Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ಮೊದಲ ದಿನವೇ ಭಾರತದಲ್ಲಿ 45 ಕೋಟಿ ರೂ., ವಿದೇಶಗಳಲ್ಲಿ 10 ಕೋಟಿ ರೂ. ಗಳಿಸಿದ್ದು, ಇಂದು 100 ಕೋಟಿ ಕ್ಲಬ್ ಗೆ ಸೇರುವ ಸಾಧ್ಯತೆ ಇದೆ. ಪ್ರೀಮಿಯರ್ ಶೋಗಳು ಮತ್ತು ಮೊದಲ ದಿನದ ಗಳಿಕೆಯಿಂದ 55 ಕೋಟಿ ರೂ. ಗಳಿಸಿರುವುದು ಹೊಸ ದಾಖಲೆಯಾಗಿದೆ.
ರಿಲೀಸ್‌ಗೂ ಒಂದು ದಿನ ಮೊದಲೇ ಅಂದರೆ ಬುಧವಾರ ದೇಶದ ವಿವಿಧೆಡೆ ಪ್ರೀಮಿಯರ್ ಶೋಗಳು ನಡೆದಿದ್ದು, ಈ ಶೋಗಳೆಲ್ಲ ಹೌಸ್‌ಫುಲ್ ಪ್ರದರ್ಶನ ಕಂಡಿದ್ದವು. ಇದರಿಂದ ಸಿನಿಮಾಗೆ ಉತ್ತಮ ಪ್ರಚಾರ ಸಿಕ್ಕಿದ್ದು, ಬಿಡುಗಡೆ ದಿನವಾದ ಗುರುವಾರ ಸಿನಿಮಾ ಉತ್ತಮ ಪ್ರದರ್ಶನ ಕಾಣಲು ಕಾರಣವಾಗಿದೆ. ಹೊರದೇಶಗಳಲ್ಲಿ ಅಮೆರಿಕ ಒಂದರಲ್ಲೇ ಸಿನಿಮಾ ಅಂದಾಜು 4.20 ಕೋಟಿ ರು. ಗಳಿಕೆ ಮಾಡಿದೆ. 30 ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಹೊರದೇಶಗಳಲ್ಲಿ ಅಂದಾಜು 10 ಕೋಟಿ ರು.ವರೆಗೆ ಮೊದಲ ದಿನದ ಗಳಿಕೆ ಅಂದಾಜಿಸಲಾಗಿದೆ. ಬ್ಲಾಕ್ ಬಸ್ಟರ್ ಆರಂಭ ಕಂಡಿರುವ ಈ ಸಿನಿಮಾದ 10 ಲಕ್ಷಕ್ಕೂ ಅಧಿಕ ಟಿಕೆಟ್ ಈವರೆಗೆ ಮಾರಾಟವಾಗಿದೆ ಎನ್ನಲಾಗಿದ್ದು, ಗುರುವಾರ ಪ್ರತಿ ಗಂಟೆಗೆ 60,000 ಟಿಕೆಟ್ ಬಿಕರಿಯಾಗಿದೆ. ಗರಿಷ್ಠ ದರ 2400 ರು. ದೆಹಲಿಯಲ್ಲಿ ದಾಖಲಾಗಿದೆ. ಬೆಂಗಳೂರಿನಲ್ಲಿ 1200 ರು. ಗರಿಷ್ಠ ದರವಿತ್ತು.
ಎಲ್ಲಾ ಭಾಷೆಗಳು ಸೇರಿ ಭಾರತದಲ್ಲಿ ಅಂದಾಜು 45 ಕೋಟಿ ರೂಪಾಯಿ ಗಳಿಸಿದ್ದು, ಶುಕ್ರವಾರದ ವೇಳೆಗೆ ಸಿನಿಮಾ 100 ಕೋಟಿ ಕ್ಲಬ್ ಸೇರುವ ಸಾಧ್ಯತೆ ಇದೆ.