Subscribe ನ್ಯೂಸಿಕ್ಸ್ ಕನ್ನಡ
NewsicsKannada/ YouTube
newsics.com
ಶಿಲ್ಪಾ ಶೆಟ್ಟಿ ಸೇರಿ ಇನ್ನೂ ಕೆಲವರು ಹೊಟೇಲ್ ಉದ್ಯಮಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ತಮ್ಮ ಹೋಟೆಲ್ ಬ್ರ್ಯಾಂಚ್‌ಗಳನ್ನು ಶುರು ಮಾಡಿದ್ದಾರೆ. ಹೀಗೆ ಹಲವರು ಹಲವು ರೀತಿಯ ಉದ್ಯಮಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಆ ಪೈಕಿ ಮೌನಿ ರಾಯ್ ಕೂಡ ಒಬ್ಬರು.
ಬದ್ಮಾಶ್ ಅನ್ನೋದು ಮೌನಿ ರಾಯ್ ರೆಸ್ಟೋರೆಂಟ್ ಹೆಸರು. ಬೆಂಗಳೂರಿನ ಸರ್ಜಾಪುರದಲ್ಲಿ ಅವರು 2023ರಲ್ಲಿ ಮೊದಲ ಔಟ್ಲೆಟ್ ಆರಂಭಿಸಿದರು. ಈಗ ಮುಂಬೈ, ಕೋಲ್ಕತ್ತ ಸೇರಿದಂತೆ ಆರು ಕಡೆಗಳಲ್ಲಿ ಅವರ ಹೋಟೆಲ್ ಇದೆ. ಈ ರೆಸ್ಟೋರೆಂಟ್ಗೆ ಭೇಟಿ ನೀಡಬೇಕು ಎಂದರೆ ನೀವು ದೊಡ್ಡ ಮೊತ್ತ ತೆತ್ತಲು ರೆಡಿ ಇರಬೇಕು. ಇಲ್ಲಿನ ತಿಂಡಿಗಳ ಬೆಲೆ 300 ರೂಪಾಯಿಯಿಂದ ಆರಂಭ ಆಗಿ 800 ರೂಪಾಯಿವರೆಗೆ ಇದೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ಕೇವಲ ಒಂದು ಗುಲಾಬ್ ಜಾಮೂನ್ ತಿನ್ನಬೇಕು ಅಂದರೆ ₹410 ರೂಪಾಯಿ ಕೊಡಬೇಕು. ಭೇಲ್ ಪುರಿ ತಿನ್ನುವ ಆಸೆ ಆದರೆ ₹395 ನೀಡಬೇಕು. ಮಸಾಲಾ ಪೀನಟ್, ಮಸಾಲಾ ಪಾಪಡ್, ಕ್ರಿಸ್ಪಿ ಕಾರ್ನ್ ಮತ್ತು ಸೇವ್‌ಪುರಿಗೆ ₹295 ದರವನ್ನು ನಿಗದಿ ಮಾಡಲಾಗಿದೆ. ಕಾಂದಾ ಭಜ್ಜಿ ನಿಮಗೆ ಇಷ್ಟ ಇದ್ದರೆ ₹355 ನೀಡಬೇಕು.
ಇನ್ನು ಸಿಗಡಿಯಿಂದ ಮಾಡಿದ ತಿಂಡಿಗಳಿಗೆ ₹795 ಕೊಡಬೇಕು. ತಂದೂರಿ ರೋಟಿ ಒಂದಕ್ಕೆ 105 ರೂಪಾಯಿ ಆದರೆ ನಾನ್ 115 ರೂಪಾಯಿ ಮತ್ತು ಅಮೃತಸರಿ ಕುಲ್ಚಾ 145 ರೂಪಾಯಿ ನಿಗದಿ ಮಾಡಲಾಗಿದೆ.
ತಾವು ಆರಂಭಿಸಿದ ಹೋಟೆಲ್ ಎಂಬ ಕಾರಣಕ್ಕೆ ಅವರ ಫ್ಯಾನ್ಸ್ ಬಂದೇ ಬರುತ್ತಾರೆ ಎಂಬ ನಂಬಿಕೆ ಸೆಲೆಬ್ರಿಟಿಗಳದ್ದು. ಈ ಕಾರಣದಿಂದಲೇ ದುಬಾರಿ ಬೆಲೆಯನ್ನು ನಿಗದಿ ಮಾಡಲಾಗುತ್ತದೆ.
ಸದ್ಯಕ್ಕೆ ಮೌನಿ ರಾಯ್ ಒಡೆತನದ ಬದ್ಮಾಶ್ ರೆಸ್ಟೋರೆಂಟ್‌ನ ಈ ಮೆನ್ಯೂ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಪರ- ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕೆಲವರು ಮೌನಿ ಪರ ವಕಾಲತ್ತು ವಹಿಸಿದರೆ ಇನ್ನೂ ಕೆಲವರು ದರ ತುಂಬಾ ದುಬಾರಿ ಆಯ್ತು ಎಂದು ಹೇಳುತ್ತಿದ್ದಾರೆ.