Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಆನ್ ಲೈನ್ ಶಾಪಿಂಗ್ ಸೇವೆಯಲ್ಲಿ ಮೊಬೈಲ್ ಬುಕ್ ಮಾಡಿದರೆ ಅದರ ಬದಲು ಕಲ್ಲು ಗ್ರಾಹಕನಿಗೆ ಪಂಗನಾಮ ಹಾಕಿದ್ದಾರೆ.
ಗ್ರಾಹಕ ಅಕ್ಟೋಬರ್ 14ರಂದು ಅಮೆಜಾನ್ ಮೂಲಕ ಆನ್ಲೈನ್ ನಲ್ಲಿ 1.8 ಲಕ್ಷ ರೂಪಾಯಿ ಮೌಲ್ಯದ ಸ್ಯಾಮ್ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ -7 ಮೊಬೈಲ್ ಫೋನ್ ಬುಕ್ ಮಾಡಿದ್ದಾರೆ. ಅದಕ್ಕೆ ಟ್ರ್ಯಾಕಿಂಗ್ ಐಡಿ ಕೂಡ ಬಂದಿದೆ. ಅಕ್ಟೋಬರ್ 19ರಂದು ರಾತ್ರಿ 8 ಗಂಟೆಗೆ ಪ್ಯಾಕೇಜ್ ಡೆಲಿವರಿ ಆಗಿದೆ. ವಿಡಿಯೋ ಮಾಡುವ ಮೂಲಕ ಅದನ್ನು ಗ್ರಾಹಕರು ಓಪನ್ ಮಾಡಿದ್ದು, ಅದರಲ್ಲಿ ಮೊಬೈಲ್ ಫೋನ್ ಬದಲಿಗೆ ಒಂದು ಚೌಕಾಕಾರದ ಕಲ್ಲು ಇರುವುದು ಕಂಡು ಬಂದಿದೆ.
ಮೋಸ ಹೋಗಿರುವುದನ್ನು ಅರಿತ ಗ್ರಾಹಕ ಎನ್.ಸಿ.ಆರ್.ಪಿ. ಪೋರ್ಟಲ್ ನಲ್ಲಿ ದೂರು ದಾಖಲಿಸಿದ್ದು, ನಂತರ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.