Subscribe ನ್ಯೂಸಿಕ್ಸ್ ಕನ್ನಡ
NewsicsKannada/ YouTube
newsics.com
ಬೆಂಗಳೂರು: ಮೊಂತಾ ಚಂಡಮಾರುತ ಇಂದು ಒಡಿಶಾ ಮತ್ತು ಆಂಧ್ರಪ್ರದೇಶಗಳಿಗೆ ಅಪ್ಪಳಿಸಿದೆ. ಹೀಗಾಗಿ, ಈ ಎರಡೂ ರಾಜ್ಯಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಆಂಧ್ರಪ್ರದೇಶದಲ್ಲಿ 65ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಕರ್ನಾಟಕದ ನೆರೆಯ ರಾಜ್ಯವಾದ್ದರಿಂದ ಈ ಚಂಡಮಾರುತದ ಪರಿಣಾಮ ನಮ್ಮ ರಾಜ್ಯದ ಮೇಲೂ ಬೀರುವ ಸಾಧ್ಯತೆಯಿದೆ. ಬೆಂಗಳೂರಿನಿಂದ ಆಂಧ್ರದ ಮೂಲಕ ಸಾಗುವ ರೈಲುಗಳ ಸಮಯದಲ್ಲಿ ಬದಲಾವಣೆಯಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಬೆಂಗಳೂರಿನ 2 ಏರ್ ಇಂಡಿಯಾ ವಿಮಾನ ಕೂಡ ರದ್ದಾಗಲಿದೆ.
ಇಂಡಿಗೋ ವಿಮಾನ ಕೂಡ ನಾಳೆಯ ಹವಾಮಾನವನ್ನು ನೋಡಿಕೊಂಡು ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದೆ. ಇದರ ನಡುವೆ ಬೆಂಗಳೂರಿನಿಂದ ಹೊರಡುವ ಕೆಲವು ರೈಲುಗಳು 12 ಗಂಟೆ ತಡವಾಗಿ ಪ್ರಯಾಣ ಆರಂಭಿಸಲಿವೆ.
ರೈಲು ಸಂಖ್ಯೆ 22501 SMVT ಬೆಂಗಳೂರು – ನ್ಯೂ ತಿನ್ಸುಕಿಯಾ ಜಂಕ್ಷನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್.
2. ರೈಲು ಸಂಖ್ಯೆ 12836 SMVT ಬೆಂಗಳೂರು – ಹಟಿಯಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್.
3. ರೈಲು ಸಂಖ್ಯೆ 12503 SMVT ಬೆಂಗಳೂರು – ಅಗರ್ತಲಾ ಹಮ್ ಸಫರ್ ಎಕ್ಸ್‌ಪ್ರೆಸ್.
4. ರೈಲು ಸಂಖ್ಯೆ 12246 SMVT ಬೆಂಗಳೂರು – ಹೌರಾ ಜಂಕ್ಷನ್ ದುರಂತೋ ಎಕ್ಸ್‌ಪ್ರೆಸ್.
5. ರೈಲು ಸಂಖ್ಯೆ 12864 SMVT ಬೆಂಗಳೂರು – ಹೌರಾ ಜಂಕ್ಷನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್.
6. ರೈಲು ಸಂಖ್ಯೆ 13433 SMVT ಬೆಂಗಳೂರು – ಮಾಲ್ಡಾ ಟೌನ್ ಅಮೃತ್ ಭಾರತ್ ಎಕ್ಸ್‌ಪ್ರೆಸ್.
7. ರೈಲು ಸಂಖ್ಯೆ 18048 ವಾಸ್ಕೊ ಡ ಗಾಮ – ಶಾಲಿಮಾರ್ ಅಮರಾವತಿ ಎಕ್ಸ್‌ಪ್ರೆಸ್.