಿ.ಟಿ.ವಿ ಕ್ಯಾಮೆರಾಗಳಿವೆ? ಯಾವ ಹೆಸರು ಹೇಳಿದರೆ ಏಜೆನ್ಸಿ ವಾಹನದ ಸಿಬ್ಬಂದಿ ಆತಂಕಕ್ಕೆ ಒಳಗಾಗುತ್ತಾರೆ? ಕಾರಿನ ನಂಬರ್ ಪ್ಲೇಟ್ ಬದಲಾವಣೆ ಮಾಡಿಕೊಂಡು ಹೇಗೆ ಪರಾರಿಯಾಗಬೇಕು? ಎಂಬ ಯೋಜನೆಯನ್ನು ಅಣ್ಣಪ್ಪ ನಾಯ್ಕ್‌ ರೂಪಿಸಿದ್ದ ಎಂದು ಹೇಳಲಾಗಿದೆ.

ಏಜೆನ್ಸಿ ವಾಹನದಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳು, ಸಿಬ್ಬಂದಿ ಸಂಖ್ಯೆ ಹಾಗೂ ತುರ್ತು ಬಟನ್ ಒತ್ತುವ ಮೊದಲೇ ಸಿಬ್ಬಂದಿಯನ್ನು ಕೆಳಗಿಳಿಸಬೇಕು ಎಂಬುದರ ಬಗ್ಗೆ ಕ್ಸೇವಿಯರ್ ಮಾಹಿತಿ ನೀಡಿದ್ದರು. ಯಾವ ದಿನ, ಯಾವ ಮಾರ್ಗದಲ್ಲಿ ಹೆಚ್ಚು ಹಣ ವಾಹನದಲ್ಲಿ ಕೊಂಡೊಯ್ಯಲಾಗುತ್ತದೆ ಎಂಬುದರ ಕುರಿತು ಗೋಪಾಲ್‌ ತಿಳಿಸಿದ್ದರು ಎಂದು ಮೂಲಗಳು ಹೇಳಿವೆ.

ಪರಿಚಿತ ಟ್ರಾವೆಲ್‌ ಏಜೆನ್ಸಿಗಳಿಂದ ಎರಡು ವಾಹನಗಳನ್ನು ಬಾಡಿಗೆಗೆ ಪಡೆದು ತಂದಿದ್ದ ರವಿ, ಅವುಗಳನ್ನು ದರೋಡೆಗೆ ಬಳಸಿದ್ದರು. ಈ ವಾಹನಗಳಿಗೆ ನವೀನ್ ಮತ್ತು ನೆಲ್ಸನ್ ಚಾಲಕರಾಗಿದ್ದರು. ಎಲ್ಲಿ ಸಂಚಾರ ದಟ್ಟಣೆ ಇರುವುದಿಲ್ಲ, ಎಷ್ಟು ಚೆಕ್ ಪೋಸ್ಟ್‌ಗಳು ಇವೆ. ಎಷ್ಟು ಹೊತ್ತಿಗೆ ನಿಗದಿತ ಸ್ಥಳ ತಲುಪುತ್ತೇವೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ರವಿ, ಕೃತ್ಯ ನಡೆದ ಒಂದೂವರೆ ತಾಸಿನಲ್ಲಿ ಕೆ.ಆರ್.ಪುರ, ಹೊಸಕೋಟೆ, ಕೋಲಾರ ಮಾರ್ಗವಾಗಿ ಹಣದೊಂದಿಗೆ ವಾಹನ ಆಂಧ್ರಪ್ರದೇಶದ ಗಡಿ ತಲುಪಿತ್ತು. ಘಟನೆ ನಡೆದ ಒಂದೂವರೆ ತಾಸಿನ ಬಳಿಕ ಪೊಲೀಸರಿಗೆ ವಿಷಯ ಗೊತ್ತಾಗಿತ್ತು. ಅಣ್ಣಪ್ಪ ನಾಯ್ಕ್ ಹಾಗೂ ಕ್ಸೇವಿಯರ್‌ ನಡುವಿನ ಮೊಬೈಲ್ ಸಂಭಾಷಣೆ ಮಾಹಿತಿ ಆಧಾರದ ಮೇಲೆ ಬಂಧಿಸಲಾಗಿದೆ. ದರೋಡೆ ನಡೆಯುವುದಕ್ಕೆ ವಾರದ ಹಿಂದೆ ಇಬ್ಬರೂ ಮೊಬೈಲ್‌ನಲ್ಲಿ ಮಾತನಾಡಿರುವುದು ಗೊತ್ತಾಗಿದೆ. ಶಿವಮೊಗ್ಗ ಜಿಲ್ಲೆಯ ಅಪ್ಪಣ್ಣ ಅವರು 2018ರಲ್ಲಿ ಇಲಾಖೆಗೆ ಸೇರಿದ್ದರು.

ಕಾಲ್ ಸೆಂಟರ್‌ ಉದ್ಯೋಗಿಗಳ ಕಿಡ್ನಾಪ್ ಕೇಸ್; ಎಂಟು ಆರೋಪಿಗಳು ಅರೆಸ್ಟ್

TAGGED:Look at the mastermind behind the Bangalore robbery: What was the role of the accused in the case?
Share This Article
Facebook Twitter Copy Link Print
Previous Article ಕಾಲ್ ಸೆಂಟರ್‌ ಉದ್ಯೋಗಿಗಳ ಕಿಡ್ನಾಪ್ ಕೇಸ್; ಎಂಟು ಆರೋಪಿಗಳು ಅರೆಸ್ಟ್
Next Article 2026 ರ ರಜಾ ಪಟ್ಟಿಯಲ್ಲಿ ಯಾವ ತಿಂಗಳಲ್ಲಿ ಹೆಚ್ಚು ರಜೆಗಳಿವೆ?

Popular Posts

Kapil Sibal ಸಿಜೆಪಿಯ ಕಾನೂನು ನೆರವು ನಿಧಿಗೆ ಕೋಟಿ ರೂ. ದೇಣಿಗೆ ನೀಡಿದ ಕಪಿಲ್ ಸಿಬಲ್!

2 Min Read

Soya chop ಸೋಯಾ ಚಾಪ್ ಹಿಟ್ಟಿನ ಮೇಲೆ ಅರೆಬೆತ್ತಲೆ ಉರುಳುಸೇವೆ!? ತಿನ್ನುವ ಮುನ್ನ ಈ ವಿಡಿಯೋ ನೋಡಿ

1 Min Read

Se*xual harassment ನೀಟ್ ಹೋರಾಟದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ! ಹುಡುಗನಿಗೆ ಕಪಾಳಮೋಕ್ಷ ಮಾಡಿದ ಆಕೆ ಹೇಳಿದ್ದೇನು?

1 Min Read

NEET Love Story ನೀಟ್ ಪ್ರತಿಭಟನೆಯಲ್ಲರಳಿದ ಪ್ರೀತಿ; ದೆಹಲಿ ವಿದ್ಯಾರ್ಥಿನಿ ಮದುವೆಯಾದ ಬಿಹಾರ ಯುವಕ! ವಿಡಿಯೋ ನೋಡಿ

3 Min Read

You Might Also Like

ಪ್ರಮುಖಕರ್ನಾಟಕ

Peenya Flyover ಪೀಣ್ಯ ಫ್ಲೈಓವರ್ ಮೇಲೆ ರಾತ್ರಿ ವೇಳೆ ವಾಹನ ಸಂಚಾರ ಬಂದ್, ಪರ್ಯಾಯ ಮಾರ್ಗದ ವಿವರ ಇಲ್ಲಿದೆ

1 Min Read
ಪ್ರಮುಖದೇಶ

Rapido Ride Cancellation Fine ಸರ್ಕಾರದ ಹೊಸ ನಿಯಮ; ಕ್ಯಾಬ್ ರೈಡ್ ರದ್ದುಗೊಳಿಸಿದರೆ ಚಾಲಕರಿಗೆ ಭಾರಿ ದಂಡದ ಬಿಸಿ

2 Min Read
ಪ್ರಮುಖದೇಶ

Commonwealth Games 2026: ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಬೆಳ್ಳಿಯ ಪದಕ ತಂದುಕೊಟ್ಟ ಜ್ಞಾನೇಶ್ವರಿ ಯಾದವ್

1 Min Read
ಪ್ರಮುಖದೇಶ

Ram Mandir ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ಎಸ್‌ಐಟಿ ನೇತೃತ್ವ ವಹಿಸಲಿರುವ ಐಪಿಎಸ್ ಅಧಿಕಾರಿ ಎಸ್. ಕಿರಣ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?