Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕರ್ನಾಟಕದ ರಾಜಧಾನಿ ಬೆಂಗಳೂರು ಬರೀ ದೇಶದಲ್ಲಷ್ಟೇ ಅಲ್ಲ, ವಿಶ್ವದಲ್ಲೇ ಗುರುತಿಸಲ್ಪಟ್ಟ ನಗರ. ಇಲ್ಲಿನ ವಾತಾವರಣ ಅದೆಷ್ಟೋ ಮಂದಿಯನ್ನು ಆಕರ್ಷಿಸುತ್ತಿದೆ. ಉದ್ಯಾನನಗರಿ, ಸಿಲಿಕಾನ್ ಸಿಟಿ , ಐಟಿ ಹಬ್ , ಸ್ಟಾರ್ಟ್ ಅಪ್ ಹಬ್ ಅಂತೆಲ್ಲ ಕರೆಸಿಕೊಳ್ಳೋ ನಮ್ಮ ಬೆಂಗಳೂರು, ಸರ್ವ ಜನಾಂಗದ ಶಾಂತಿಯ ತೋಟ ಅಂದ್ರೆ ತಪ್ಪಾಗಲಿಕ್ಕಿಲ್ಲ. ಬೇರೆ ಬೇರೆ ದೇಶಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸುತ್ತಾರೆ. ಹಾಗೆಯೇ ಇಟಲಿಯನ್ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇದೀ
ಈ ಮೆಹಿಳೆಯು ತಾವು ಬಳಸುವ ವಸ್ತುಗಳು ಈ ನಗರದಲ್ಲಿ ಎಷ್ಟು ಸೇಫ್ ಆಗಿರುತ್ತವೆ ಎಂದು ಹೊಗಳಿದ್ದಾರೆ.ಬೆಂಗಳೂರಿನಲ್ಲಿ ಅಂಗಡಿಯೊಂದಕ್ಕೆ ತೆರಳಿದ ವಿದೇಶಿ ಮಹಿಳೆ ಹೆಲ್ಮೆಟ್‌ನ್ನು ಮರೆತು ಸ್ಕೂಟರ್‌ನಲ್ಲೇ ಬಿಟ್ಟಿದ್ದಾರೆ. ಕೊನೆಗೆ ಈ ಬಗ್ಗೆ ಅರಿವಿಗೆ ಬಂದಿದೆ. ಕೂಡಲೇ ಹೆಲ್ಮೆಟ್ ಇದೆಯೇ ಎಂದು ವಾಹನದ ಕಡೆಗೆ ನೋಡಿದ್ದಾರೆ. ಈ ಕ್ಲಿಪ್ ವಿದೇಶಿ ಮಹಿಳೆ ಅನುಭವಿಸಿದ ಸುರಕ್ಷತೆಯ ಭಾವನೆಯನ್ನು ಎತ್ತಿ ತೋರಿಸಿದೆ. ಈ ವಿಡಿಯೋದಲ್ಲಿ ಸುರಕ್ಷತೆ ಹಾಗೂ ಭದ್ರತೆಯಲ್ಲಿ ಬೆಂಗಳೂರನ್ನು ಹಾಡಿ ಹೊಗಳಿದ್ದಾರೆ.
serenaspeaksalot ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸೆರೆನಾ ಎಂಬ ವಿದೇಶಿ ಮಹಿಳೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಭಾರತದಲ್ಲಿ ವಾಸಿಸುವುದರಿಂದ ನನಗೆ ಸಿಕ್ಕ ಲಾಭಗಳು ಇಲ್ಲಿ ಸುರಕ್ಷಿತವೆನಿಸುತ್ತದೆ, ಅದರ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಬರೆದುಕೊಂಡಿದ್ದಾರೆ.
https://www.instagram.com/reel/DRENgzzk5MA/?igsh=Y3Y5aXR4YnBtMWQ5