Subscribe ನ್ಯೂಸಿಕ್ಸ್ ಕನ್ನಡ
NewsicsKannada/ YouTube
newsics.com
ಚಿಕ್ಕಮಗಳೂರು: ಭಾನುವಾರ ಬೆಳಗ್ಗೆ ಬೇಲೂರಿನಿಂದ ಹರಿಹರಕ್ಕೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಯ ಪಾಲಾದ ಘಟನೆ ಮಾಗಡಿ ಕೆರೆಯ ತೀರದಲ್ಲಿ ನಡೆದಿದೆ.
ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರೂ, ಕಾರು ಸಂಪೂರ್ಣ ಮುಳುಗಿತ್ತು. ಸ್ಥಳೀಯ ಪೊಲೀಸ್ ಅಧಿಕಾರಿಗಳ ಸೂಚನೆ ಭಟಭಬ ಮೇರೆಗೆ ಕ್ರೇನ್ ಸಹಾಯದಿಂದ ಕಾರನ್ನು ಹೊರತೆಗೆಯಲಾಯಿತು. ಈ ವೇಳೆ ಒಂದು ಬ್ಯಾಗ್ ಕೆರೆಯಲ್ಲಿ ಬಿದ್ದಿರುವುದು ಗಮನಕ್ಕೆ ಬಂತು. ಅದನ್ನು ಪತ್ತೆಹಚ್ಚಲು ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡಿತು. ಹಲವು ಗಂಟೆಗಳ ಶೋಧದ ಬಳಿಕ, ಕೆರೆಯ ಅಡಿಯಲ್ಲಿ ಬಿದ್ದಿದ್ದ ಆ ಬ್ಯಾಗ್ ಪತ್ತೆಯಾಯಿತು.
ಪತ್ತೆಯಾದ ಬ್ಯಾಗ್ನಲ್ಲಿ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಇದ್ದವು. ತನಿಖೆಯ ಪ್ರಾಥಮಿಕ ವರದಿಯ ಪ್ರಕಾರ, ಆ ಚಿನ್ನ ಬೇಲೂರಿನ ಮದುವೆ ಸಂಬಂಧಿಕರ ಆಸ್ತಿ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಮೊಂಥಾ ಚಂಡಮಾರುತ ಆರ್ಭಟ : ಆಂಧ್ರ, ಓಡಿಶಾ ದಲ್ಲಿ ಭಾರೀ ಮಳೆ – 120 ರೈಲು ರದ್ದು, ಸಮುದ್ರ ತೀರದ ಜನರ ಸ್ಥಳಾಂತರ
ಬೆಂಗಳೂರಿನ ದೇವಸ್ಥಾನಕ್ಕೆ ನುಗ್ಗಿ ದೇವರ ವಿಗ್ರಹ ವಿರೂಪಗೊಳಿಸಿದ ಬಾಂಗ್ಲಾ ಪ್ರಜೆ