Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸಂಚಾರ ವಿಳಂಬ ಖಂಡಿಸಿ ನಮ್ಮ ಮೆಟ್ರೋ ರೈಲನ್ನೇ ಪ್ರಯಾಣಿಕರು ತಡೆದು ನಿಲ್ಲಿಸಿದ ಘಟನೆ ಬೆಂಗಳೂರಿನ ಆರ್.ವಿ.ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮುಂಜಾನೆ 5 ಗಂಟೆ ಬದಲಿಗೆ 6 ಗಂಟೆಗೆ ಮೆಟ್ರೋ ಸಂಚಾರ ಹಿನ್ನೆಲೆ ಮೆಟ್ರೋ ರೈಲಿನ ಡೋರ್ ಕ್ಲೋಸ್ ಆಗಲು ಬಿಡದೆ ತಡೆದಿದ್ದಾರೆ. ಇದರಿಂದಾಗಿ 6 ಗಂಟೆ ಬದಲು 6.30ಕ್ಕೆ ಮೆಟ್ರೋ ಸಂಚಾರ ಆರಂಭವಾಗಿದೆ. ಹೀಗಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ, ಬೊಮ್ಮಸಂದ್ರ ಕಡೆಗೆ ಶಾರ್ಟ್ ಲೂಪ್ ಮಾಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ಜಯನಗರ ಪೊಲೀಸ್ ಠಾಣೆಗೆ BMRCL ಅಧಿಕಾರಿಗಳು ದೂರು ನೀಡಿದ್ದಾರೆ.
ದೂರುದಾರ ಇಂದು ಬೆಳಿಗ್ಗೆ 5.30 ಗಂಟೆಗೆ ರಾಷ್ಟ್ರೀಯ ವಿದ್ಯಾಲಯ ಮೆಟ್ರೋ ನಿಲ್ದಾಣ (ಹಳದಿ ಮಾರ್ಗ)ದಿಂದ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾರೆ. ಹಸಿರು ಮಾರ್ಗದಲ್ಲಿ, ಪ್ರಯಾಣಿಸಿ ಬಂದು ಹಳದಿ ಮಾರ್ಗದ ಪಥ ಬದಲಾವಣೆಗಾಗಿ ಕಾಯುತ್ತಿದ್ದ ಪ್ರಯಾಣಿಕರ ಪೈಕಿ ಸುಮಾರು 10 ರಿಂದ 15 ಜನರ ಗುಂಪು ಹಳದಿ ಮಾರ್ಗದಲ್ಲಿ ಇನ್ನು ಏಕೆ ರೈಲು ಬರುತ್ತಿಲ್ಲ ಎಂದು ಏರು ಧ್ವನಿಯಲ್ಲಿ ಕೇಳುತ್ತಿದ್ದರು. ಆಗ ದೂರುದಾರ ಹಳದಿ ಮಾರ್ಗದಲ್ಲಿ ರೈಲು 6 ಗಂಟೆಗೆ ಪ್ರಾರಂಭವಾಗುತ್ತದೆ ಎಂದು ತಿಳಿಸಿದ್ದಾರೆ.
https://www.newsics.com/2025/11/17/delhi-car-blast-case-another-accused-arrested/