newsics.com
ಸಾಮಾನ್ಯವಾಗಿ ಪಾನಿಪುರಿ ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲಿಯು ಹೆಣ್ಣುಮಕ್ಕಳಿಗೆ ಗೋಲ್ಗಪ್ಪ ಅಂದರೆ ಪಂಚಪ್ರಾಣವೇ ಆಗಿರುತ್ತೆ. ಆದರೆ ಮಹಿಳೆಯೊಬ್ಬಳು ಪಾನಿಪುರಿಗಾಗಿ ನಡುರಸ್ತೆಯಲ್ಲಿ ಧರಣಿ ಕುಳಿತಿದ್ದಾಳೆ.ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗುಜರಾತ್ನ ವಡೋದರಾದ ಮಹಿಳೆಯೊಬ್ಬರು ತಮ್ಮ ನಿವಾಸದ ಸಮೀಪ ಇರುವ ಸುರಸಾಗರ ಸರೋವರ ಬಳಿ ಪಾನಿಪುರಿ ತಿನ್ನಲು ಹೋಗಿದ್ದಾರೆ. ಸುರಸಾಗರ ಸರೋವರ ಬಳಿಯ ಅಂಗಡಿಯಲ್ಲಿ 20 ರೂಪಾಯಿಗೆ 6 ಪಾನಿಪುರಿಗಳು ಕೊಡಲಾಗುತ್ತದೆ. ಆದರೆ ಮಹಿಳೆ ಪಾನಿಪುರಿ ತಿನ್ನುವಾಗ ಕೇವಲ ನಾಲ್ಕೇ 4 ಪಾನಿಪುರಿಗಳನ್ನು ಅಂಗಡಿಯವನು ಕೊಟ್ಟಿದ್ದಾನಂತೆ.
ಹೀಗಾಗಿ ಮಹಿಳೆ ಇನ್ನೆರಡು ಪಾನಿಪುರಿಗಾಗಿ ರಂಪಾಟ ಮಾಡಿದ್ದಾಳೆ. ನೀನು 4 ಪಾನಿಪುರಿ ಹಾಕಿರುವುದು. 6 ಪಾನಿಪುರಿ ಹಾಕಿಲ್ಲ ಎಂದು ಮಹಿಳೆ ಕಣ್ಣೀರು ಹಾಕಿದ್ದಾಳೆ. ತಾನು ಕಳೆದುಕೊಂಡ ಎರಡೇ 2 ಪಾನಿಪುರಿಗಾಗಿ ಮಹಿಳೆ ರಸ್ತೆ ಮಧ್ಯೆ ಕುಳಿತು ಧರಣಿ ಆರಂಭಿಸಿದ್ದಾಳೆ. ಆ ಎರಡು ಪಾನಿಪುರಿ ಕೊಡುವವರೆಗೂ ನನ್ನ ಧರಣಿ ಮುಂದುವರೆಯುತ್ತದೆ ಎಂದು ಕಣ್ಣೀರು ಇಡುತ್ತ ಹೇಳಿದ್ದಾಳೆ.
ಸವಾರರು ರಸ್ತೆ ಮಧ್ಯೆ ಆಕೆ ಕುಳಿತ್ತಿದ್ದರಿಂದ ಮೆಲ್ಲಗೆ ಪಕ್ಕದಿಂದ ಹಾದು ಹೋಗಿದ್ದಾರೆ. ಆದರೂ ಟ್ರಾಫಿಕ್ ಬಿಸಿ ಜೋರಾಗಿತ್ತು. ಹೀಗಾಗಿ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಏನು ಎಂದು ಆ ದಡೂತಿ ಮಹಿಳೆಯನ್ನು ಕೇಳಿದ್ದಾರೆ. ಅದಕ್ಕೆ 20 ರೂಪಾಯಿಗೆ 6 ಪಾನಿಪುರಿ ಕೊಡಬೇಕು. ಆದ್ರೆ 4 ಕೊಟ್ಟಿದ್ದಾನೆ. ಇನ್ನು ಎರಡು ಕೊಡುತ್ತಿಲ್ಲ ಎಂದು ಮಹಿಳೆ ಪೊಲೀಸರ ಎದುರು ಕಣ್ಣೀರು ಹಾಕುತ್ತ ಹೇಳಿದ್ದಾಳೆ.