Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಸೀಸನ್ ಆರಂಭಗೊಂಡ ದಿನಾನೇ ಎಂಟ್ರಿ ಕೊಟ್ಟಿದ್ದರೂ ಸರ್ಪ್ರೈಸ್ ಎಲಿಮಿನೇಶನ್ ಮೂಲಕ ಹೊರಬಂದಿದ್ದರು. ಆದರೆ ಆ ಬಳಿಕ ಜನರು ಆಕೆ ದೊಡ್ಮನೆಗೆ ಮರಳಬೇಕೆಂದು ಪಟ್ಟು ಹಿಡಿದಿದ್ದರು. ಅದರಂತೇ ರಕ್ಷಿತಾ ಒಂದು ವಾರದ ಬಳಿಕ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ಆಕೆ ಎಂಟ್ರಿಯಾಗಿದ್ದೇ ಆಗಿದ್ದು ಫುಲ್ ಹೈಫ್ ಕ್ರಿಯೇಟ್ ಆಗಿದೆ.
ರಕ್ಷಿತಾ ಶೆಟ್ಟಿ ತಾಯಿ ಮೂಲ ಮಂಗಳೂರಿನವರು. ರಕ್ಷಿತಾ ಶೆಟ್ಟಿ ಹುಟ್ಟಿದ್ದು ಪಡುಬಿದ್ರೆಯಲ್ಲಿ. ಆದರೆ, ಬೆಳೆದಿದ್ದು, ಓದಿದ್ದೆಲ್ಲಾ ಮುಂಬೈನಲ್ಲಿ. ಮನೆಯಲ್ಲಿ ರಕ್ಷಿತಾ ಶೆಟ್ಟಿ ಮಾತೃಭಾಷೆ ತುಳು ಆದ ಕಾರಣ ಅವರಿಗೆ ಕನ್ನಡ ಸರಿಯಾಗಿ ಬರಲ್ಲ. ಆದ್ರೆ ಕನ್ನಡದ ಬಗ್ಗೆ ಅಪಾರ ಅಭಿಮಾನ ಇರುವ ರಕ್ಷಿತಾ ಕಷ್ಟಪಟ್ಟು, ಇಷ್ಟಪಟ್ಟು ಕನ್ನಡ ಮಾತನಾಡುತ್ತಾರೆ. ಹಾಗೆಯೇ ವಿಡಿಯೋ ಕೂಡ ಮಾಡುತ್ತಾರೆ. ಬರೀ ಕನ್ನಡ ಅಲ್ಲ.. ತುಳು, ಹಿಂದಿ, ಇಂಗ್ಲೀಷ್ನಲ್ಲಿಯೂ ವ್ಲಾಗ್ಸ್, ರೀಲ್ಸ್ ಮಾಡುತ್ತಿರುತ್ತಾರೆ.
ಹಾಗಿದ್ದರೆ ರಕ್ಷಿತಾ ಶೆಟ್ಟಿ ಯುಟ್ಯೂಬ್ ಆದಾಯ ಎಷ್ಟು ಎಂದು ತಿಳಿಯುವ ಆಸೆ ಹಲವರಿಗೆ ಇದ್ದೇ ಇರುತ್ತದೆ. ನಿಖರವಾಗಿ ಇಂತಿಷ್ಟೇ ಎಂದು ಹೇಳಲು ಆಗದಿದ್ದರೂ, ಅವರ ಫಾಲೋವರ್ಸ್, ವ್ಯೂವ್ಸ್, ಅವರು ಹಾಕಿರುವ ವಿಡಿಯೋಗಳ ಆಧಾರದ ಮೇಲೆ ಇದರ ಲೆಕ್ಕಾಚಾರ ಹಾಕಲಾಗಿದೆ.
ಆದರೆ ಕೆಲವೊಂದು ಮೂಲಗಳ ಪ್ರಕಾರ ಅವರ ಸಂಭಾವನೆ ವಾರಕ್ಕೆ 25 ಸಾವಿರ ಎಂದು ಹೇಳಲಾಗುತ್ತಿದೆಯಾದರೂ ಅದರ ಸ್ಪಷ್ಟತೆ ಇಲ್ಲ. ಇನ್ನು ರಕ್ಷಿತಾ ಅವರ ಯೂಟ್ಯೂಬ್ ಆದಾಯದ ಬಗ್ಗೆ ಮಾತನಾಡೋಣ. ಉದಾಹರಣೆಗೆ, ಒಬ್ಬ ಯೂಟ್ಯೂಬರ್ 3,00,000 ಚಂದಾದಾರರನ್ನು ಹೊಂದಿದ್ದರೆ ಜಾಹೀರಾತುಗಳಿಂದ ಮಾಸಿಕ ರೂ.88840 ರಿಂದ ರೂ. 534417 ವರೆಗೆ ಗಳಿಸಬಹುದು. ಇದರ ಹೊರತಾಗಿ ಕಂಟೆಂಟ್ ಲೈಸನ್ಸಿಂಗ್ ಮತ್ತು ಬ್ರ್ಯಾಂಡ್ ಡೀಲ್ಗಳಿಂದ ಒಂದು ವರ್ಷದಲ್ಲಿ $50,000 ಕ್ಕಿಂತ ಹೆಚ್ಚು ಗಳಿಸಬಹುದು. ಹೀಗಿರುವಾಗ ರಕ್ಷಿತಾ ಶೆಟ್ಟಿಯವರು 272K subscribersನ್ನು ಹೊಂದಿದ್ದಾರೆ. ಅವರ ಆದಾಯ ಇದರ ಆಸುಪಾಸಿನಲ್ಲೇ ಇರಬಹುದು ಎಂದು ಅಂದಾಜಿಸಬಹುದಾಗಿದೆ.