Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > ನೆನಪು > ತೆರೆ ಮೇಲೂ ಅಚ್ಚೊತ್ತಿದ್ದ ಭೈರಪ್ಪ ಕಾದಂಬರಿಗಳು
ಅನಾವರಣಕರ್ನಾಟಕದೇಶನೆನಪುಪ್ರಮುಖ

ತೆರೆ ಮೇಲೂ ಅಚ್ಚೊತ್ತಿದ್ದ ಭೈರಪ್ಪ ಕಾದಂಬರಿಗಳು

Share
2 Min Read
SHARE

newsics.com

1971ರಲ್ಲಿ ‘ವಂಶವೃಕ್ಷ’ ಸಿನಿಮಾ ಬಿಡುಗಡೆ ಆಯಿತು. ಎಸ್ಎಲ್ ಭೈರಪ್ಪ ಅವರು ಬರೆದ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿ ಆ ಸಿನಿಮಾ ಸಿದ್ಧವಾಗಿತ್ತು. ವಿಷ್ಣುವರ್ಧನ್ ಅವರು ನಟಿಸಿದ್ದ ಆ ಚಿತ್ರವನ್ನು ಬಿ.ವಿ. ಕಾರಂತ್ ಮತ್ತು ಗಿರೀಶ್ ಕಾರ್ನಾಡ್ ಅವರು ನಿರ್ದೇಶನ ಮಾಡಿದ್ದರು.

‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯನ್ನು ಆಧರಿಸಿ ಅದೇ ಹೆಸರಿನಲ್ಲಿ ಸಿನಿಮಾ ಮೂಡಿಬಂತು. ಆ ಚಿತ್ರ 1977ರಲ್ಲಿ ಬಿಡುಗಡೆ ಆಯಿತು. ಗಿರೀಶ್ ಕಾರ್ನಾಡ್ ಹಾಗೂ ಬಿ.ವಿ. ಕಾರಂತ್ ಅವರು ನಿರ್ದೇಶನ ಮಾಡಿದ್ದರು. ಬಾಲಿವುಡ್ ನಟ ನಸೀರುದ್ಧೀನ್ ಶಾ ಅವರು ಅಭಿನಯಿಸಿದ್ದರು.
ಟಿಎನ್ ಸೀತಾರಾಮ್ ಅವರು ‘ಮತದಾನ’ ಸಿನಿಮಾಗೆ ನಿರ್ದೇಶನ ಮಾಡಿದ್ದರು. ಭೈರಪ್ಪ ಅವರು ಬರೆದ ‘ಮತದಾನ’ ಕಾದಂಬರಿ ಆಧರಿಸಿ ಆ ಸಿನಿಮಾ ಸಿದ್ಧವಾಯಿತು. 2001ರಲ್ಲಿ ತೆರೆಕಂಡ ಆ ಚಿತ್ರದಲ್ಲಿ ಅನಂತ್ ನಾಗ್, ತಾರಾ, ದೇವರಾಜ್ ಮುಖ್ಯ ಭೂಮಿಕೆ ನಿಭಾಯಿಸಿದ್ದರು.
ಎಸ್ಎಲ್ ಭೈರಪ್ಪ ಅವರು ಬರೆದ ‘ನಾಯಿ ನೆರಳು’ ಕಾದಂಬರಿಯನ್ನು ಆಧರಿಸಿ ಅದೇ ಶೀರ್ಷಿಕೆಯಲ್ಲಿ ಗಿರೀಶ್ ಕಾಸರವಳ್ಳಿ ಅವರು ಸಿನಿಮಾ ನಿರ್ದೇಶನ ಮಾಡಿದರು. ಪವಿತ್ರಾ ಲೋಕೇಶ್ ಅವರು ಪ್ರಮುಖ ಪಾತ್ರ ಮಾಡಿದ್ದರು. 2006ರಲ್ಲಿ ‘ನಾಯಿ ನೆರಳು’ ಸಿನಿಮಾ ತೆರೆಕಂಡಿತು.
‘ಗೃಹಭಂಗ’, ‘ದಾಟು’ ಕಾದಂಬರಿಗಳನ್ನು ಆಧರಿಸಿ ಟಿವಿ ಸೀರಿಯಲ್ ಮಾಡಲಾಯಿತು. ಅಲ್ಲದೇ, ಎಸ್ಎಲ್ ಭೈರಪ್ಪ ಅವರು ಬರೆದ ‘ಪರ್ವ’ ಕಾದಂಬರಿಯನ್ನು ಆಧರಿಸಿ ಪ್ರಕಾಶ್ ಬೆಳವಾಡಿ ನಾಟಕ ನಿರ್ದೇಶಿಸಿದರು. ಈ ನಾಟಕ ಹಲವಾರು ಬಾರಿ ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ.

ಡಾ.ಎಸ್.ಎಲ್. ಭೈರಪ್ಪ ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತಾದ್ಯಂತ ಸಾಹಿತ್ಯಾಸಕ್ತರಿಗೆ ಚಿರಪರಿಚಿತ ಹೆಸರು. ಕನ್ನಡ ಕಾದಂಬರಿ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.

ಭೀಮಕಾಯ(1952), ಬೆಳಕು ಮೂಡಿತು(1959), ಧರ್ಮಶ್ರೀ – (1961), ದೂರ ಸರಿದರು(1967), ಮತದಾನ (1965), ವಂಶವೃಕ್ಷ(1965), ಜಲಪಾತ (1967), ನಾಯಿ ನೆರಳು (1968), ತಬ್ಬಲಿಯು ನೀನಾದೆ ಮಗನೆ(1968), ಗೃಹಭಂಗ(1970), ನಿರಾಕರಣ-(1971), ಗ್ರಹಣ-(1972), ದಾಟು (1973), ಅನ್ವೇಷಣ(1976), ಪರ್ವ(1979), ನೆಲೆ (1983), ಸಾಕ್ಷಿ (1986) ಅಂಚು-(1990), ತಂತು (1993), ಸಾರ್ಥ(1998), ಮಂದ್ರ(2001), ಆವರಣ(2007), ಕವಲು (2010), ಯಾನ (2014) ಉತ್ತರಕಾಂಡ-(2017).

ಭೈರಪ್ಪ ಅವರಿಗೆ 2010ರಲ್ಲಿ ಸರಸ್ವತಿ ಸಮ್ಮಾನ್, 2015ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್, 2016ರಲ್ಲಿ ಪದ್ಮಶ್ರೀ, ಮತ್ತು 2023ರಲ್ಲಿ ಪದ್ಮಭೂಷಣ ಪ್ರಶಸ್ತಿಗಳು ಲಭಿಸಿವೆ. ಭೈರಪ್ಪನವರ ಕಾದಂಬರಿಗಳು ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿದ್ದು, ಅನೇಕ ಸಾರ್ವಜನಿಕ ಚರ್ಚೆಗಳಿಗೆ ಕಾರಣವಾಗಿವೆ.

94 ವರ್ಷದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರು ಒಬ್ಬ ಪ್ರಸಿದ್ಧ ಕನ್ನಡ ಕಾದಂಬರಿಕಾರ, ತತ್ವಜ್ಞಾನಿ ಮತ್ತು ಲೇಖಕರಾಗಿದ್ದು, 2023ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.

TAGGED:Bhyrappa's novels that impressed on screen too
Share This Article
Facebook Twitter Copy Link Print
Previous Article ಭೈರಪ್ಪರ ಜನಪ್ರಿಯ ಕಾದಂಬರಿಗಳ ಅನಾವರಣ… ಮರುಮುದ್ರಣ, ಕೃತಿಗಳ‌ ಕಥಾಹೂರಣ…
Next Article GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 25-09-2025, ಗುರುವಾರ, ನಿಮಗೆ ದಿಢೀರ್ ಲಾಭ!

Popular Posts

Puri Jaganath ಪುರಿ ಜಗನ್ನಾಥನ ಪ್ರಸಾದ ಆನ್‌ಲೈನ್‌ನಲ್ಲಿ ಸಿಗುತ್ತೆ ಅನ್ನೋ ಭ್ರಮೆಯಲ್ಲಿದ್ದೀರಾ? ಸೈಬರ್ ವಂಚಕರ ಬಗ್ಗೆ ಇರಲಿ ಎಚ್ಚರ

2 Min Read

Bigg Boss ಕಿರುತೆರೆಯಲ್ಲಿ ಹೊಸ ಇತಿಹಾಸ; ಸೆಪ್ಟೆಂಬರ್‌ನಿಂದ ಕನ್ನಡ ಸೇರಿ 6 ಭಾಷೆಗಳ ‘ಬಿಗ್ ಬಾಸ್’ ಒಟ್ಟಿಗೆ ಆರಂಭ

2 Min Read

Harassment Case ಮಹಿಳಾ IPS ಅಧಿಕಾರಿಗೆ ಟಾರ್ಚರ್..! ಮೈಮೇಲೆ ಕಾಂಡೋಮ್ ಎಸೆದು ಬ್ಲ್ಯಾಕ್‌ಮೇಲ್ ಮಾಡಿದ ಸಹೋದ್ಯೋಗಿ

2 Min Read

Funeral of Chennamma ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ

1 Min Read

You Might Also Like

ಕರ್ನಾಟಕಪ್ರಮುಖ

Major transfer ಗಣಿ ಇಲಾಖೆಗೆ ಮೇಜರ್ ಸರ್ಜರಿ! 160 ಅಧಿಕಾರಿಗಳ ವರ್ಗಾವಣೆ!

2 Min Read
ಪ್ರಮುಖಆರೋಗ್ಯ

Microplastics In Blood ನಿಮ್ಮ ರಕ್ತದಲ್ಲೂ ಇರಬಹುದು ಪ್ಲಾಸ್ಟಿಕ್ ಕಣ..! ಹಾರ್ಟ್ ಅಟ್ಯಾಕ್ ರೋಗಿಗಳ ರಕ್ತದಲ್ಲಿ ಪತ್ತೆಯಾಯ್ತು ಮೈಕ್ರೋಪ್ಲಾಸ್ಟಿಕ್

2 Min Read
ಪ್ರಮುಖದೇಶ

First Dengue Vaccine ಡೆಂಗ್ಯೂ ಕಾಟಕ್ಕೆ ಇನ್ಮುಂದೆ ಗುಡ್‌ಬೈ; ದೇಶದ ಮೊದಲ ‘QDENGA’ ಲಸಿಕೆಗೆ ಡಿಸಿಜಿಐ ಗ್ರೀನ್ ಸಿಗ್ನಲ್

1 Min Read
ಪ್ರಮುಖಕರ್ನಾಟಕ

Rain Alert ಮುಂದುವರಿದ ವರುಣನ ಆರ್ಭಟ; ನಾಳೆ ರಾಜ್ಯಕ್ಕೆ ‘ಯೆಲ್ಲೋ ಅಲರ್ಟ್’ ಘೋಷಣೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?