Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಅಪ್ರಾಪ್ತ ಬಾಲಕಿ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ; ಆರೋಪಿ ಬಂಧನ
ಕರ್ನಾಟಕಪ್ರಮುಖ

ಅಪ್ರಾಪ್ತ ಬಾಲಕಿ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ; ಆರೋಪಿ ಬಂಧನ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಮಂಗಳೂರು: ದಕ್ಷಿಣ ಕನ್ನಡ ಉಳ್ಳಾಲದ ಕುಂಪಲ ಪ್ರದೇಶದಲ್ಲಿ ಸಂಭವಿಸಿದ ಒಂದು ಬೆಚ್ಚಿಬೀಳಿಸುವ ಘಟನೆಯಲ್ಲಿ, ತಂದೆಯೇ ತನ್ನ ಮಗಳ ಮೇಲೆ ಕಳೆದ 10 ವರ್ಷಗಳಿಂದ ಅತ್ಯಾ*ಚಾರ ಎಸಗುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಅಮಾನವೀಯ ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿ ಮಲತಂದೆ ಅಮೀರ್ (40) ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಉಳ್ಳಾಲದ ಕುಂಪಲದಲ್ಲಿರುವ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಅಪ್ರಾಪ್ತೆಯಾಗಿದ್ದಾಗಿನಿಂದಲೇ ಆರೋಪಿ ಮಲತಂದೆ ಅವಳ ಮೇಲೆ ಮೃಗದಂತೆ ವರ್ತಿಸುತ್ತಿದ್ದ.
ಕಿರುಚಾಡದಂತೆ ಬಾಯಿಗೆ ತಲೆದಿಂಬು ಇಟ್ಟ ಪಾಪಿ
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಬಾಲಕಿ ಅತ್ಯಾಚಾರದ ವೇಳೆ ಕಿರುಚಾಡಿದಾಗ ಅಮೀರ್ ಅವಳ ಬಾಯಿಗೆ ತಲೆದಿಂಬು ಇಟ್ಟು ಕಿರುಚಾಡದಂತೆ ತಡೆಯುತ್ತಿದ್ದ. ಕಿರುಕುಳ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದಂತೆ, ಬಾಲಕಿ ಅಜ್ಜಿಯ ಮನೆಯಲ್ಲಿ ವಾಸಿಸಿ ಶಾಲೆಗೆ ಹೋಗಲು ತೀರ್ಮಾನಿಸಿದಳು. ತಾಯಿಯ ಯೋಗ ಕ್ಷೇಮ ವಿಚಾರಿಸಲು ಮನೆಗೆ ಬಂದಾಗಲು ಸಮಯ ಸಾಧಿಸಿ ಮತ್ತೆ ಅತ್ಯಾ*ಚಾರ ಎಸಗುತ್ತಿದ್ದ ಎಂದು ಆರೋಪಿಸಲಾಗಿದೆ.
ಆಸ್ಪತ್ರೆಗೆ ದಾಖಲಾತಿ
ಕಳೆದ ಅಕ್ಟೋಬರ್ 18ರಂದು ಶನಿವಾರ, ಮಾನಸಿಕವಾಗಿ ಕುಗ್ಗಿದ್ದ ಅಪ್ರಾಪ್ತೆಯ ಸ್ಥಿತಿ ಚಿಂತಾಜನಕವಾಗಿದ್ದರಿಂದ, ಕುಟುಂಬದವರು ಅವಳನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆಯ ಭಾಗವಾಗಿ ನಡೆದ ಕೌನ್ಸಿಲಿಂಗ್ ವೇಳೆ, ಬಾಲಕಿ ತಂದೆಯಿಂದ ನಡೆದ ಅತ್ಯಾ*ಚಾರದ ಬಗ್ಗೆ ಸಂಪೂರ್ಣ ಮಾಹಿತಿ ಬಿಚ್ಚಿಟ್ಟಿದ್ದಾಳೆ.
ಪೋಕ್ಸೊ ಕಾಯ್ದೆಯಡಿ ಬಂಧನ
ಕೌನ್ಸಿಲಿಂಗ್ ಹಾಗೂ ವೈದ್ಯಕೀಯ ದಾಖಲೆಗಳ ಆಧಾರದ ಮೇಲೆ, ಉಳ್ಳಾಲ ಪೊಲೀಸರು ಆರೋಪಿ ಅಮೀರ್ ವಿರುದ್ಧ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದ್ದು, ಈ ಘಟನೆಯು ಸ್ಥಳೀಯರಲ್ಲಿ ಆಕ್ರೋಶ ಹಾಗೂ ವಿಷಾದ ಮೂಡಿಸಿದೆ.

ಮಕ್ಕಳ ದೇಹದ ಮೇಲೆ ಗುಳ್ಳೆ : ಭೀತಿ ಸೃಷ್ಟಿಸಿದ ಹೊಸ ವೈರಸ್.!

TAGGED:Minor girl repeatedly raped by father; accused arrested
Share This Article
Facebook Twitter Copy Link Print
Previous Article ಮಕ್ಕಳ ದೇಹದ ಮೇಲೆ ಗುಳ್ಳೆ : ಭೀತಿ ಸೃಷ್ಟಿಸಿದ ಹೊಸ ವೈರಸ್.!
Next Article ಮಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದ ವೇಳೆ ನೂಕು ನುಗ್ಗಲು: 11 ಜನರು ಅಸ್ವಸ್ಥ, ಆಸ್ಪತ್ರೆಗೆ ದಾಖಲು

Popular Posts

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read

ಟಿ20 ವಿಶ್ವಕಪ್‌ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್‌

3 Min Read

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

You Might Also Like

ಪ್ರಮುಖ

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read
ಪ್ರಮುಖಮನರಂಜನೆ

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read
ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read
ಪ್ರಮುಖಮನರಂಜನೆ

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?