Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ನ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಮುಂಬೈಯಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಟ್ರೋಫಿಗಾಗಿ ಹಣಾಹಣಿ ನಡೆಯಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಐಸಿಸಿ ಮಹಿಳಾ ವಿಶ್ವಕಪ್‌ನ ಅಂತಿಮ ಪಂದ್ಯಕ್ಕೂ ಮುನ್ನ ಜನರು ಟೀಮ್ ಇಂಡಿಯಾದ ಗೆಲುವಿಗಾಗಿ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಇದುವರೆಗೆ ಆಸ್ಟ್ರೇಲಿಯಾ ತಂಡ 7 ಬಾರಿ ವಿಶ್ವಕಪ್ಗೆ ಮುತ್ತಿಕ್ಕಿದೆ. ಹಾಗೇ ಇಂಗ್ಲೆಂಡ್ ಮಹಿಳೆಯರು ಕೂಡ ನಾವೇನು ಕಮ್ಮಿ ಇಲ್ಲ ಎನ್ನುವಂತೆ 4 ಬಾರಿ ವರ್ಲ್ಡ್ಕಪ್ ಗೆದ್ದುಕೊಂಡಿದ್ದಾರೆ. ಈ ಮೊದಲು ಟೀಮ್ ಇಂಡಿಯಾ ಎರಡು ಬಾರಿ ಫೈನಲ್ಗೆ ಹೋದರೂ ಕಪ್ ಗೆಲ್ಲದೇ ನಿರಾಸೆ ಅನುಭವಿಸಿತ್ತು. ಈ ಬಾರಿ ಮತ್ತೆ ಅವಕಾಶ ಒಲಿದು ಬಂದಿದೆ.