Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಇನ್ಮುಂದೆ ಬೆಂಗಳೂರಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿ, ದಂಡ ಬಾಕಿ ಉಳಿಸಿಕೊಂಡು ಓಡಾಡುವಂತ್ತಿಲ್ಲ.ಬೆಂಗಳೂರು ಸಂಚಾರ ಪೊಲೀಸರು ಮತ್ತು ಕಾರ್ಸ್24 ಸಹಯೋಗದೊಂದಿಗೆ ಎಐ ಆಧಾರಿತ ಬಿಲ್‌ಬೋರ್ಡ್‌ಗಳನ್ನು ನಗರದಲ್ಲಿ ಅಳವಡಿಸಲಾಗಿದೆ. ಈ ಬಿಲ್‌ಬೋರ್ಡ್‌ಗಳು ವಾಹನಗಳ ನೋಂದಣಿ ಸಂಖ್ಯೆಯನ್ನು ಸ್ಕ್ಯಾನ್ ಮಾಡಿ, ಬಾಕಿ ಇರುವ ದಂಡ, ಪಿಯುಸಿ ಮುಂತಾದ ಮಾಹಿತಿಯನ್ನು ರಿಯಲ್ ಟೈಮ್‌ನಲ್ಲಿ ಪ್ರದರ್ಶಿಸುತ್ತದೆ. ಇದು ಸಂಚಾರ ನಿಯಮ ಉಲ್ಲಂಘನೆ ತಡೆಯಲು ಮತ್ತು ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ.
ಈ ವೃತ್ತದಿಂದ ಹಾದುಹೋಗುವ ವಾಹನಗಳ ಸಂಚಾರ ಉಲ್ಲಂಘನೆ ಸೇರಿದಂತೆ ಬಾಕಿ ದಂಡದ ಮಾಹಿತಿಯನ್ನು ಡಿಸ್‌ಪ್ಲೇ ಮಾಡುತ್ತದೆ.
ಹೇಗೆ ಕೆಲಸ ಮಾಡುತ್ತದೆ?
ಈ ಬಿಲ್‍ಬೋರ್ಡ್ ಅತ್ಯಾಧುನಿಕ ಎಐ ಆಧಾರಿತ ಕ್ಯಾಮೆರಾಗಳನ್ನು ಹೊಂದಿದ್ದು, ನೂರು ಮೀಟರ್ ದೂರದಿಂದಲೇ ವಾಹನಗಳ ನೋಂದಣಿ ಸಂಖ್ಯೆಯನ್ನು ಸ್ಕ್ಯಾನ್ ಮಾಡುತ್ತದೆ. ಕ್ಷಣ ಮಾತ್ರದಲ್ಲೇ ಇದು ರಾಷ್ಟ್ರೀಯ ವಾಹನ್ ಡೇಟಾಬೇಸ್‌ನಿಂದ ನಿಮ್ಮ ವಾಹನದ ಇಡೀ ಜಾತಕವನ್ನು ನೀಡುತ್ತದೆ. ಅಂದರೆ ಬಾಕಿ ಇರುವ ಯಾವುದೇ ಇ-ಚಲನ್ ಆಗಿರಬಹುದು, ಅವಧಿ ಮೀರಿದ ಮಾಲಿನ್ಯ ನಿಯಂತ್ರಣ (ಪಿಯುಸಿ) ಪ್ರಮಾಣಪತ್ರ ಅಥವಾ ಇತರ ಸಂಚಾರ ನಿಮಯ ಉಲ್ಲಂಘನೆಗಳನ್ನು ನೇರವಾಗಿ ಪರದೆಯ ಮೇಲೆ ಡಿಸ್‌ಪ್ಲೇ ಮಾಡುವ ಮೂಲಕ ಜಗಜ್ಜಾಹೀರು ಮಾಡಲಿದೆ. ಈ ಕುರಿತಾಗಿ ಮನಿ ಕಂಟ್ರೋಲ್ ವರದಿ ಮಾಡಿದೆ.