Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹಾಸನ : ಯುವತಿ ವಿಚಾರಕ್ಕೆ ಗ್ಯಾಂಗ್ ಒಂದು ಯುವಕನ ಬಟ್ಟೆ ಬಿಚ್ಚಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಹಾಸನ ಹೊರವಲಯದ ಗೆಂಡೆಕಟ್ಟೆ ಅರಣ್ಯ ವಲಯದಲ್ಲಿ ನಡೆದಿದೆ.
ಬಟ್ಟೆ ಬಿಚ್ಚಿ ಭರತ್ ಎಂಬ ಯುವಕನ ಮೇಲೆ ಗುಂಪು ಹಲ್ಲೆ ನಡೆಸಿದೆ. ಯುವತಿ ಹಾಗೂ ಹಣದ ವಿಚಾರಕ್ಕೆ ಯುವಕನನ್ನ ನಿರ್ಜನ ಪ್ರದೇಶಕ್ಕೆ ಕರೆತಂದು ಯುವಕನ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಲಾಗಿದೆ.
ಅಲ್ಲದೇ ಯುವಕನ ಪ್ಯಾಂಟ್ ಕೂಡ ಬಿಚ್ಚಿಸುವಂತೆ ಒತ್ತಾಯಿಸಲಾಗಿದೆ. ಕೆಲವರು ಭರತ್ ಮೇಲೆ ಹಲ್ಲೆ ನಡೆಸುತ್ತಿದರೆ , ಕೆಲವರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.newsics.com/2025/11/04/pavithra-gowda-again-faces-the-supreme-court/