Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮುಂಬೈ: ಟೀಂ ಇಂಡಿಯಾ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಛಿಲ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈಗಾಗಲೇ ಅವರ ವಿವಾಹ ಸಿದ್ಧತೆಗಳು ಆರಂಭವಾಗಿದೆ. ಅಳದಿ ಶಾಸ್ತ್ರ ಕೂಡ ಮುಕ್ತಾಯವಾಗಿದೆ. ನವೆಂಬರ್ 23ರಂದು ವಿವಾಹ ಸಮಾರಂಭ ನಡೆಯಲಿದ್ದು ಅಂತಿಮ ಹಂತದ ತಯಾರಿಗಳು ಭರದಿಂದ ನಡೆಯುತ್ತಿವೆ.
ಮಹಿಳಾ ವಿಶ್ವಕಪ್ ಫೈನಲ್ ಗೆದ್ದ ಡಿವೈ ಪಾಟೀಲ್ ಕ್ರೀಡಾಂಗಣದ ಮಧ್ಯದಲ್ಲಿ ಸ್ಮೃತಿ ಮಂಧಾನಾ ಅವರಿಗೆ ಜನಪ್ರಿಯ ಗಾಯಕ ಪಲಾಶ್ ಮುಚ್ಚಲ್ ಸರ್ ಪ್ರೈಸ್’ ಪ್ರಪೋಸ್ ಮಾಡಿದ್ದಾರೆ.
ಸ್ಮೃತಿಯ ಕಣ್ಣಿಗೆ ಬಟ್ಟೆ ಕಟ್ಟಿ ಅವರನ್ನು ಕ್ರೀಡಾಂಗಣದ ಮಧ್ಯಕ್ಕೆ ಕರೆದೊಯ್ದು ಉಂಗುರ ನೀಡುವ ಮೂಲಕ ಅವರಿಗೆ ಬಿಗ್ ಸರ್ ಪ್ರೈಸ್ ನೀಡಿದ್ದಾರೆ. ಈ ಹೃದಯ ಸ್ಪರ್ಶಿ ವಿಡಿಯೋವನ್ನು ಪಲಾಶ್ ಮುಚ್ಚಲ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ರಿಚಾ ಘೋಷ್, ಶ್ರೇಯಾಂಕ ಪಾಟೀಲ್, ರೇಣುಕಾ ಸಿಂಗ್, ಶಿವಾಲಿ ಶಿಂಧೆ, ರಾಧಾ ಯಾದವ್ ಮತ್ತು ಜೆಮಿಮಾ ರೊಡ್ರಿಗಸ್ ಸೇರಿದಂತೆ ಹಲವಾರು ಆಟಗಾರ್ತಿಯರು ಸ್ಮೃತಿ ಮಂಧಾನ ಅವರ ಹಲ್ದಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಜೆಮಿಮಾ ಹೊರತುಪಡಿಸಿ, ಎಲ್ಲರೂ ಹೊಳೆಯುವ ಹಳದಿ ಬಣ್ಣದ ಬಟ್ಟೆ ಧರಿಸಿ ವಧು (ಸ್ಮೃತಿ) ಜೊತೆ ನೃತ್ಯ ಮಹಡಿಯಲ್ಲಿ ಸಂಭ್ರಮಿಸಿದರು. ಹಲ್ದಿ ಸಮಾರಂಭದಲ್ಲಿ ಭಾರತೀಯ ಮಹಿಳಾ ಕ್ರಿಕೆಟಿಗರು ಸ್ಮೃತಿ ಮಂಧಾನ ಅವರೊಂದಿಗೆ ನೃತ್ಯ ಮಾಡುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
https://www.instagram.com/reel/DRTwX4LDfuY/?igsh=OWdzeTE3d3FheHBz