Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಅಮೆರಿಕದಲ್ಲಿ ಎರಡು ಕಡೆ ಕೆಲಸ ಮಾಡುವುದು ತಪ್ಪಾ?; ಭಾರತದ ಟೆಕ್ಕಿಗೆ 15 ವರ್ಷ ಜೈಲು
ಪ್ರಮುಖವಿದೇಶ

ಅಮೆರಿಕದಲ್ಲಿ ಎರಡು ಕಡೆ ಕೆಲಸ ಮಾಡುವುದು ತಪ್ಪಾ?; ಭಾರತದ ಟೆಕ್ಕಿಗೆ 15 ವರ್ಷ ಜೈಲು

Share
2 Min Read
SHARE

subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ವಾಷಿಂಗ್ಟನ್: ಅಮೆರಿಕದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದುಕೊಂಡು ಒಂದೇ ಅವಧಿಯಲ್ಲಿ ಎರಡೆರಡು ಕಂಪನಿಗಳಿಗೆ ಕೆಲಸ ಮಾಡುತ್ತಾ ತಿಂಗಳಿಗೆ 40 ಲಕ್ಷ ರೂ.ಗಳಷ್ಟು ದುಡಿಯುತ್ತಿದ್ದ ಭಾರತ ಮೂಲದ ಇಂಜಿನಿಯರ್ ಗೆ 15 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿದೆ.

ಮೆಹುಲ್ ಗೋಸ್ವಾಮಿ (39) ಏಕಕಾಲದಲ್ಲಿ ಎರಡು ಕಡೆ ಕೆಲಸ ಮಾಡುತ್ತಿದ್ದ ಆರೋಪದ ಮೇರೆಗೆ ಇದೇ ಆಗಸ್ಟ್ ನಲ್ಲಿ ಅವರನ್ನು ಬಂಧಿಸಲಾಗಿತ್ತು. ಅವರು ನ್ಯೂಯಾರ್ಕ್ ನಲ್ಲಿ ವಾಸಿಸುತ್ತಿದ್ದರು. ನ್ಯೂಯಾರ್ಕ್ ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ ಕಚೇರಿಯಲ್ಲಿ ಪೂರ್ಣಾವಧಿ ಸರ್ಕಾರಿ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದಾಗಲೇ ಅವರು ಗ್ಲೋಬಲ್ ಫೌಂಡರೀಸ್ ಎಂಬ ಸೆಮಿಕಂಡಕ್ಟರ್ ಕಂಪನಿಯಲ್ಲಿಯೂ ಕಂಟ್ರಾಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರಿಂದ ನ್ಯೂಯಾರ್ಕ್ ಕಚೇರಿಯಲ್ಲಿ 50,000 ಡಾಲರ್ ಹಣ ದುರ್ಬಳಕೆಯಾಗಿತ್ತು ಎಂದು ಸ್ಥಳೀಯ ಪೊಲೀಸರಿಗೆ ಅನಾಮಧೇಯರಿಂದ ಒಂದು ಇ-ಮೇಲ್ ಬಂದಿತ್ತು.

ಆ ಇ-ಮೇಲ್ ಆಧಾರದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದರು. ತನಿಖೆಯಲ್ಲಿ ಮೆಹುಲ್ ಅವರು ಎರಡು ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವುದು ಹಾಗೂ 50 ಸಾವಿರ ಡಾಲರ್ ಹಣ ದುರ್ಬಳಕೆಯಾಗಿರುವುದು ಖಚಿತವಾಗಿತ್ತು. ಆಗ, ಅವರು ಮೆಹುಲ್ ಅವರನ್ನು ಬಂಧಿಸಿದ್ದಾರೆ. ನ್ಯಾಯಾಲಯದಲ್ಲಿ ಅವರ ಕೇಸ್ ನ ವಿಚಾರಣೆ ನಡೆದು ಈಗ ತೀರ್ಪು ಬಂದಿದ್ದು ಅವರಿಗೆ 15 ವರ್ಷ ಜೈಲು ಶಿಕ್ಷೆಯಾಗಿದೆ.

ಅಮೆರಿಕದಲ್ಲಿ ಎರಡು ಕಂಪನಿಗಳಲ್ಲಿ ಕೆಲಸ ಮಾಡುವುದು ತಪ್ಪೇನಲ್ಲ. ಆದರೆ, ಅಲ್ಲಿನ ಸರ್ಕಾರಿ ನೌಕರರು ಬೇರೊಂದು ಕಂಪನಿಯಲ್ಲಿ ಪೂರ್ಣಕಾಲಿಕರಾಗಿ ಸೇವೆ ಸಲ್ಲಿಸುವುದು ಅಪರಾಧ. ಮೆಹುಲ್ ಅವರ ತಪ್ಪೇನೆಂದರೆ, ಅವರು ನ್ಯೂಯಾರ್ಕ್ ರಾಜ್ಯ ಸರ್ಕಾರದ ಐಟಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರೂ, ಗ್ಲೋಬಲ್ ಫೌಂಡರೀಸ್ ಎಂಬ ಮತ್ತೊಂದು ಕಂಪನಿಯಲ್ಲಿಯೂ ಫುಲ್ ಟೈಂ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದರು. ನ್ಯೂಯಾರ್ಕ್ ನಲ್ಲಿರುವ ಸರ್ಕಾರಿ ಸಂಸ್ಥೆಯಲ್ಲಿ ಅವರಿಗೆ ರಿಮೋಟ್ ವರ್ಕಿಂಗ್ ಆಧಾರದಲ್ಲಿ ಕೆಲಸ ನೀಡಲಾಗಿತ್ತು. ಹಾಗಾಗಿ, ಅವರು ಕಚೇರಿಗೆ ಹೋಗಿ ಕೆಲಸ ಮಾಡುವ ಅವಕಾಶವಿರಲಿಲ್ಲ. ಅದನ್ನು ಬಳಸಿಕೊಂಡು ಅವರು ಗ್ಲೋಬರ್ ಫೌಂಡರೀಸ್ ಕಂಪನಿಯ ಕಚೇರಿಯಲ್ಲಿ ಕುಳಿತು ನ್ಯೂಯಾರ್ಕ್ ರಾಜ್ಯ ಸರ್ಕಾರದ ಸಾಫ್ಟ್ ವೇರ್ ಕಂಪನಿ ಹಾಗೂ ಗ್ಲೋಬಲ್ ಫೌಂಡರೀಸ್ ಕಂಪನಿಯ ಎರಡೂ ಕೆಲಸಗಳನ್ನು ನಿಭಾಯಿಸುತ್ತಿದ್ದರು. ಜೊತೆಗೆ, ನ್ಯೂಯಾರ್ಕ್ ರಾಜ್ಯ ಸರ್ಕಾರದ ಕಂಪನಿಯಲ್ಲಿ 50 ಸಾವಿರ ಡಾಲರ್ ಹಣ ಎಗರಿಸಿದ್ದ ಆರೋಪವೂ ಕೇಳಿಬಂದಿತ್ತು.

ಇನ್‌ಸ್ಟಾನಲ್ಲಿ ಪರಿಚಯವಾದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಅಪ್ರಾಪ್ತೆ ಈಗ ಗರ್ಭಿಣಿ

TAGGED:Is it wrong to work in two places in America?; Indian techie gets 15 years in prison
Share This Article
Facebook Twitter Copy Link Print
Previous Article ಇನ್‌ಸ್ಟಾನಲ್ಲಿ ಪರಿಚಯವಾದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಅಪ್ರಾಪ್ತೆ ಈಗ ಗರ್ಭಿಣಿ
Next Article ರಕ್ಷಿತಾ ಶೆಟ್ಟಿಗೆ ಎಸ್ ಕೆಟಗರಿ ಪದ ಬಳಸಿದ್ದ ಬಿಗ್ ಬಾಸ್ ಅಶ್ವಿನಿ ಜೈಲುಪಾಲು; ಎಲ್ಲಿದ್ರೂ ಹುಲಿನೇ ಎಂದ ಗೌಡ್ತಿ!

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read
ಕರ್ನಾಟಕದೇಶಪ್ರಮುಖ

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?