Subscribe ನ್ಯೂಸಿಕ್ಸ್ ಕನ್ನಡ NewsicsKannada/YouTub
newsics.com
ಬಿಗ್‌ಬಾಸ್ ಮನೆಯಿಂದ ಹೊರಬಂದಿರುವ ಮಲ್ಲಮ್ಮ ಅವರಿಗೆ ಸಖತ್ ಬೇಡಿಕೆ ಬಂದಿದೆ. ತಮ್ಮ ಎಲಿಮಿನೇಷನ್ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಸಾಲ ತೀರಿಸಲು ಇನ್ನಷ್ಟು ದಿನ ಇರಬೇಕಿತ್ತು ಎಂದು ಮಲ್ಲಮ್ಮ ಕೂಡ ನೋವು ತೋಡಿಕೊಂಡಿದ್ದಾರೆ.
ಇದೀಗ ಮಲ್ಲಮ್ಮ ಪುನಃ ಬಿಗ್‌ಬಾಸ್‌ಗೆ ಹೋಗುವ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಮಾತನಾಡುತ್ತಾ, ಮತ್ತೊಮ್ಮೆ ಬಿಗ್‌ಬಾಸ್‌ಗೆ ಹೋಗುವ ಅವಕಾಶ ಸಿಕ್ಕರೆ ಹೋಗುತ್ತೀರಾ ಎಂದು ಪ್ರಶ್ನಿಸಿದಾಗ, ಒಹೊ ಈಗಲೇ ಹೋಗುತ್ತೇನೆ. ಅದಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.
ಇನ್ನು ಮಲ್ಲಮ್ಮ ಅವರು ಬಿಗ್‌ಬಾಸ್ ಮನೆಯಲ್ಲಿ ಯಾವುದೇ ಜಗಳ ಮಾಡದೇ, ಎಲ್ಲರ ಅಮ್ಮ ಆಗಿದ್ದವರು. ಇಂಥವರಿಗೆ ಬಿಗ್‌ಬಾಸ್‌ನಲ್ಲಿ ಜಾಗ ಇಲ್ಲ. ಅಲ್ಲಿ ಏನಿದ್ದರೂ ಗಲಾಟೆ, ಗದ್ದಲ ಮಾಡುತ್ತಾ, ಲವ್ ಸೀನ್ ಕ್ರೀಯೇಟ್ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿ ಇರುವವರಿಗೆ ಮಾತ್ರ ಜಾಗ ಎಂದು ಹಲವರು ಇದಾಗಲೇ ಮಲ್ಲಮ್ಮನವರ ಎಲಿಮಿನೇಷನ್ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ.
ಅದೇನೇ ಇದ್ದರೂ ಬಿಗ್‌ಬಾಸ್‌ಗೆ ಹೋಗಿ ಒಳ್ಳೆಯ ಹೆಸರು ಮಾಡಿರುವ ಕೆಲವೇ ಕೆಲವು ಜನರಲ್ಲಿ ಮಲ್ಲಮ್ಮ ಅವರು ನಿಂತಿರುವುದೇ ಅವರ ಗೌರವಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತಿದೆ.