Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮಲಗಿದ್ದ ಪತಿ ಮೇಲೆ ಕುದಿಯುವ ಎಣ್ಣೆ, ಖಾರದಪುಡಿ ಎರಚಿದ ಪತ್ನಿ: ಸ್ಥಿತಿ ಚಿಂತಾಜನಕ
ದೇಶಪ್ರಮುಖ

ಮಲಗಿದ್ದ ಪತಿ ಮೇಲೆ ಕುದಿಯುವ ಎಣ್ಣೆ, ಖಾರದಪುಡಿ ಎರಚಿದ ಪತ್ನಿ: ಸ್ಥಿತಿ ಚಿಂತಾಜನಕ

Share
1 Min Read
SHARE

newsics.com

ನವದೆಹಲಿ: ಮಲಗಿದ್ದ ಪತಿಯ ಮೇಲೆ ಪತ್ನಿ ಕುದಿಯುವ ಎಣ್ಣೆ ಹಾಗೂ ಖಾರದಪುಡಿ ಎರಚಿ ವಿಕೃತಿ ಮೆರೆದ ಘಟನೆ ದೆಹಲಿಯಲ್ಲಿ ನಡೆದಿದ್ದು, ಪತಿ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ.

ಪ್ಯಾರಾಮಚ್ಯುಕಲ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 38 ವರ್ಷದ ದಿನೇಶ್‌ ಅವರನ್ನು ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಗಿದ್ದು, ಸುಟ್ಟ ಗಾಯಗಳಿಂದ ಅವರ ಪರಿಸ್ಥಿತಿ ಗಂಭೀರವಾಗಿದೆ.

ಅಕ್ಟೋಬರ್‌ 2ರಂದು ಕೆಲಸದಿಂದ ಮರಳಿದ ಪತಿ, ರಾತ್ರಿ ಊಟ ಮಾಡಿ ಪತ್ನಿ ಹಾಗೂ ಮಕ್ಕಳ ಜತೆ ಮಲಗಿದ್ದ. ರಾತ್ರಿ 3.15ರ ಸುಮಾರಿಗೆ ಏನೋ ನೋವಾಗುತ್ತಿರುವಂತೆ ಭಾಸವಾಗಿ ಎದ್ದಾಗ ಪತ್ನಿ ಪ್ಯಾಂಟ್‌ ಒಳಗೆ ಕಾದ ಎಣ್ಣೆ ಸುರಿದಿರುವುದು ಕಂಡು ಹೌಹಾರಿ ನೋವಿನಿಂದ ಕಿರುಚಾಡಿದ್ದಾನೆ.

ನೋವಿನಿಂದ ಕಿರುಚಾಡುತ್ತಾ ಸಹಾಯಕ್ಕಾಗಿ ಕರೆದಾಗ ಪತ್ನಿ ಖಾರದಪುಡಿ ತಂದು ಎರಚಿದ್ದಾಳೆ. ಅಲ್ಲದೇ ಕಿರುಚಾಡಿದರೆ ಇನ್ನಷ್ಟು ಬಿಸಿ ಎಣ್ಣೆ ಸುರಿಯುವುದಾಗಿ ಬೆದರಿಕೆ ಹಾಕಿದ್ದಾಳೆ.

ಆದರೆ ನೋವು ತಾಳಲಾರದೇ ದಿನೇಶ್‌ ಕಿರುಚಾಡಿದ್ದರಿಂದ ಅಕ್ಕಪಕ್ಕದ ಮನೆಯವರು ಹಾಗೂ ಕೆಳಗಿನ ಮಹಡಿಯಲ್ಲಿ ವಾಸವಾಗಿದ್ದ ಮನೆಯ ಮಾಲೀಕ ಬಂದಿದ್ದಾರೆ. ಅಕ್ಕಪಕ್ಕದವರು ಬಾಗಿಲು ತೆರೆಯಲು ಕೂಗಿದರೆ ಮಹಿಳೆ ಒಳಗಿನಿಂದ ಚಿಲಕ ಹಾಕಿಕೊಂಡು ಬಾಗಿಲು ತೆರೆಯಲು ನಿರಾಕರಿಸಿದ್ದಾರೆ.

ಕೊನೆಗೆ ಬಾಗಿಲು ತೆರೆದಾಗ ದಿನೇಶ್‌ ನೋವಿನಿಂದ ಕಿರುಚಾಡುತ್ತಿದ್ದರೆ ಪತ್ನಿ ಮನೆಯೊಳಗೆ ಕೊಠಡಿಯಲ್ಲಿ ಅವಿತು ಕುಳಿತಿದ್ದಾಳೆ ಎಂದು ನೆರೆಯ ಮನೆಯ ಮಹಿಳೆಯ ಮಗಳು ಘಟನೆಯನ್ನು ವಿವರಿಸಿದ್ದಾಳೆ.

ನೆರೆಮನೆಯವರೆಲ್ಲಾ ಸೇರಿ ಘಟನೆಯ ಮಾಹಿತಿ ಇಲ್ಲದ ಕಾರಣ ದಿನೇಶ್‌ ನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಕೆಳಗಡೆವರೆಗೂ ಬಂದ ಪತ್ನಿ ನಂತರ ತಪ್ಪಿಸಿಕೊಳ್ಳಲು ಬೇರೊಂದು ದಿಕ್ಕಿನತ್ತ ನಡೆದು ಹೋಗುವುದನ್ನು ನೋಡಿ ಅನುಮಾನಗೊಂಡ ನೆರೆಮನೆಯವರು ಆಕೆಯನ್ನು ಆಟೋದಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ತೆರಳಿದ್ದಾರೆ. ವೈದ್ಯರು ಗಾಯ ಗಂಭೀರ ಸ್ವರೂಪದಲ್ಲಿದ್ದು, ಜೀವಕ್ಕೆ ಅಪಾಯ ಆಗಬಹುದು ಎಂದು ಹೇಳಿದ್ದಾರೆ.

ದಂಪತಿಗೆ 8 ವರ್ಷಗಳ ಹಿಂದೆ ಮದುವೆ ಆಗಿದ್ದು, ಮಗಳು ಇದ್ದಾಳೆ. ದಂಪತಿ ನಡುವೆ ಪದೇಪದೆ ಜಗಳ ನಡೆಯುತ್ತಿದ್ದು, ಎರಡು ವರ್ಷಗಳ ಹಿಂದೆ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ನಂತರ ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಗೊಂಡಿತ್ತು.

Lodge fire ಲಾಡ್ಜ್‌ಗೆ‌‌‌ ಬೆಂಕಿ: ಯುವಕ, ಯುವತಿ ಸಾವು

TAGGED:Wife throws boiling oil and chili powder on sleeping husband: Situation alarming
Share This Article
Facebook Twitter Copy Link Print
Previous Article Lodge fire ಲಾಡ್ಜ್‌ಗೆ‌‌‌ ಬೆಂಕಿ: ಯುವಕ, ಯುವತಿ ಸಾವು
Next Article ನನ್ನ‌ ಮಗನಿಗೊಂದು ಹುಡುಗಿ ಹುಡುಕಿಕೊಡಿ: ತಾಯಿಯ ಮನವಿ ಕೇಳಿ ಪೊಲೀಸರು ಕಂಗಾಲು

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?