Subscribe NewsicsKannada/YouTube
newsics.com
ಕನ್ನಡ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಗೆ ಹೋದಲ್ಲಿ ಬಂದಲ್ಲಿ ಕೇಳೋದು ಒಂದೇ ಪ್ರಶ್ನೆ! ಅದು ಬೇರೇನೂ ಅಲ್ಲ, ನಿಮ್ಮ ‘ಕೆಜಿಎಫ್ 3′ ಯಾವಾಗ ಬರುತ್ತೆ ಅನ್ನೋ ಪ್ರಶ್ನೆ. ಈ ಮೊದಲೆಲ್ಲಾ ಈ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟ ಹಾಗೆ ಮಾತನ್ನಾಡುತ್ತಿದ್ದ ನಟ ಯಶ್ ಅವರಿ ಇದೀಗ ಕ್ಲಿಯರ್ ಪಿಕ್ಚರ್ ಕೊಡುತ್ತಿದ್ದಾರೆ. ಬಾಲಿವುಡ್ ಸಂದರ್ಶನದಲ್ಲಿ ನಟ ಯಶ್ ಅವರು ಈ ಬಗ್ಗೆ ಮಾತನ್ನಾಡಿದ್ದಾರೆ.
ಖಂಡಿತವಾಗಿಯೂ ಕೆಜಿಎಫ್ 3 ಸಿನಿಮಾ ಆಗುತ್ತೆ.. ಆದ್ರೆ ಈಗ ಅಲ್ಲ. ಯಾಕಂದ್ರೆ ಸದ್ಯಕ್ಕೆ ನಾನು ಬೇರೆ ಎರಡು ಪ್ರಾಜೆಕ್ಟ್‌ಗಳಲ್ಲಿ ಫುಲ್ ಬ್ಯುಸಿ ಇದೀನಿ. ಅಷ್ಟೇ ಅಲ್ಲ, ಕೆಜಿಎಫ್ ನಿರ್ದೇಶಕರಾದ ಪ್ರಶಾಂತ್ ನೀಲ್ ಕೂಡ ಬೇರೆಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಆದರೆ, ನಾವಿಬ್ಬರೂ ಕಾಲ್ ಮಾಡಿ ಮಾತನಾಡುವಾಗ ಈ ಕೆಜಿಎಫ್ 3 ಮಾಡುವ ಬಗ್ಗೆ ಮಾತನ್ನಾಡುತ್ತಿದ್ದೇವೆ. ಇಬ್ಬರಿಗೂ ಕೆಜಿಎಫ್ ಸಿನಿಮಾ ಮಾಡುವ ಬಗ್ಗೆ ತುಂಬಾ ಆಸಕ್ತ ಇದೆ. ಆದರೆ, ಇಬ್ಬರೂ ಆ ಬಗ್ಗೆ ಸಂಪೂರ್ಣ ಗಮನ ಕೊಡಬೇಕಿದೆ. ಆದ್ದರಿಂದ ಸದ್ಯ ನಮ್ಮನಮ್ಮ ಕೈನಲ್ಲಿರುವ ಬೇರೆ ಸಿನಿಮಾಗಳು ಮುಗಿದ ಮೇಲಷ್ಟೇ ಆ ಸಿನಿಮಾ ಶುರುವಾಗಲಿದೆ.
ನಮಗೆ ಕೆಜೆಎಫ್ ಸಿನಿಮಾಗೆ ಇರುವ ಕ್ರೇಜ್ ಹಾಗೂ ಜನರ ನಂಬಿಕೆಯನ್ನು ಎನ್‌ಕ್ಯಾಶ್ ಮಾಡಿಕೊಳ್ಳುವ ಬಗ್ಗೆ ಆಸಕ್ತಿಯಿಲ್ಲ. ಆದರೆ, ಕೆಜಿಎಫ್ ಸಿನಿಮಾ ತೆರೆಗೆ ತಂದಾಗ ಅದು ಈ ಮೊದಲಿನ ಎರಡೂ ಸಿನಿಮಾಗಳನ್ನೂ ಮೀರಿಸುವಂತಿರಬೇಕು. ಅದೆಷ್ಟು ಮಾಸಿವ್ ಆಗಿರಬೇಕು ಎಂದರೆ, ಅದೊಂದು ಹೊಸ ದಾಖಲೆ ಬರೆಯಬೇಕು. ಅಷ್ಟೇ ಅಲ್ಲ, ಜನರ ನಿರೀಕ್ಷೆಯನ್ನೂ ಮೀರಿ ಅದು ಮೂಡಿ ಬರಬೇಕು. ಹೀಗಾಗಿ, ಇಬ್ಬರೂ ಸಮಯ ಮಾಡಿಕೊಂಡು ಆ ಸಿನಿಮಾವನ್ನು ಖಂಡಿತವಾಗಿಯೂ ಮಾಡುತ್ತೇವೆ. ಆದರೆ, ಕಾಲ ಕೂಡಿ ಬಂದಾಗಲಷ್ಟೇ ಅದು ಸಾಧ್ಯ’ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ..
ಕಾಂಗ್ರೆಸ್ ಶಾಸಕರ ಶಾಲೆಯಲ್ಲೇ ಆರೆಸ್ಸೆಸ್ ಶಾಖೆ, ಬೈಠಕ್: ನಗೆಪಾಟಲಿಗೀಡಾದ ಪ್ರಿಯಾಂಕ್ ಖರ್ಗೆ RSS ಬ್ಯಾನ್ ಪತ್ರ!