Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಆನೇಕಲ್: ಇನ್ವಿಟೇಷನ್ ಕಾರ್ಡ್ ಕೊಡೋಕೆ ಬಂದಿದ್ದೇವೆ ಎಂದು ಹೇಳಿ ಮನೆಗೆ ಬಂದು ದರೋಡೆ ಮಾಡಿರುವ ಘಟನೆ ಆನೇಕಲ್ ತಾಲ್ಲೂಕಿನ ನೆರಳೂರು ಗ್ರಾಮದಲ್ಲಿ ನಡೆದಿದೆ.
ಕೈಯಲ್ಲಿ ವಿವಾಹದ ಆಹ್ವಾನ ಪತ್ರಿಕೆ ಹಿಡಿದು ಕಾರ್ಡ್ ಕೊಡಬೇಕಿದೆ ಅಮ್ಮಾಎಂದು ಮನೆಯಲ್ಲಿ ಒಳ ನುಗ್ಗಿದ್ದಾರೆ. ವಿನಯಪೂರ್ವಕವಾಗಿ ಮಾತನಾಡಿ ನಂಬಿಕೆ ಗಳಿಸಿದ ಮಹಿಳಾ ಆರೋಪಿ, ಸ್ವಲ್ಪ ನೀರು ಕೊಡ್ತೀರಾ? ಎಂದು ಕೇಳಿದ್ದಾರೆ. ಆ ತಕ್ಷಣ ನಾಗವೇಣಿ ಅಡುಗೆಮನೆಗೆ ತೆರಳಿ ನೀರು ತರಲು ಹೋಗಿದ್ದಾರೆ. ಇದೇ ಸಂಧರ್ಭ ಬಾಗಿಲ ಹೊರಗಿದ್ದ ಪುರುಷ ಆರೋಪಿ ಒಳನುಗ್ಗಿ, ಇಬ್ಬರೂ ಸೇರಿ ನಾಗವೇಣಿಯನ್ನು ಹಿಡಿದು ಕೈಕಾಲು ಕಟ್ಟಿ, ಅವರು ಕತ್ತಿಗೆ ಚಾಕು ಇಟ್ಟು ಬೆದರಿಸಿ, ಬೀರುವಿನ ಲಾಕರ್ ಕೀ ಕೇಳಿಕೊಂಡು ಸುಮಾರು 200 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ನಾಗವೇಣಿ ಬೆದರಿಕೆಯಿಂದ ತತ್ತರಿಸಿದರೂ, ಅಪಾಯ ಕಡಿಮೆಯಾದ ತಕ್ಷಣ ಮೊಬೈಲ್ ಮೂಲಕ ಸ್ನೇಹಿತೆಗೆ ಕರೆಮಾಡಿ ಘಟನೆಯ ಮಾಹಿತಿ ನೀಡಿದ್ದಾರೆ. ಸ್ನೇಹಿತೆ ತಕ್ಷಣ ನೆರಳೂರಿನ ನಿವಾಸಿಗಳನ್ನು ಹಾಗೂ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಇದಾದ ನಂತರ ಬಾಗಿಲು ತೆರೆದು ನಾಗವೇಣಿ ವಿಚಾರಿಸಿದ್ದಾರೆ.
ರವಿಕುಮಾರ್ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಘಟನೆಯ ಸಮಯದಲ್ಲಿ ಕೆಲಸಕ್ಕೆ ಹೋಗಿದ್ದಾರೆ. ಮನೆಯಲ್ಲಿ ಗೃಹಿಣಿ ನಾಗವೇಣಿ ಒಬ್ಬರೇ ಇದ್ದರು. ಈ ಸಂದರ್ಭದಲ್ಲಿ ಕಳ್ಳರ ಖತರ್ನಾಕ್ ಜೋಡಿ ಮನೆ ಬಾಗಿಲು ತಟ್ಟಿ ವಿಕೃತಿ ಮೆರೆದಿದೆ.