Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಿಕ್ಕಮಗಳೂರು: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದಕ್ಕೆ ಕಾಲೇಜು ಪ್ರಾಂಶುಪಾಲರು ವಿದ್ಯಾರ್ಥಿಯೋರ್ವನನ್ನು ಕಾಲೇಜಿನಿಂದಲೇ ಹೊರ ಹಾಕಿರುವ ಆರೋಪ ಕೇಳಿಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕು ಬಾಳೆಹೊನ್ನೂರಿನ ಕಡ್ಲೆಮಕ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ. ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಿವಕುಮಾರ್, ಅಯ್ಯಪ್ಪಸ್ವಾಮಿ ವ್ರತಾಚರಣೆಯ ಮಾಲಾಧಾರಣೆ ಮಾಡಿ ಗುರುವಾರ ಕಾಲೇಜಿಗೆ ಆಗಮಿಸಿದ್ದ. ಪ್ರಾಚಾರ್ಯ ಕೃಷ್ಣಮೂರ್ತಿಯವರು, ‘ನೀನು ಕಾಲೇಜಿಗೆ ಬರುವುದಾದರೆ ಶಾಲು ತೆಗೆದು ತರಗತಿಗೆ ಬಾ. ನಿಮ್ಮಂತಹ ವಿದ್ಯಾರ್ಥಿಗಳೇ ಕಾಲೇಜಿನಲ್ಲಿ ಜಾತಿ, ಧರ್ಮ ಎಂದು ಹುಟ್ಟು ಹಾಕುವುದು ಎಂದು ಗದರಿಸಿದರು. ಅಲ್ಲದೆ, ಹೀಗೆಯೇ ಬಂದರೆ, ನಿನ್ನನ್ನು ಕಾಲೇಜಿನಿಂದ ಡಿಬಾರ್ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿ, ಕಾಲೇಜಿನ ಕಂಪೌಂಡ್ ಒಳಗೆ ಸಹ ನಿಲ್ಲಲು ಅವಕಾಶ ನೀಡದೆ ಹೊರಹಾಕಿದ್ದಾರೆ’ ಎಂದು ವಿದ್ಯಾರ್ಥಿ ಶಿವಕುಮಾರ್ ಆರೋಪಿಸಿದ್ದಾರೆ.
ವಿದ್ಯಾರ್ಥಿಗೆ ಮಾಲೆ ತೆಗೆದು ಬಾ, ಇಲ್ಲವಾದಲ್ಲಿ ಬೇಡ ಎಂದು ಕಾಲೇಜು ಕ್ಯಾಂಪಸ್ ನಿಂದಲೇ ವಿದ್ಯಾರ್ಥಿಯನ್ನು ಹೊರಕಳುಹಿಸಿದ್ದಾರೆ. ಯಾವುದೇ ಜಾತಿ-ಧರ್ಮವನ್ನು ಬಿಂಬಿಸುವಂತೆ ಶಾಲಾ-ಕಾಲೇಜಿಗೆ ಬರುವಂತೆ ಇಲ್ಲ ಎಂದು ಸರ್ಕಾರದಿಂದಲೇ ಸರ್ಕ್ಯೂಲರ್ ಕೂಡ ಇದೆ ಎಂದು ಪ್ರಾಂಶುಪಾಲರು ವಿದ್ಯಾರ್ಥಿಗೆ ಹೇಳಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಹಿರಿಯ ಮಾಲಾಧಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರ ಮನವೊಲಿಸಿ ವಿದ್ಯಾರ್ಥಿಯನ್ನು ಮತ್ತೆ ಕಾಲೇಜಿಗೆ ಕಳುಹಿಸಲಾಗಿದೆ.
https://www.newsics.com/2025/11/21/heavy-rains-floods-landslides-in-vietnam-41-dead/