Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆ ಮೇಲೆ ಭಾಷಣ ಮಾಡಿ ಮುಜುಗರಕ್ಕೀಡಾದ ಪ್ರಸಂಗ ನಡೆದಿದೆ.
ಚುನಾವಣೆ ವೇಳೆ ಕಾಂಗ್ರೆಸ್ ಗ್ಯಾರಂಟಿ ಕುರಿತು ನಾಯಕರು ಮಾಡಿದ ಪ್ರಚಾರ ಭಾಷಣಗಳು ಭಾರೀ ಜನಪ್ರಿಯತೆ ಪಡೆದಿವೆ.
ಈ ಪೈಕಿ ಸಿದ್ದರಾಮಯ್ಯನವರ ನನಗೂ ಫ್ರೀ, ಕಾಕಾ ಪಾಟೀಲನಿಗೂ ಫ್ರೀ ಎಂದಿರುವ ಭಾಷಣ ವೈರಲ್ ಆಗಿತ್ತು.
ಇದೀಗ ಕುರುಬರ ಸಂಘದ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಉಚಿತ ಬಸ್ ಕುರಿತು ಮಾತನಾಡಿದ ಸಿದ್ದರಾಮಯ್ಯ, ವೇದಿಕೆ ಮೇಲಿದ್ದ ಹೆಚ್.ಎಂ. ರೇವಣ್ಣನತ್ತ ನೋಡಿ ಭಾಷಣ ಮಾಡಿದ್ದಾರೆ.
ಈ ವೇಳೆ ಉಚಿತ ಬಸ್ ನನ್ನ ಹೆಂಡತಿಗೂ ಫ್ರೀ, ರೇವಣ್ಣ ಹೆಂಡತಿಗೂ ಫ್ರೀ ಎಂದು ಭಾಷಣ ಮಾಡಿದ್ದಾರೆ. ಈ ವೇಳೆ ಕಾಂಗ್ರೆಸ್ ಮುಖಂಡರು ರೇವಣ್ಣ ಹೆಂಡತಿ ತೀರಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ.
ಆಗ ಸಿದ್ದರಾಮಯ್ಯ ಮುಜುಗರಕ್ಕೀಡಾದರು. ಆದರೆ ತೋರ್ಪಡಿಸದೆ ಸಿದ್ದರಾಮಯ್ಯ, ತಕ್ಷಣ ಮಾತು ಬದಲಿಸಿದ್ದಾರೆ. ಹೇಳಿಕೆ ಸರಿಪಡಿಸಿಕೊಂಡ ಸಿದ್ದರಾಮಯ್ಯ, ಇದ್ದಾಗ ಅವರೂ ಫ್ರೀ ಆಗಿ ಓಡಾಡಬಹುದಿತ್ತು ಎಂದು ಹೇಳಿದ್ದು ಎಂದಿದ್ದಾರೆ.
ಗ್ಯಾರಂಟಿ ಯೋಜನೆಗಳ ಕುರಿತು ಪ್ರಸ್ತಾಪಿಸಿ ಸಿದ್ದರಾಮಯ್ಯ ಮಾಡಿದ ಬಹುತೇಕ ಎಲ್ಲಾ ಭಾಷಣ ವೈರಲ್ ಆಗಿದೆ. ಇದೀಗ ಈ ಭಾಷಣವೂ ಸೇರಿಕೊಂಡಿದೆ. ಚುನಾವಣೆ ವೇಳೆ ಡಿಕೆ ಶಿವಕುಮಾರ್ ಮಾಡಿರುವ ಉಚಿತ, ಖಚಿತ, ನಿಶ್ಚಿತ ಭಾಷಣ ಕೂಡ ಅಷ್ಟೇ ವೈರಲ್ ಆಗಿತ್ತು.
ದೆಹಲಿ ಕಾರು ಸ್ಫೋಟ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಪ್ರಧಾನಿ, ಸಂಜೆ ಭದ್ರತಾ ಸಭೆ