Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭ ಆಗಿ ಇನ್ನೂ ಸರಿಯಾಗಿ ಒಂದು ವಾರ ಆಗಿಲ್ಲ. ಆಗಲೇ ಬಿಗ್ ಬಾಸ್ನಲ್ಲಿ ಟಾಸ್ಕ್ ಒಂದು ರದ್ದಾಗಿ ಹೋಗಿದೆ. ಧನುಷ್ ಮಾಡಿದ ಹಠಕ್ಕೆ ಟಾಸ್ಕ್ ಅರ್ಧಕ್ಕೆ ನಿಂತಿದೆ. ಇದರಿಂದ ಕಾಕ್ರೋಚ್ ಸುಧಿ ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ಅವರು ಇತರ ಸ್ಪರ್ಧಿಗಳ ಮೇಲೆ ಕೂಗಾಡಿದ್ದಾರೆ. ಆ ಸಂದರ್ಭದ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
ಇಂದು ಬೆಳಗ್ಗೆ ದೊಡ್ಮನೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಕುರಿತ ಪ್ರೊಮೋ ಒಂದನ್ನು ಕಲರ್ಸ್ ಕನ್ನಡ ಶೇರ್ ಮಾಡಿದೆ. ಅದರಲ್ಲಿ ಧನುಷ್ ಮೇಲೆ ಕಾಕ್ರೋಚ್ ಸುಧಿ ಫೈರ್ ಆಗಿದ್ದಾರೆ.
ನಂತರ ಚಂದ್ರಪ್ರಭ ಕೂಡ ಧನುಷ್ ಮೇಲೆ ರೇಗಾಡಿದ್ದಾರೆ. ಧನುಷ್ ಅವರಿಗೆ ಅವರೇ ಹೀರೋ ಅಂದುಕೊಂಡು ಬಿಟ್ಟಿದ್ದಾರಾ? ಹಾಗಿದ್ದರೆ ನಾವೆಲ್ಲ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಇಬ್ಬರ ಮಧ್ಯೆ ವಾಗ್ಯುದ್ಧ ನಡೆದಿದೆ.