Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ನೀರಿನಲ್ಲಿ ದೇಹ ಕರಗಿಸುವ ಪದ್ಧತಿ; ಅಂತ್ಯಕ್ರಿಯೆಗೆ ನೀರಿನ ದಹನಕ್ಕೆ ಮುಂದಾಗ್ತಿದ್ದಾರೆ ಜನರು
ಪ್ರಮುಖ

ನೀರಿನಲ್ಲಿ ದೇಹ ಕರಗಿಸುವ ಪದ್ಧತಿ; ಅಂತ್ಯಕ್ರಿಯೆಗೆ ನೀರಿನ ದಹನಕ್ಕೆ ಮುಂದಾಗ್ತಿದ್ದಾರೆ ಜನರು

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

NewsicsKannada/ YouTube

newsics.com

ಮನುಷ್ಯನ ಸಾವಿನ ನಂತ್ರ ಶವವನ್ನು ಹೂಳಲಾಗುತ್ತದೆ ಇಲ್ಲವೆ ಸುಡಲಾಗುತ್ತದೆ. ಹಿಂದೆ ಕಟ್ಟಿಗೆಗಳನ್ನು ಬಳಸಿ ಮೃತ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಲಾಗ್ತಾಯಿತ್ತು. ಈಗ ಮಿಶನ್ ಬಳಕೆ ಮಾಡಲಾಗ್ತಿದೆ. ಕರೆಂಟ್ ಬಳಸಿ ಅಂತ್ಯಸಂಸ್ಕಾರ ಮಾಡಲಾಗ್ತಿದೆ. ಪರಿಸರ ರಕ್ಷಣೆ ಬಗ್ಗೆ ಜನರ ಚಿಂತನೆ ಈಗ ಗಂಭೀರವಾಗಿದೆ. ಪರಿಸರ ರಕ್ಷಣೆ ಬಗ್ಗೆ ಆಲೋಚನೆ ಮಾಡ್ತಿರುವ ಜನರು, ನೀರಿನ ದಹನಕ್ಕೆ ಮುಂದಾಗ್ತಿದ್ದಾರೆ. ಇದನ್ನು ಕ್ಷಾರೀಯ ಜಲವಿಚ್ಛೇದನೆ ಎಂದೂ ಕರೆಯಲಾಗುತ್ತದೆ. ವೈಜ್ಞಾನಿಕವಾಗಿ ಇದಕ್ಕೆ ಅಕ್ವಾಮೇಷನ್ ಎಂದು ಹೆಸರಿದೆ.
ಅಕ್ವಾಮೇಷನ್ (Aquamation) ಅಂತ್ಯಸಂಸ್ಕಾರ ಅಂದ್ರೇನು? :
ಸಾಂಪ್ರದಾಯಿಕ ದಹನಕ್ಕೆ ಪರಿಸರ ಸ್ನೇಹಿ ಪರ್ಯಾಯವಾಗಿ ಇದು ಹೊರಹೊಮ್ಮುತ್ತಿದೆ. ಈ ಪ್ರಕ್ರಿಯೆಯಲ್ಲಿ ಬಿಸಿನೀರು ಮತ್ತು ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ ಮಿಶ್ರಣ ಬಳಸಲಾಗುತ್ತದೆ. ಇದರಲ್ಲಿ ದೇಹವನ್ನು ಕರಗಿಸಲಾಗುತ್ತದೆ. ದೇಹವನ್ನು ಶೇಕಡಾ 95 ರಷ್ಟು ನೀರು ಮತ್ತು ಶೇಕಡಾ 5 ರಷ್ಟು ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ ಹೊಂದಿರುವ ಉಕ್ಕಿನ ತೊಟ್ಟಿಗೆ ಹಾಕಲಾಗುತ್ತದೆ. ಸರಿಯಾದ ತಾಪಮಾನ ಬಳಕೆ ಇಲ್ಲಿ ಬಹಳ ಮುಖ್ಯ. ಸುಮಾರು150 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದಕ್ಕೆ ಅಗತ್ಯವಿದೆ. ಒತ್ತಡವನ್ನು 10–20 ವಾತಾವರಣದಲ್ಲಿ ನಿರ್ವಹಿಸಲಾಗುತ್ತದೆ. ದೇಹ ಕರಗಲು ಸಮಯ ತೆಗೆದುಕೊಳ್ಳುತ್ತದೆ. ಸುಮಾರು 3 ರಿಂದ 16 ಗಂಟೆಯೊಳಗೆ ದೇಹದ ಮೃದು ಅಂಗಗಳು ಕರಗುತ್ತವೆ. ದೇಹದ ಅಂಗಗಳು, ಅಮೈನೋ ಆಮ್ಲಗಳು, ಸಕ್ಕರೆಗಳು ಮತ್ತು ಲವಣಗಳಾಗಿ ಪರಿವರ್ತನೆಗೊಳ್ಳುತ್ತವೆ. ಈ ದ್ರವ ತುಂಬಾ ಸ್ವಚ್ಛವಾಗಿದ್ದು, ಅದನ್ನು ಒಳಚರಂಡಿ ಇದನ್ನು ಹಾಕ್ಬಹುದು. ಇದರಲ್ಲಿ ಯಾವುದೇ ಡಿಎನ್ಎ ಅಥವಾ ಅಂಗಾಂಶ ಇರುವುದಿಲ್ಲ. ಉಳಿದ ಮೂಳೆಗಳನ್ನು ಒಣಗಿಸಿ, 800-1000 ಡಿಗ್ರಿಗಳಲ್ಲಿ ಹುರಿಯಲಾಗುತ್ತದೆ ಮತ್ತು ಪುಡಿಮಾಡಲಾಗುತ್ತದೆ.
ಸಾಂಪ್ರದಾಯಿಕ ದಹನದಲ್ಲಿ ದೇಹಗಳನ್ನು ಸುಟ್ಟು ಬೂದಿ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಇಂಗಾಲದ ಡೈಆಕ್ಸೈಡ್ ಮತ್ತು ವಿಷಕಾರಿ ಅನಿಲಗಳನ್ನು ಗಾಳಿಯಲ್ಲಿ ಬಿಡುಗಡೆಯಾಗುತ್ತದೆ. ಒಂದು ಅಂತ್ಯಕ್ರಿಯೆಗೆ 400 ಲೀಟರ್ ಇಂಧನವನ್ನು ಸುಡಬೇಕು. ಹಾಗೆಯೇ 1.5 ಟನ್ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ. ದೇಹವನ್ನು ನೆಲದಲ್ಲಿ ಹೂಳಿದಾಗ, ನೀರಿನ ಮಾಲಿನ್ಯದ ಸಾಧ್ಯತೆಯಿದೆ. ನೀರಿನ ದಹನಕ್ಕೆ ಯಾವುದೇ ಸ್ಥಳ ಅಥವಾ ಶವಪೆಟ್ಟಿಗೆಯ ಅಗತ್ಯವಿಲ್ಲ. ಈ ಕ್ಷಾರೀಯ ಜಲವಿಚ್ಛೇದನೆ ಪರಿಸರ ಸ್ನೇಹಿಯಾಗಿದೆ. ಇದು ಗಾಳಿಯನ್ನು ಕಲುಷಿತಗೊಳಿಸುವುದಿಲ್ಲ. ನೀರನ್ನು ಕಲುಷಿತಗೊಳಿಸುವುದಿಲ್ಲ. ಅಕ್ವಾಮೇಷನ್ ಗೆ ಕೇವಲ 100 ಲೀಟರ್ ನೀರು ಸಾಕು. ಇದಕ್ಕೆ ಕಡಿಮೆ ವಿದ್ಯುತ್ ಬಳಸಲಾಗುತ್ತದೆ. ಇದು ಶೇಕಡಾ 90ರವರೆಗೆ ಇಂಧನ ಉಳಿಸುತ್ತದೆ.
ವಿದೇಶದಲ್ಲಿ ಈ ಪ್ರಕ್ರಿಯೆ ಹೆಚ್ಚು ಜನಪ್ರಿಯವಾಗ್ತಿದೆ. 28 ಯುಎಸ್ ರಾಜ್ಯಗಳಲ್ಲಿ ಕಾನೂನುಬದ್ಧವಾಗಿ ಇದನ್ನು ಗುರುತಿಸಲ್ಪಟ್ಟಿದೆ. ಅಂತ್ಯಕ್ರಿಯೆ ವೇಳೆ ಆಯ್ಕೆ ನೀಡಲಾಗುತ್ತದೆ. ಯುಕೆ, ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿಯೂ ಇದು ಹೆಚ್ಚು ಜನಪ್ರಿಯವಾಗುತ್ತಿದೆ. ಸಾಕುಪ್ರಾಣಿ ಅಕ್ವಾಮೇಷನ್ ಪ್ರಸಿದ್ಧಿ ಪಡೆದಿದ್ದು, ಇದ್ರ ಮಾರುಕಟ್ಟೆ 845 ಮಿಲಿಯನ್ ಡಾಲರ್ ಗಿಂತ ಹೆಚ್ಚಾಗಿದೆ.

ತಂತ್ರಜ್ಞಾನದ ಮಾಹಿತಿ ಕದಿಯಲು China-Russia ಲೈಂ*ಗಿಕ ಯುದ್ಧ!; ಸುಂದರಿಯರ ತೆಕ್ಕೆಗೆ ಟೆಕ್ ದೈತ್ಯರು

TAGGED:a new funeral ritual is gaining popularityThe practice of dissolving the body in water
Share This Article
Facebook Twitter Copy Link Print
Previous Article ತಂತ್ರಜ್ಞಾನದ ಮಾಹಿತಿ ಕದಿಯಲು China-Russia ಲೈಂ*ಗಿಕ ಯುದ್ಧ!; ಸುಂದರಿಯರ ತೆಕ್ಕೆಗೆ ಟೆಕ್ ದೈತ್ಯರು
Next Article ಮೆಂತ್ಯೆಯೊಂದಿಗೆ ಈ ವಸ್ತುವನ್ನು ಬೆರೆಸಿ ಹಚ್ಚಿದರೆ ಕೂದಲು ಸೊಂಪಾಗಿ ಬೆಳೆಯುತ್ತೆ

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?