Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕಾಂತಾರ ಚಾಪ್ಟರ್ 1 ಸಿನಿಮಾ ರಿಲೀಸ್ ಆಗಿ ಭರ್ಜರಿ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿದೆ. ಕಾಂತಾರ ಚಾಪ್ಟರ್ 1 ಸಿನಿಮಾ 1000 ಕೋಟಿಯತ್ತ ನೋಟವಿಟ್ಟಿದ್ದು ಕಲೆಕ್ಷನ್ ಹೆಚ್ಚುತ್ತಲೇ ಇದೆ. ಇನ್ನೇನು ದೀಪಾವಳಿ ಪ್ರಯುಕ್ತವೂ ರಜೆ ಇರುವುದರಿಂದ ವಾರಾಂತ್ಯದಲ್ಲೂ ಭರ್ಜರಿ ಕಲೆಕ್ಷನ್ ಆಗಲಿದೆ.
ಕಾಂತಾರ ಚಾಪ್ಟರ್ 1 ಸಿನಿಮಾ ಆಸ್ಕರ್ ಸಲ್ಲಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ಬಾರಿಯೂ ಆಸ್ಕರ್ ಗೆ ಗುರಿ ಇಟ್ಟಿದ್ದ ಕಾಂತಾರ ಸಿನಿಮಾ ಅರ್ಜಿ ಸಲ್ಲಿಸಿತ್ತು.ಈಗ ಮತ್ತೊಮ್ಮೆ ಆಸ್ಕರ್ ನತ್ತ ಕಣ್ಣಿಟ್ಟಿರೋ ಹೊಂಬಾಳೆ ಸಂಸ್ಥೆ ಕಾಂತಾರ ಚಾಪ್ಟರ್ 1 ಸಿನಿಮಾ ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ನವೆಂಬರ್ 13 ಆಸ್ಕರ್ ಸಬ್ ಮಿಷನ್ ಗೆ ಕೊನೆಯ ದಿನವಾಗಿದ್ದು ಅಷ್ಟರಲ್ಲಿ ನಾಮಿನೇಷನ್ ಸಲ್ಲಿ ಸಿದ್ದವಾಗಿರೋ ಕಾಂತಾರ 1 ತಂಡ ಎಲ್ಲ ಪ್ರಿಪರೇಷನ್ಸ್ ಮಾಡಿಕೊಂಡಿದೆಯಂತೆ.