Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ , ಪವಿತ್ರಾ ಗೌಡ ಅವರು ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಅದರ ನಂತರ ನಟ ದರ್ಶನ್ ಬೆಡ್ಶೀಟ್ ದಿಂಬು ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು.
ಅದರಂತೆ ಹೈಕೋರ್ಟ್ ಕಾನೂನು ಪ್ರಾಧಿಕಾರದ ಅಧಿಕಾರಿಗಳು ಜೈಲಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿಯನ್ನು ಅಕ್ಟೋಬರ್ 18ರಂದು ಕೋರ್ಟ್ಗೆ ಸಲ್ಲಿಸಿದ್ದಾರೆ. ಸದ್ಯ ಈ ವರದಿಯ ವಾದ ಪ್ರತಿವಾದ ವಿಚಾರಣೆ ಅಕ್ಟೋಬರ್ 29ರಂದು ನಡೆಯಲಿದೆ.
ದರ್ಶನ್ ಜೈಲಿನಲ್ಲಿ ಸೌಲಭ್ಯ ಸರಿ ಇಲ್ಲ ಎಂದು ಅರ್ಜಿ ಸಲ್ಲಿಸಿದರೂ ಕೂಡಾ ಈಗ ವರದಿ ದರ್ಶನ್ ಪರವಾಗಿ ಬಂದಿಲ್ಲ. ಜೈಲಿನ ಮ್ಯಾನುಯಲ್ ಪ್ರಕಾರ ಸೌಲಭ್ಯ ನೀಡಿದ್ರೂ ಆರೋಪಗಳನ್ನು ಮಾಡಲಾಗಿದೆ ಎನ್ನಲಾಗಿದೆ. ಖುದ್ದು ನ್ಯಾಯಾಧೀಶರ ಭೇಟಿಗೂ ಅರ್ಜಿ ಹಾಕಿದ್ದ ದರ್ಶನ್ ಪರ ಲಾಯರ್ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಲಾಯರ್ಗಳಿಗೆ ಅಪ್ಲೈ ಮಾಡಿ ರಿಪೋರ್ಟ್ ಪಡೆಯುವಂತೆ ಹೇಳಿತ್ತು.
ಈಗ ನ್ಯಾಯಾಧೀಶರೇ ಭೇಟಿ ಬಳಿಕ ವರದಿ ನೀಡಿದ್ದು, ವಿಚಾರ ಕೇಳಿ ಶಾಕ್ ಆಗಿರೋ ದರ್ಶನ್ ಇದೇ ವಿಚಾರವಾಗಿ ಸಿಟ್ಟಾಗಿದ್ದಾರೆ. ರಿಪೋರ್ಟ್ ನನ್ನ ವಿರುದ್ದ ಇದೆ ಅಂದಿದ್ದು ಗೊತ್ತಾದ ತಕ್ಷಣ ಡೆವಿಲ್ ಬ್ಯಾರಕ್ ನಲ್ಲಿ ಗರಂ ಆಗಿದ್ದಾರೆ ಎನ್ನಲಾಗಿದೆ.
ಸಹ ಖೈದಿಗಳ ಜೊತೆಗೆ ಕೂಗಾಡಿರೋ ದರ್ಶನ್ ವರದಿ ಬಗ್ಗೆ ತಿಳಿದು ಫುಲ್ ಗರಂ ಆಗಿದ್ದಾರೆ ಎನ್ನಲಾಗಿದೆ. ನಾನು ಯಾರಿಗೆ ಏನ್ ಅನ್ಯಾಯ ಮಾಡಿದೆ, ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ನನಗೆ ಯಾಕೆ ಈ ಶಿಕ್ಷೆ, ನಾನು ಹೀಗೆ ಸಾಯಬೇಕ ಅಂತ ಕೂಗಾಡಿ ದರ್ಶನ್ ಸಿಟ್ಟಾಗಿದ್ದಾರೆ ಎಂದು ತಿಳಿದು ಬಂದಿದೆ.
ದರ್ಶನ್ ಕೋಪಗೊಂಡ ರೀತಿ ನೋಡಿ ಸಹಚರರು ಫುಲ್ ಶಾಕ್ ಆಗಿದ್ದಾರೆ.