Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಆಂಧ್ರಪ್ರದೇಶ: ಕಳಪೆ ಶೈಕ್ಷಣಿಕ ಸಾಧನೆಯಿಂದಾಗಿ ಶಾಲೆಯಲ್ಲಿ ಶಿಕ್ಷಕರು ಬೈಯುತ್ತಾರೆ ಎಂಬ ಕಾರಣಕ್ಕಾಗಿ ಇಬ್ಬರು ವಿದ್ಯಾರ್ಥಿನಿಯರು ಶಾಲೆಯಿಂದ ತಪ್ಪಿಸಿಕೊಂಡು ಕಾಡಲ್ಲಿನ ಗುಹೆಯಲ್ಲಿ ನಾಲ್ಕು ದಿನ ಅಡಗಿಕೊಂಡ ಘಟನೆ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಪೆದಬಯಲು ಆಶ್ರಮ ಬಾಲಕಿಯರ ಶಾಲೆಯಲ್ಲಿ ನಡೆದಿದೆ.
ಇಲ್ಲಿನ 5 ಮತ್ತು 6ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಅಧ್ಯಯನದಲ್ಲಿ ಚುರುಕು ಇಲ್ಲದ ಕಾರಣ ಅವರಲ್ಲಿಯೇ ಉತ್ತಮವಾಗಿ ಅಸಮಾಧಾನವಿತ್ತು. ಇದರಿಂದ ಶಾಲೆಯಲ್ಲಿ ಶಿಕ್ಷಕರು ವಾಗ್ದಂಡನೆ ನೀಡಲಿದ್ದಾರೆ ಎಂದು ಹೆದರಿದ್ದರು.
ಯಾರಿಗೂ ತಿಳಿಸದೆ ಇಬ್ಬರೂ ಶಾಲೆಯಿಂದ ನೇರವಾಗಿ ಕೊಂಚೂರು ಬೆಟ್ಟಗಳಿಗೆ ಹೋಗಿದ್ದಾರೆ. ಅಲ್ಲಿ ಅವರು ಒಂದು ಸಣ್ಣ ಗುಹೆಯನ್ನು ಕಂಡುಕೊಂಡಿದ್ದಾರೆ. ಅಲ್ಲಿಯೇ ಅಡಗಿಕೊಳ್ಳಲು ನಿರ್ಧರಿಸಿದ್ದಾರೆ. ನಾಲ್ಕು ದಿನ ಆ ಹುಡುಗಿಯರು ಕಾಡಲ್ಲಿ ಸಿಕ್ಕ ಆಹಾರವನ್ನೇ ತಿಂದು ಮತ್ತು ಹತ್ತಿರದ ಹರಿಯುತ್ತಿದ್ದ ನೀರು ಕುಡಿದು ಬದುಕುಳಿದಿದ್ದಾರೆ.
ಇಬ್ಬರು ಕಣ್ಮರೆಯಾದ ಬಗ್ಗೆ ಶಾಲಾ ಅಧಿಕಾರಿಗಳು ನವೆಂಬರ್ 8 ರಂದು ಪೆದಬಯಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗ್ರಾಮದ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳನ್ನು ಶೋಧಿಸಲು ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದಾರೆ. ಡ್ರೋನ್ ಕ್ಯಾಮೆರಾಗಳ ಸಹಾಯದಿಂದ ಕೊಂಚೂರು ಬೆಟ್ಟದ ಗುಹೆಗಳ ಬಳಿ ಜಾಲಾಡಿದ್ದಾರೆ.