Subscribe ನ್ಯೂಸಿಕ್ಸ್ ಕನ್ನಡ
NewsicsKannada/ YouTube
newsics.com
ನವದೆಹಲಿ: ಭಾರತದಲ್ಲಿ ಶೀಘ್ರದಲ್ಲೇ ಅಧಿಕೃತ ‘ಕಾಲರ್ ಗುರುತಿಸುವಿಕೆ ವ್ಯವಸ್ಥೆ ಜಾರಿಗೆ ಬರಲು ಸಿದ್ಧವಾಗಿದ್ದು, ಇದು ಟ್ರೂಕಾಲರ್‌ನಂತಹ ಮೂರನೇ ವ್ಯಕ್ತಿಯ ಆ್ಯಪ್‌ಗಳನ್ನು ಅವಲಂಬಿಸುವುದಿಲ್ಲ. ಕರೆ ಸ್ವೀಕರಿಸುವವರ ಫೋನ್ ಪರದೆಯ ಮೇಲೆ ಕರೆ ಮಾಡಿದವರ ನಿಜವಾದ ಹೆಸರನ್ನು ಪ್ರದರ್ಶಿಸುವ ಹೊಸ ವ್ಯವಸ್ಥೆಯನ್ನು ಪರಿಚಯಿಸುವ ದೂರಸಂಪರ್ಕ ಇಲಾಖೆ ಪ್ರಸ್ತಾವನೆಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಒಪ್ಪಿಗೆ ನೀಡಿದೆ.
ಮೊಬೈಲ್ ಕರೆಗಳು ಇಂದು ಸಾಮಾನ್ಯವಾಗಿದೆ. ಆದರೆ ಸ್ಪ್ಯಾಮ್, ವಂಚನೆ ಮತ್ತು ಅನಗತ್ಯ ಕರೆಗಳಿಂದಾಗಿ ಅನಾನುಕೂಲ ಹೆಚ್ಚಾಗಿದೆ. ಇದಕ್ಕೆಲ್ಲ ಕಡಿವಾಣ ಹಾಕುವ ದೃಷ್ಟಿಯಿಂದ ಭಾರತ ಮೊದಲ ದೊಡ್ಡ ಹೆಜ್ಜೆಯನ್ನಿಟ್ಟಿದೆ. TRAI ದೂರ ಸಂಪರ್ಕ ಇಲಾಖೆ (DoT) ಪರಿಚಯಿಸಿದ caller ID ಯೋಜನೆಯನ್ನು ಅನುಮೋದಿಸಿದೆ. ಅದರ ಅಡಿಯಲ್ಲಿ ನೇಮ್ ಡಿಸ್ಪ್ಲೇ ನೆಟ್ವರ್ಕ್ ಮಟ್ಟದಲ್ಲಿ ಕಾರ್ಯ ನಿರ್ವಹಿಸಲಿದೆ.
CNAP ಎಂದು ಕರೆಯಲಾಗಿರುವ ಈ ಸೇವೆಯು ಫೋನ್ ಕರೆ ಬರುತ್ತಿದ್ದಂತೆಯೇ ಹೆಸರು ತೋರಿಸಲಿದೆ. ಸಿಮ್ ಖರೀದಿ ವೇಳೆ ನೀಡಿರುವ ಹೆಸರೇ ಇಲ್ಲಿ ಡಿಸ್ಪ್ಲೇ ಆಗಲಿದೆ. ಅಲ್ಲಿ ನೀಡಲಾಗಿರುವ ಹೆಸರನ್ನೇ ನೆಟ್ವರ್ಕ್ ಆಪರೇಟರ್ ನಮೂದಿಸುತ್ತಾರೆ. 4G, 5G ನೆಟ್ವರ್ಕ್ನಲ್ಲಿ ಕರೆ ಮಾಡಿದ್ದರೆ ಹೆಸರು ಮತ್ತು ನಂಬರ್ ಎರಡೂ ಡಿಸ್ಪ್ಲೇ ಆಗಲಿದೆ.
https://www.newsics.com/2025/10/30/us-china-presidents-meet-after-6-years/